ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
ನೀನು ಬಡವನಾಗಿಯೇ ಇರು,
ಮಾನ ಮುಚ್ಚಲು ಬಟ್ಟೆ ಇಲ್ಲದೆ ಇರು,
ಇರಲು ಒಂದು ಗುಡಿಸಲೂ,
ಕುಡಿಯಲು ಒಂದಿಷ್ಟು ನೀರು ಬೇಡ ನಿನಗೆ,
ಒಂದೇ ಹೊತ್ತಿನ ಹಸಿವು ನೀಗಿಸಲೂ ನಿನಗೆ ಅನ್ನ ಸಿಗದಿರಲಿ,
ಮನೆಯ ತುಂಬಾ ಕತ್ತಲಿರಲಿ,
ರೇಶನ್ ಅಂಗಡಿಯ ಅಕ್ಕಿಯ ತುಂಬಾ ಕಲ್ಲಿರಲಿ
ನಿನ್ನ ಮಕ್ಕಳಿಗೆ ಶಾಲೆ ಗೀಲೆಯಾಕೆ
ನಿನ್ನ ಮೈತುಂಬ ಸಾಲವಿರಲಿ
ನಿನಗೆ ದಿನವೂ ಆತ್ಮಹತ್ಯೆ ಮಾಡಿಕೊಳ್ಳುವ ದುಃಖ ಬರಲಿ
ನಿನ್ನ ಹೆಂಡತಿ ಬೇರೆಯವರ ಹೊಲಗಳಲಿ ದುಡಿದು ಸೊರಗಲಿ
ಬದುಕೆಲ್ಲ ಯಾರದೋ ಮನೆಯ ಕಸಮುಸುರೆ ಮಾಡಿ ಮಾಡಿ ಸಾಯಲಿ
ಬೆಳದು ನಿಂತ ಮಗ ನಿರುದ್ಯೋಗಿಯಾಗಿ ಕೊರಗಲಿ
ಆಸ್ಪತ್ರೆಯ ಔಷದಿಗಿಂತ ದರವಿಲ್ಲದ ಸಾವೇ ಸಿಗಲಿ ನಿನಗೆ
ಮತ್ತು ನಿನ್ನ ಮನೆಯವರಿಗೆ.
ಯಾಕೆ ಬೇಕು ನಿನಗೆ ಸೌಲಭ್ಯಗಳು
ಮೆತ್ತಿಕೋ ಸಿಗರೇಟು, ಇಸ್ಪೀಟು, ಕುಡಿತದ ಅಭ್ಯಾಸಗಳು
ಅಲ್ಲಿ ಇಲ್ಲಿ ಬಿಕ್ಷೆ ಬೇಡಿ, ಸಾಲ ಸೂಲ ಮಾಡಿ
ಲಂಚ ಕೊಡುವುದ ಕಲಿ.
ಹೋರಾಟ ಚಳುವಳಿ ಬಿಟ್ಟು ಹೆಂಡತಿಯ ಜೊತೆಗೆ ಜಗಳವಾಡು.
ಅವರು ಜಾಗದ ಜೊತೆ ನಿನ್ನ ಬದುಕೂ ಡಿನೋಟಿಫಿಕೇಷನ್ ಗೆ ಹಾಕುತ್ತಾರೆ
ಅವರು ಹೊಟ್ಟೆ ತುಂಬ ಉಂಡು, ತೇಗಿ,
ತಮ್ಮ ತುಂಬಿದ ಉಗ್ರಾಣಗಳನು ಇನ್ನೂ ತುಂಬಿಸಿಕೊಳ್ಳುತ್ತಾರೆ,
ತಮ್ಮ ಮನೆಯ ಬಂಗಾರ ಆಭರಣ ಕೇಜಿಯಲ್ಲಿ ತೂಗುತ್ತಾರೆ
ಆಸ್ತಿ ಪಾಸ್ತಿ, ಕಾರು ಬಂಗಲೆ ಮಾಡುತ್ತಾರೆ
ತಮ್ಮ ಹೆಂಡತೀಯರಿಗೆ ಸಾವಿರಾರು ಜರತಾರಿ ರೇಶಿಮೆ ಸೀರೆ ಕೊಡಿಸುತ್ತಾರೆ
ನೀನು ನಿನ್ನ ಹೆಂಡಿರ ಮಕ್ಕಳ ಹರಿದ ಸೀರೆ ಕುಪ್ಪಸ ನೋಡಿ
ಸುಮ್ಮನೆ ನಾಚಿಕೆಯಿಲ್ಲದೆ ಹಲ್ಲು ಖಿಸಿ
ಬರುತ್ತಾರವರು ಮತ್ತಿನಲಿ, ನಿನಗೆ ಮತ್ತಿಗೇರಿಸಿ
ನಿನ್ನ ಕಾಲು ಹಿಡಿದು ವೋಟು ಕೇಳಲು
ನೀನು ವೋಟು ಹಾಕಿ ನಾಯಿಯಂತೆ ಅಲೆದಾಡುವೆ
ಅವರು ವೋಟು ಹಾಕಿಸಿಕೊಂಡು ಸೀಟ್ ಗಾಗಿ,
ಸ್ಥಾನಕ್ಕಾಗಿ ನಾಯಿಯಂತೆ ಕಚ್ಚಾಡುವರು
ಯಾರಿಗೆ ಎಚ್ಚರಿಕೆ ಹೇಳಬೇಕೆಂದು ತಿಳಿಯದೆ
ನಾನು ಹೀಗೆಲ್ಲ ಬೊಗಳಿ ಬಿಟ್ಟೆ …
ರಾಜೇಂದ್ರಕುಮಾರ್,ರಾಯಕೋಡಿ
Copyright©
Comments
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
In reply to ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ by swara kamath
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
In reply to ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ by manju787
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ
In reply to ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ by Sheshadri.CV
ಉ: ಮುಖ್ಯಮಂತ್ರಿ ಪೀಠವೂ, ಸನ್ಮಾನ್ಯ ಶ್ರೀಸಾಮಾನ್ಯನೂ