ಎನುವನೇನೋ
ದೇವರೆಂದರೆ ಭಾರೀ ಭಕ್ತಿ ಕೆಲವರಿಗೆ
ನಸುಕಿನಲ್ಲೇ ಯಾರದೋ ಮನೆಯ
ಆವರಣದೊಳಗಿನ ಹೂಗಳನು
ಕಿತ್ತು ತಂದು ಪೂಜಿಸುವರು
" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,
ಹೂವ ಕೊಯ್ಯುವವರು ಯಾರೋ "
ಗಿಡಗಳಲರಳಿ ನಳನಳಿಸುತ
ಕಂಪ ಬೀರುತಿರಲಿ
ಒಂದಷ್ಟು ದೇವರ ಪೂಜೆಗಿರಲಿ
ಎನ್ನುವ ಅಕೆಯ ಸಂಕಟದ ನುಡಿಗಳು
" ಅಲ್ಲಿಯಾದರೂ ದೇವರಿಗೇ
ಅರ್ಪಿತವಾಗುವುದು ತಾನೇ "
ನಿಟ್ಟುಸಿರಿನೊಂದಿಗೆ ಆತನ
ಸಾಂತ್ವನದ ನುಡಿಗಳು
ಮೂಡಲಿ ಭಾವ
‘ ಮೊದಲು ಮನಗಳ ತಂಪಾಗಿಸು ’
ಎನುವನೇನೋ ಆ ದೇವ
Rating
Comments
ಉ: ಎನುವನೇನೋ
In reply to ಉ: ಎನುವನೇನೋ by sathishnasa
ಉ: ಎನುವನೇನೋ
ಉ: ಎನುವನೇನೋ
In reply to ಉ: ಎನುವನೇನೋ by makara
ಉ: ಎನುವನೇನೋ