ಯಾರು ಉತ್ತಮ ಅಭ್ಯರ್ಥಿ? - ಜಮಾನಾದ ಜೋಕುಗಳು - ೪

ಯಾರು ಉತ್ತಮ ಅಭ್ಯರ್ಥಿ? - ಜಮಾನಾದ ಜೋಕುಗಳು - ೪


    ಒಮ್ಮೆ ಐದು ವರ್ಷಕ್ಕೊಂದಾವರ್ತಿ ಬರುವ ಎಲೆಕ್ಷನ್ (ಇಲೆಕ್ಷನ್) ಬಂತು. ಎಲೆಕ್ಷನ್ ಬಂತೆಂದರೆ ಸಾಕು ನಮ್ಮ ರಾಜಕಾರಣಿಗಳ ಬಾಯಿಂದ ಪುಂಖಾನು:ಪುಂಖವಾಗಿ ಆಶ್ವಾಸನೆಗಳ ಮಳೆ ಸುರಿಯುತ್ತದೆ, ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ. ಒಂದು ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು, ಅವರು ಒಬ್ಬರಿಗಿಂತ ಒಬ್ಬರು ಆಶ್ವಾಸನೆ ಕೊಡುವುದರಲ್ಲಿ ಶೂರರು. ಒಬ್ಬನೆಂದ, "ಈ ಬಾರಿ ನನ್ನನ್ನು ಆರಿಸಿ ಕಳುಹಿಸಿದರೆ ನಿಮ್ಮ ಊರ ಮೇಲಿಂದ ಬಸ್ ಹೋಗುವಂತೆ ಮಾಡುತ್ತೇನೆ." ಎರಡನೆಯವನೇನು ಕಮ್ಮಿಯೆ, ಅವನೆಂದ, "ಈ ಬಾರಿ ನನ್ನನ್ನು ಆರಿಸಿ ಕಳುಹಿಸಿದರೆ ನಿಮ್ಮ ಊರ ಮೇಲಿಂದ ರೈಲು ಹೋಗುವಂತೆ ಮಾಡುತ್ತೇನೆ". ಇವರಿಬ್ಬರೂ ಇಷ್ಟು ಹೇಳಿದ ಮೇಲೆ ಮೂರನೆಯವನು ಸುಮ್ಮನಿರುತ್ತಾನೆಯೇ, "ಈ ಬಾರಿ ನನ್ನನ್ನು ಆರಿಸಿ ಕಳುಹಿಸಿದರೆ, ನಿಮ್ಮ ಊರ ಮೇಲಿಂದ ಏರೋಪ್ಲೇನ್ ಹೋಗುವಂತೆ ಮಾಡುತ್ತೇನೆ" ಈ ಮೂರನೆಯ ಅಭ್ಯರ್ಥಿಯೇ ಉಳಿದವರಿಗಿಂತ ಶ್ರೇಷ್ಠನಾದ್ದರಿಂದ ಜನ ಇವನನ್ನೇ ಆರಿಸಿ ಕಳುಹಿಸಿದರು.

ವಿ.ಸೂ.: ಇದನ್ನು ಓದಿದ ಮೇಲೆ "ಯಾರು ಹಿತವರು ನಿನಗೆ ಈ ಮೂವರೊಳಗೆ" ಎಂಬ ಹಾಡು ನಿಮಗೆ ಜ್ಞಾಪಕವಾದರೆ ಅದರ ಹೊಣೆ ನನ್ನದಲ್ಲ :))


 

Rating
No votes yet

Comments