ಭಾವದ ಬಣ್ಣ ಕರಗಿದಾಗ

ಭಾವದ ಬಣ್ಣ ಕರಗಿದಾಗ

 ಮನದ ಮಾತನ್ನು ಭಾವನೆಗಳ ಬಣ್ಣ ಬಳಸಿ

ಬರೆದು ನಿನಗೆ ಕಳುಹಿಸಿದೆ 

ಲಕೋಟೆಯ ಮೇಲಿನ ನನ್ನ ಹೆಸರು ಓದಲು 

ನೀನ್ಯಾಕೆ ಕಣ್ಣೀರು ಸುರಿಸಿದೆ 

ಒಳಗಿನ ಬಣ್ಣಗಳು ಅಳಿಸಿಹೊದವು 

ಖಾಲಿ ಹಾಳೆಯ ನೋಡಲು ನೀನಂದುಕ್ಕೊಂಡೆ

ನೀನಿಲ್ಲದ ನಾನೂ ಖಾಲಿ ಹಾಳೆ 

ಭಾವದ ಬಣ್ಣಗಳು ಮಾಡುವ ಕೆಲಸವನು 

ಆ ಜಾರುವ ಕಣ್ಣೀರು ಮಾಡಿತ್ತು ...

 

 

Rating
No votes yet

Comments