ಸೃಷ್ಟಿ ನೆಲೆ -ನೀತಿ
ಮಸೆದು ಕತ್ತಿಯ,
ಬದುಕ ಹೊಸೆದು
ಹಾಕುವ ಹುನ್ನಾರದಲಿ
ಅಣಿಯಾಗಿದೆ ಕೈಯ್ಯೊಂದು
ಬಲಿಯ ರುಂಡ ಮುಂಡ
ಚೆಂಡಾಡಲು....ಗಹಗಹಿಸುತ....
ಇಣುಕಿದೆ ಅಟ್ಟಹಾಸ
ಸ್ವಾರ್ಥದ ಸಾಧನೆಗೆ
ಪರಮಾರ್ಥದ ಲೇಪನ.....
ಉಳಿವಿಗಾಗಿ ಬಲಿಯ ಹುಡುಕು
ಅದುವೇ ಪ್ರಾಣಿ-ಧರ್ಮವು.
ಬಲಿಯ ಕೊಟ್ಟು ನಲಿವ ಹುಡುಕು
ಅದುವೇ ಮನುಜ-ಮರ್ಮವು...
ನಮ್ಮ ಬದುಕಿಗೊಂದು ರೀತಿ
ಅವರ ಜೀವಕೊಂದು ನೀತಿ
ಮುಗ್ಧ ಜೀವಕಿಲ್ಲ ಬೆಲೆಯು
ನಿನ್ನ ಸೃಷ್ಟಿ ನೆಲೆಯಲಿ.......
Rating
Comments
ಉ: ಸೃಷ್ಟಿ ನೆಲೆ -ನೀತಿ : ಸಖತ್...
In reply to ಉ: ಸೃಷ್ಟಿ ನೆಲೆ -ನೀತಿ : ಸಖತ್... by venkatb83
ಉ: ಸೃಷ್ಟಿ ನೆಲೆ -ನೀತಿ : ಸಖತ್...
ಉ: ಸೃಷ್ಟಿ ನೆಲೆ -ನೀತಿ
In reply to ಉ: ಸೃಷ್ಟಿ ನೆಲೆ -ನೀತಿ by ಗಣೇಶ
ಉ: ಸೃಷ್ಟಿ ನೆಲೆ -ನೀತಿ