ಜಾತಿ ರಾಜಕಾರಣವಲ್ಲ; ಬಲಹೀನ ಪಕ್ಷದ ಪಾಳೆಗಾರರ ಆಟ!

ಜಾತಿ ರಾಜಕಾರಣವಲ್ಲ; ಬಲಹೀನ ಪಕ್ಷದ ಪಾಳೆಗಾರರ ಆಟ!

Comments

ಬರಹ

ಗೌಡರು ಹೋದರು, ಲಿಂಗಾಯತರು ಬಂದರು. ಗೌಡರೋ, ಕುರುಬರೋ,ದಲಿತರೋ, ಬ್ರಾಹ್ಮಣ ಅಲ್ಪಸಂಖ್ಯಾತರೋ ಉಪ-ಮುಖ್ಯಮಂತ್ರಿಯೋ(ಗಳೋ), ಪಕ್ಷದ ರಾಜ್ಯಾಧ್ಯಕ್ಷರೋ ಆದಾರು. ಈ "ಜಾತಿ ರತ್ನ"ಗಳೆಲ್ಲಾ ಬಿಜೆಪಿ ಪಕ್ಷದ ಮುಖಂಡಮಣಿಗಳು. ಎನ್ನುವುದನ್ನು ಮರೆಯದಿರೋಣ. ಗೌಡ, ಕುರುಬ, ಲಿಂಗಾಯತಾದಿಗಳು ಬೇರೆ ಪಕ್ಷಗಳಲ್ಲೂ ಇದ್ದಾರೆ; ಪಕ್ಷ ರಾಜಕೀಯದ ಹೊರಗೂ ಇದ್ದಾರೆ.ಬಿಜೆಪಿಯೆನ್ನುವುದು ಇವರೆಲ್ಲರ ಸಮಗ್ರ ಪ್ರಾತಿನಿಧಿಕ ಸಂಸ್ಥೆಯಲ್ಲ. ಯಾರೋ ಶೆಟ್ಟರೆಂಬುವವರು ಲಿಂಗಾಯತರಾದ ಕಾರಣ ಮಾತ್ರದಿಂದ ಮುಖ್ಯಮಂತ್ರಿಯಾದರೆ, ಬಿಜೆಪಿ ಲಿಂಗಾಯತ ’ಗುಂಪುಗುಳಿಗಳು’ ಹರ್ಷ ಆಚರಿಸಬಹುದೇ ಹೊರತು, ಇಡೀ ಲಿಂಗಯತ ಸಮುದಾಯವೇ ಕುಣಿದು-ಕುಪ್ಪಳಿಸಬೇಕಾದ್ದಿಲ್ಲ! ಕರ್ನಾಟಕದ ಇಡೀ ಬಾಲಿಶ ರಾಜಕೀಯ ವಿದ್ಯಮಾನ, ಒಬ್ಬಿಬ್ಬ ಪಾಳೇಗಾರರ ಹಿಡಿತಕ್ಕೆ ಸಿಕ್ಕ ಬಲಹೀನ ರಾಷ್ಟ್ರೀಯ ಪಕ್ಷದ ನೀರ್ವೀರ್ಯತೆನ್ನು ತೋರಿಸುತ್ತಿದೆಯೇ ಹೊರತು ಇದನ್ನು "ಜಾತಿ ರಾಜಕಾರಣ" ಎಂದು ಬಣ್ಣಿಸುವುದೇ ತಪ್ಪಾಗುತ್ತದೆ! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet