ನಾಗಪ್ಪ
ನಾಗಪ್ಪ
ನಾಗಪ್ಪ ಭಯ ಬೀಳಿಸ ಬೇಡಪ್ಪ
ಶರಣಾಗುವೆ ನಿನಗೆ ನನ್ನಪ್ಪ ||
ನಾಗಪ್ಪ ಭಯ ಬೀಳಿಸ ಬೇಡಪ್ಪ
ಶರಣಾಗುವೆ ನಿನಗೆ ನನ್ನಪ್ಪ
ಬುಸ್ ಬುಸ್ ಎಂದರೆ ಬಾರೀ ಭಯವು
ಕಂಡರೆ ಎದೆಯಲಿ ಡಬಡಬವು
ಹಾಲೀವೆನು ತನಿವೆರೆವೆನು ಪಡೆದುಕೋ
ಸುಮ್ಮನೆ ನಮ್ಮನೆ ನೋಡದಿರು
ಮೆಲ್ಲನೆ ಸುಮ್ಮನೆ ಹೋಗಿಬಿಡು ||
ನಾಗಪ್ಪ ಭಯ ಬೀಳಿಸ ಬೇಡಪ್ಪ
ಶರಣಾಗುವೆ ನಿನಗೆ ನನ್ನಪ್ಪ ||
ಹೆಡೆಯೆತ್ತಿದರದು ಭೀಕರ ರೂಪ
ಸೆರೆವಿಡಿದರೆ ಆ ಚಿತ್ರ ಸುರೂಪ
ಅನಂತ ನಿಧಿಯನು ಕಾಯುವ ಕೋಪ
ಹುದುಗಿಹುದಂತದು ಹುಡುಕುವ ಲೋಪ
ಕಂಡರೆ ಬಿಡೆ ಮಾಡಿದ ಪಾಪ
ಹೆದರುವರೆಲ್ಲೆಡೆ ನಾಗನ ಶಾಪ
ಬೇಡುವೆ ಬಿಡು ಬಿಡು ರೋಷದ ತಾಪ
ಬೆಳಗುವೆ ನಿನಗೆ ತುಪ್ಪದ ದೀಪ ||
ನಾಗಪ್ಪ ಭಯ ಬೀಳಿಸ ಬೇಡಪ್ಪ
ಶರಣಾಗುವೆ ನಿನಗೆ ನನ್ನಪ್ಪ ||
- ಸದಾನಂದ
Rating
Comments
ಉ: ನಾಗಪ್ಪ
In reply to ಉ: ನಾಗಪ್ಪ by kamalap09
ಉ: ನಾಗಪ್ಪ