"ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ
ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣಗಳ ಸಂಸ್ಥೆ ಒಕ್ಕೂಟ, ರಾಜ್ಯ ಸರಕಾರದ ಸಕ್ರಿಯ ಪ್ರತಿಭಟನೆ - ಬ್ಲ್ಯಾಕ್‌ಮೇಲ್ - ಕೈಗೊಂಡಿದೆ. ಅದು ಕೊಟ್ಟಿರುವ "ನೆಪ"ವೇನೋ, ಸಮಂಜಸವೇ. ಆದರೆ ಸಮಗ್ರ ದೃಷ್ಟಿಯಿಂದ ಇದು ಶಿಕ್ಷಣ ಷಾರ್ಕ್‌ಗಳ "ಕೊಬ್ಬು".
ಖಾಸಗಿ ಪ್ರಿ-ನರ‍್ಸರಿ, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಂಸ್ಥೆಗಳು, ಅದರಲ್ಲೂ ಸರಕಾರದ ಅನುದಾನವನ್ನು ತುಚ್ಛೀಕರಿಸುವವು, ಮಾಲ್‌ಗಳಲ್ಲಿನ ಕುರಕು ತಿಂಡಿ ಮಳಿಗೆಗಳಂತೆ ಇಂಗ್ಲಿಷ್ ಮೀಡಿಯಂ ಮತ್ತು ಕೇಂದ್ರದ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಎನ್ನುವ ಅಶೈಕ್ಷಣಿಕತೆಯನ್ನು ಮಾರಾಟ ಮಾಡುತ್ತವೆ; ಮೂರ್ಖ, ಅಸಂಸ್ಕೃತ, ಶ್ರೀಮಂತ ತಾಯ್ತಂದೆಯರು, ದುಪ್ಪಟ್ಟು, ಮುಪ್ಪಟ್ಟು ಶುಲ್ಕ ತೆತ್ತು, ಹೆಮ್ಮೆ ಪಡುತ್ತಾರೆ.
ಶಾಲಾಶಿಕ್ಷಣ ಕಡ್ಡಾಯದಂತೆಯೇ ’ಉಚಿತ’ ಸಹ. ಇದು ರಾಜ್ಯ ಸರಕಾರಗಳಿಗೆ "ವಿಧಿ". ಪ್ರಾಥಮಿಕ ಶಿಕ್ಷಣವೆನ್ನುವುದು ಪ್ರಾದೇಶಿಕ ಪರಿಸರಕ್ಕೆ ಮಕ್ಕಳನ್ನು "ಸಂಸ್ಕೃತೀಕರಿಸುವ" ಹಂತ. ಅದು ಸಂಪೂರ್ಣವಾಗಿ, ರಾಜ್ಯ ಸರಕಾರಗಳ ಕೈವಶದಲ್ಲಿಬೇಕು. ಕೇಂದ್ರ ಬೇಕಾದರೆ, ವಿವಿಧ ರಾಜ್ಯ ಸಿಲಬಸ್‌ಗಳ ನಡುವೆ ಪ್ಯಾರಿಟಿ ಸೂತ್ರ ಕಡ್ಡಾಯ ಮಾಡಬಹುದು. ಆದರೆ ಈಗ, ಕೇಂದ್ರದ ಹಸ್ತಕ್ಷೇಪ ಮತ್ತು ಖಾಸಗಿ ಶಾಲೆಗಳಿಗೆ ನೀಡುವ ಪರೋಕ್ಷ ಕುಮ್ಮಕ್ಕಿನಿಂದಾಗಿ,ರಾಜ್ಯಗಳ ಜವಬ್ದಾರಿ ಎಡವಟ್ಟು.
ಈ ಸನ್ನಿವೇಶದಿಂದಾಗಿ ಪ್ರಾಥಮಿಕ ಶಿಕ್ಷಣದ ಕಡ್ಡಾಯವೂ, ಭಾಷಾವಾರು ಪ್ರಾಂತ ವಿಂಗಡಣೆ ಘನೋದ್ದೇಶವೂ ವ್ಯರ್ಥವಾಗಿಹೋಗಿದೆ.
Comments
ಉ: "ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ
ಉ: "ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ
ಉ: "ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ
In reply to ಉ: "ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ by mnsrao
ಉ: "ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ