ನಿರೀಕ್ಷೆಯಲ್ಲಿ..
ಬರಹ
ನೀ ಆಡಿದ ಮಾತುಗಳು
ಕೇಳಲು ಮನಕೆ ಹಿತಕರ
ನಿನ್ನ ತುಂಟ ನಗುವನ್ನು
ಮತ್ತೆ ನೋಡುವ ಕಾತರ
ನೀ ಮಾಡಿದ ತಮಾಷೆಗಳನು
ನಗಲು ಇರದೆಯೂ ನಕ್ಕಿದ್ದು
ನೀ ಮಾಡಿದ ಅಡುಗೆಯನು
ಪ್ರತಿವಾರ ತಿಂದು ತೇಗಿದ್ದು
ಕ್ರಿಕೆಟ್ ಮ್ಯಾಚುಗಳನು
ಕೂಡಿ ಕುಣಿಯುತ್ತ ನೋಡಿದ್ದು
ಚಿಕ್ಕ ಚಿಕ್ಕ ಮುನಿಸುಗಳು
ದೊಡ್ಡ ದೊಡ್ಡ ಮಷ್ಕಿರಿಗಳು
ಸಂತೋಷದ ದಿನಗಳು ಒಂದೇ ಎರಡೇ ?
ಈಗ ಆ ದಿನಗಳೆಲ್ಲ ತಿರುಗಿ ಮತ್ತೆ ಬರುವುದೇ?
ಬಾರದ ಲೋಕಕೆ ಹೋಗುವೆ ನೀ
ಎಂಬ ವಿಚಾರ ಸಹ ಸುಳಿದಿಲ್ಲ ಆಗ
ಈ ಲೋಕದಲಿ ಇಲ್ಲ ನೀ
ಎಂಬ ವಿಚಾರ ಸಹ ಬರುತಿಲ್ಲ ಈಗ
ಗೆಳೆಯಾ
ಕಳೆಯಲಾಗದ ದಿನಗಳನು
ಮರೆಯಲಾಗದ ನೆನಪುಗಳನು
ದೂಡಿಸಿಕೊಂಡು ಹೋಗಲು
ಮತ್ತೆ ಹುಟ್ಟಿ ಬರುವೆಯಾ?
ನಿನ್ನ ನಿರೀಕ್ಷೆಯಲ್ಲಿ..