ಕುಬೇರನ ಸಾಲದ ಕತೆ

ಕುಬೇರನ ಸಾಲದ ಕತೆ

ಬರಹ

  ಏಳುಬೆಟ್ಟದ ದೇವ ಶ್ರೀನಿವಾಸ, ಪದ್ವಾವತಿ ದೇವಿಯೊಂದಿಗಿನ ಪರಣಯಕ್ಕಾಗಿ ಕುಬೇರನಿಂದ ಅಪಾರ ಪ್ರಮಾಣದ ಸಾಲ ಮಾಡಿದ್ದನಂತೆ. ಭಕ್ತರ ಕಾಣಿಕೆಯಿಂದ ಅದನ್ನು ತೀರಿಸಲಾಗುತ್ತಿದೆಯಂತೆ. ಈಗ ತಿರಪತಿ ತಿರುಮಲ ದೇವಸ್ಥಾನದ ಎಲ್ಲಾ ಆಯ-ವ್ಯಯದ ಕಾರಬಾರು ನೋಡಿಕೊಳ್ಳುತ್ತಿರುವುದು ತಿರುಪತಿ-ತಿರುಮಲ ದೇವಸ್ಥಾನ ಟ್ರಸ್ಟ್‌. ಅದು ಆಂಧ್ರ ಪ್ರದೇಶ ಸರಕಾರಕ್ಕೆ ಬದ್ದವಾದ ಸ್ವಾಯತ್ತ ಮಂಡಲಿ. ಅದು ಶ್ರೀವಾರಿಯವರ ಕಡೆಯಿಂದ  ಕುಬೆರ ಮಹನೀಯನಿಗೆ ತೀರಿಸಿದ ಸಾಲ-ಬಡ್ಡಿ ವಿವರಗಳನ್ನೊದಗಿಸಬೇಕು ಎಂದು, ಬೆಂಗಳೂರಿನ ನರಸಿಂಹಮೂರ್ತಿ ಎನ್ನುವವರು ಮಹಿತಿ ಹಕ್ಕು ಕಾಯ್ದೆಯಡಿ ಕೋರಿಕೆ ಸಲ್ಲಿಸಿದ್ದಾರೆಂದು ಜುಲೈ 18ರ ಉದಯವಾಣಿ ವರದಿ ಮಾಡಿದೆ.
 ಈ ಅಭಿನಂದನೀಯ ಕ್ರಮ, ಆ ಮಹಾಶಯರ ನೈಜ ಆಸ್ತಿಕತೆನ್ನು ತೋರಿಸುತ್ತದೆ. ಇಂತಹ ಹಕ್ಕೊತ್ತಾಯ, ಬೊಗಳೆ ಬದುಕಿನ ಟಿಟಿಡಿಯನ್ನು ತಬ್ಬಿಬ್ಬುಗೊಳಿಸಿರಲೇ ಬೇಕು! 
 ಯೇಸುಕ್ರಿಸ್ತನ ವಿರುದ್ಧ ಕುತಂತ್ರಗಳು, ’ಆತ ರಾಜದ್ರೋಹದ ಭಷಣಗಳನ್ನು ಮಡುತ್ತಿದ್ದಾನೆ; ತೆರಿಗೆ ಕೊಡದಂತೆ ಜನರನ್ನು ಬಂಡೆಬ್ಬಿಸುತ್ತಿದ್ದಾನೆ’ ಎಂದು ಪುಕಾರೆಬ್ಬಿಸಿದಾಗ, ಕ್ರಿಸ್ತ, ’ಸೀಸರನದ್ದು ಸೀಸರಿನಿಗೇ ಕೊಡಿ; ದೇವರದು ದೇವರಿಗೆ...’ ಎಂದು ಸ್ಷ್ಟೀಕರಣ ನೀಡಿದ್ದನಂತೆ. ಹಾಗೆಯೇ ಇಲ್ಲಿ ಸಹ ಶ್ರೀವಾರಿಯವರ ’ಕಲೆಕ್ಷನ್’ ಲೌಕಿಕ; ಕುಬೇರನ ಸಾಲ ಎಂಬುದು ಬುರುಡೆ ಪುರಾಣ.ಇದೆರಡರ ಅಸಮಂಜಸ ಬೆರಕೆ ಪ್ರಶ್ನಾರ್ಹವೇ ಹೌದು. ನರಸಿಂಹಮೂರ್ತಿಯವರು ಅದನ್ನು ಕೇಳುವ ವಿವೇಕ ಮೆರೆದಿದ್ದರೆ!

  ಕುಬೇರನ ಸಾಲ, ಕಾಯ್ದೆಗೆ ಎಷ್ಟೋ ಮುಂಚಿನದು; ಅದು, ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲವೆಂದು ಸುಲಭವಾಗಿ ಜಾರಿಕೊಳ್ಳುವ ಅವಕಾಶವೇನೋ ಮಂಡಲಿಗೆ ಇದೆ. ಆದರೆ ’ಅಂತರಂಗ ಸತ್ಯ’ ಎಂಬುದೂ ಒಂದಿರುತ್ತದಲ್ಲಾ!

  ದೈವೀಕ ನಂಬಿಕೆ, ಕುಬೇರ ಸಾಲದಂತಹ ಬುರುಡೆ ಪುರಾಣದಿಂದ ಬರುವುದಲ್ಲ. ಇದೆಲ್ಲಾ ಕಾಸಿನಾಸೆಗೆ ನಾಲಗೆ ಚಾಚುವ ಭಟ್ಟ-ಪುರೊಹಿತಾದಿಗಳ ಉವಾಚಗಳು. ಅಂದಮಾತ್ರಕ್ಕೆ ಪುರಾಣವೆಂಬುದೆಲ್ಲಾ ಬುರುಡೆಯಲ್ಲ ಎನ್ನುವುದನ್ನು ಮರೆಯಬಾರದು. ಪ್ರಹ್ಲಾದನ ಕತೆಯಲ್ಲಿ, ದೇವರ ಸರ್ವವ್ಯಾಪಕತ್ವವನ್ನು, ಧೃವನ ದೃಢತೆಯಲ್ಲಿ, ಪುರುಷಪ್ರಯತ್ನ ಅಗಾಧ ಸಾಧ್ಯತೆಯನ್ನು, ಕರಿರಾಜನ ಕತೆಯಲ್ಲಿ, ಜಗನ್ನಿಯಾಮಕನ ನಿಯಮದೆದುರು, ಜೀವಿಯ ನಿಸ್ಸಹಾಯಕತೆಯನ್ನು, ವ್ಯಾಸರು ಭಾಗವತದಲ್ಲಿ ಪ್ರತಿಪಾದಿಸಿದ್ದಾರೆ. ಇವು ಸಾರ್ವಕಾಲಿಕ ಮೌಲ್ಯ. ಅಂಥದರೆದುರು, ಕಾಗೆ-ಗುಬ್ಬಕ್ಕನ ಕತೆ ಹೇಳುವಂಥವರಿಂದ ದೈವೀ ನಂಬಿಕೆಗಾಗುವ ಅಪಚಾರವನ್ನು ನರಸಿಂಹಮೂರ್ತಿಯವರು ಪ್ರಶ್ನಿರುವುದು ಉಚಿತ ಮತ್ತು ಸಮಂಜಸ!     
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet