ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ

ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ

ಕವನ

ಕಾಡಿಗೆ ಹಚ್ಚಿದ ಮೋಡ;

ಮಳೆಯ ಸುಳಿವಿಲ್ಲ

ಬರಡು ನೆಲ

 

ನೆತ್ತರುಗೆಂಪಿನ ಚಂದ್ರ

ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ.

 

ಸ್ವರ್ಗಲೋಕದ ಬೆಳಕು

ಕೈಯಂಚಿಗೆ ತಾಗಿ ಅದೃಶ್ಯ

 

ಮನದ ಸಮುದ್ರದಲ್ಲಿ

ಶವರೂಪಿ ಬಣ್ಣದ ಮೀನುಗಳು;

 

ಮತ್ತೆ  ಬಿರಿಯುವುದಿಲ್ಲ

ಮಲ್ಲಿಗೆ....!

 

Comments