ಬಾಳ ನೌಕೆ ದಿಕ್ಸೂಚಿ !

ಬಾಳ ನೌಕೆ ದಿಕ್ಸೂಚಿ !

ಕವನ

ನಮ್ಮೊಲುಮೆಯ  ಬಾಳ  ನೌಕೆಯೆಲಿ


ದಿಕ್ಸೂಚಿಯಾಗಿ ನಲ್ಲೆ  ನೀನಿರಲು


ನನಗೇಕೆ ಚಿಂತೆ ಕೊರತೆ ಪಯಣದಲಿ


ದೂರ ತೀರದ ಬಾಳ ಸೌಧ ಸೇರಲು.


 


ಬಾಳ ಯಾತ್ರೆಗೆ ನಿನ್ನ ಕಾಣಿಕೆ ಅನುಪಮ


ಪ್ರೀತಿ ಪ್ರೇಮ ನಿನ್ನ ದೃಷ್ಟಿ  ಕೋನ


ನಿನ್ನ ಮಾತು-ನೀತಿ ಬಾಳ್ವೆಗೆ  ನಿಯಮ


ಜೀವನ ಚೈತ್ರೋತ್ಸವಕ್ಕಿಂದು ನೀ ಪೂರ್ಣ ಚಂದ್ರ ಹೋಂಗಿರಣ.


 


ಬಾಳ ನಭದಿ ಮೋಡವಾಗಿ ಬಂದೆ ನೀನು


ಮಳೆಯ ರಭಸವಿಲ್ಲ  ಬಿರುಗಾಳಿಯ ಬಿರುಸಿಲ್ಲ


ಅಸ್ತಂಗತ ರವಿಓಕುಳಿಯ ದಿಗಂತದಲಿ


ನವರಸ  ಚಿತ್ರಿಸಿದೆ  ನೀ ವರ್ಣ ಕುಂಚದಲಿ !


ಶ್ರೀ ನಾಗರಾಜ್.    

Comments