ಚುಟುಕುಗಳು: ಮೆಟ್ಟಿಲು,ಅವಳು,ನಮ್ಮೂರ ಮಣ್ಣು ಮತ್ತು ಮನಸ್ಸು
ಕವನ
ಮೆಟ್ಟಿಲು
ಸೋಲೇ ಗೆಲುವಿನ ಮೆಟ್ಟಿಲು ನಿಜ
ಆದರೆ ಮೆಟ್ಟಿಲುಗಳೇ ಸೋಲಾದರೆ ?
ಗೆಲ್ಲಬೇಕೆಂದು ಸೋತರೆ ಗೆಲುವಿಗಿನ್ನೊಂದು ಮೆಟ್ಟಿಲು
ಸೋತರೇ ಗೆಲ್ಲುತ್ತೇವೆಂದರೆ ಸೋಲಿಗಿನ್ನೊಂದು ಮೆಟ್ಟಿಲು !
ಅವಳಲ್ಲ !!
ನಡು ನಡು ಮಧ್ಯಾಹ್ನದಲ್ಲಿ ಯಾರಿವಳು ?
ನನ್ನ ಹಿಂದೆಯೇ ಬರುತ್ತಿರುವಳು ಯಾಕವಳು ?
ಇಷ್ಟು ಬೇಗ ಮನಸೋತಳೆ ನನಗವಳು ?
ಅಲ್ಲ ಅವಳಲ್ಲ, ಅದು ಕರಿಯ ನೆರಳು !!
ನಮ್ಮೂರ ಮಣ್ಣು
ಮಣ್ಣಿನಿಂದಲೇ ಮತ್ತೆ ಎದ್ದು ಬಂದಿದ್ದೇನೆಂದರು ಚುನಾವಣೇಲಿ ಗೆದ್ದವರು
ಮಣ್ಣಿನಿಂದಲೇ ಮೆತ್ತೆದ್ದು ಬರ್ತೀನೆಂದರು ಚುನಾವಣೇಲಿ ಸೋತವರು
ಮಣ್ಣಿನಿಂದಲೇ ಎದ್ದು ಬರಲಿರುವವನೆಂದರು ಚುನಾವಣೇಲಿ ನಿಲ್ಲುವವರು
ಅದಕ್ಕಾಗೇ ನೋಡಿ, ನಮ್ಮೂರ ಮಣ್ಣಿಗೆ ಹಾಕಿಸಿಲ್ಲ ಟಾರು !!
ಮನಸ್ಸು
ನಿಲುಕದ ಕನಸುಗಳಿಗೆ ಜೋತು ಬೀಳುವ ಬಾವಲಿ
ಎಲ್ಲವೂ ತಂದೆನ್ನುವ ಧಗ ಧಗಿಸುವ ಕಾವಲಿ
ಕ್ಷಣ ಕ್ಷಣವೂ ಹೊಸ ಹೊಸ ಆಸೆಗಳಲಿ
ಸದಾ ಹಸಿದಿರುವ ಮನಸ್ಸೆಂಬ ಕೋಮಲಿ
Comments
ಉ: ಚುಟುಕುಗಳು: ಮೆಟ್ಟಿಲು,ಅವಳು,ನಮ್ಮೂರ ಮಣ್ಣು ಮತ್ತು ಮನಸ್ಸು
In reply to ಉ: ಚುಟುಕುಗಳು: ಮೆಟ್ಟಿಲು,ಅವಳು,ನಮ್ಮೂರ ಮಣ್ಣು ಮತ್ತು ಮನಸ್ಸು by venkatb83
ಉ: ಚುಟುಕುಗಳು: ಮೆಟ್ಟಿಲು,ಅವಳು,ನಮ್ಮೂರ ಮಣ್ಣು ಮತ್ತು ಮನಸ್ಸು