ಮನೆ ಬಾಡಿಗೆಗೆ ಇದೆ

ಮನೆ ಬಾಡಿಗೆಗೆ ಇದೆ

ದಿನ ಪೂರ್ತಿ ಹುಡುಕಿದರೂ ಒಂದು ಮನೆ ಕೂಡ ಹಿಡಿಸಲಿಲ್ಲ, ಹಾಗು ಈ ತಿಂಗಳು ಮುಗಿಯುವದರೊಳಗೆ ಈಗಿರುವ ಮನೆ ಖಾಲಿ ಮಾಡಬೇಕಾಗಿತ್ತು. ಹಾಗೆ ನಿಧಾನವಾಗಿ ಯೋಚಿಸುತ್ತಾ ನಡೆದುಕೊಂಡು ಬರುವಾಗ್ ದೊಡ್ಡದಾದ ಮನೆ ಮುಂದೆ "ಮನೆ ಬಾಡಿಗೆಗೆ  ಇದೆ " ಎಂಬ ಫಲಕ ನೋಡಿದೆ. ಕೊನೆಯದಾಗಿ ಈ ಮನೆಯನ್ನು  ನೋಡಿ ಬಿಡೋಣ ಅಂತ ವಿಚಾರಿಸಿ ಮನೆ  ಬೆಲ್ ಹಾಕಿದೆ. ಸುಮಾರು ೭೦ ವರ್ಷದ ಅಜ್ಜಿ ಬಾಗಿಲು ತೆರೆಯುತ್ತಾ , ಯಾರು ನೀವು? ಏನಾಗಬೇಕಾಗಿತ್ತು? ಅಂತಾ ತನ್ನ ನಡುಗುವ ದ್ವನಿಯಲ್ಲಿ ಕೇಳಿತು?
ಮನೆ ಗೇಟ್ ಮುಂದೆ ಮನೆ ಬಾಡಿಗೆಗೆ ಇದೆ ಅಂತ ನೋಡಿದೆ ಅದರ ಬಗ್ಗೆ ಮಾತನಾಡ  ಬೇಕಿತ್ತು ಅಂತ ಉತ್ತರಿಸಿದೆ. ಹೌದಾ?  ಲೇ ಕಾವೇರಿ ನೋಡೇ, ಯಾರೋ ಮನೆ ಬಾಡಿಗೆಗೆ ಕೇಳಿಕೊಂಡು ಬಂದಿದ್ದಾರೆ ಅಂತ ಅಜ್ಜಿ ಹೇಳಿದಳು.ಕಾವೇರಿ ಬಹುಶ ಮನೆ ಯಜಮಾನತಿ ಇರಬೇಕು ಅಂತ ಅಂದುಕೊಂಡೆ. ಮಧ್ಯಮ ವಯಸ್ಸಿನ ಕಾವೇರಿಯವರು ನನ್ನನ್ನು ಮನೆ ಒಳಗೆ ಕರೆದು ಕುಡ್ಲಿಕ್ಕೆ ಹೇಳಿದರು. ಮನೆ ಬಾಡಿಗೆಗೆ ಕೇಳಲು ಹೋದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ನಾನು ಮುಂಚೆಯೇ ತಯಾರಾಗಿದ್ದೆ. ಯಾವ ಊರು? ಇಲ್ಲಿ ಏನು ಮಾಡಿಕೊಂಡಿದ್ದಿರಿ? ಮದುವೆ ಆಗಿದಿಯಾ? ನಾನು ಸೂಕ್ಷ್ಮವಾಗಿ ನನ್ನ ಪೂರ್ವಾಪರಗಳನ್ನು ವಿವರಿಸಿದೆ. ಕೊನೆಯದಾಗಿ ನನಗೆ ಇನ್ನು ಮದುವೆ ಆಗಿಲ್ಲಾ ಅಂದಾಕ್ಷಣ, ಅಜ್ಜಿ ತನ್ನ ಮುಖ ತಿರಿಗಿಸಿಕೊoಡು ಒಳಗೆ  ಹೋದಳು,ಆದ್ರೆ ಕಾವೇರಿಯವರ್ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಬನ್ನಿ ಮನೆ ನೋಡುವಿರಂತೆ ಎಂದು ಕಾವೇರಿ ಮೆಟ್ಟಿಲು ಹತ್ತ ತೊಡಗಿದರು ನಾನು ಕೂಡ ಅವರನ್ನೇ ಹಿಂಬಾಲಿಸಿದೆ.ಮೊದಲ್ನೇ ಮಹಡಿಯಲ್ಲಿದ್ದ ಮನೆಯ ಬಾಗಿಲು ತೆರೆದು ಒಳಗೆ ಹೋದ ಕೂಡಲೇ ನನಗೆ ಮನೆ ಒಪ್ಪಿಗೆ ಆಯಿತು. ನಾನು ಬಯಸಿದ್ದ ಎಲ್ಲ ಸೌಲಭ್ಯಗಳು ಇದ್ದವು.

 ಮನೆ ಅಡ್ವಾನ್ಸ್ ಮತ್ತು ಬಾಡಿಗೆ ಬಗ್ಗೆ ಕೇಳಿದೆ. ಅದನ್ನು ನಮ್ಮ ಯಜಮಾನರು ಹೇಳ್ತಾರೆ ಅಂತ ಕಾವೆರಿ ಮೇಡಂ ಹೇಳಿದರು .ನೀವು ನಾಳೆ ಬೆಳಿಗ್ಗೆ ಬಂದ್ರೆ ನಮ್ಮ ಯಜಮಾನರು ಸಿಗ್ತಾರೆ ಎಂದು ಕಾವೇರಿ ಹೇಳಿದರು.ಸರಿ ಮೇಡಂ ನಾಳೆ ಬೆಳಿಗ್ಗೆ ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟೆ.ಅವರ ಮನೆಯಿಂದ ಹೊರಗೆ ಬಂದಾಗ ಗಡಿಯಾರ್  ಸರಿಯಾಗಿ ೬ ಘಂಟೆ ಎಂದು  ತೋರಿಸುತಿತ್ತು. ನನ್ನ ಚಹಾ ಕುಡಿಯುವ ಸಮಯ ಕೂಡ ಆಗಿತ್ತು, ಅಲ್ಲಿಯೇ ಹತ್ತಿರದಲ್ಲಿ ಇದ್ದ ಹೋಟೆಲ್ನಲ್ಲಿ ಚಹಾ ಕುಡಿದು ಮನೆ ಸೇರುವ ಹೊತ್ತಿಗೆ ರಾತ್ರಿ  ಮತ್ತು ಆಯಾಸ ಆಗಿದ್ದರಿಂದ್ ಹಾಗೆಯೇ ಮಲಗಿಬಿಟ್ಟೆ. ಫೋನ  ರಿಂಗ ಆಗಿದ್ದರಿಂದ  ಎಚ್ಚರ ಆಯಿತು, ಆಕಡೆ ಇಂದ ಅಮ್ಮನ ಧ್ವನಿ "ಏನೋ ಅಲೋಕ ಇನ್ನು ಮಲಗೆ ಇದ್ದಿಯಾ. ಮುಂಜಾನೆ ೮ ಘಂಟೆ ಆಗಿದೆ" ಅಂತ ಒಂದೇ ಉಸಿರಿನಲ್ಲಿ ಹೇಳಿದಳು. ಅಮ್ಮನ ಅಂತಕವನ್ನು ನಿವಾರಿಸಿ ಬೇಗನೆ ರೆಡಿ ಆಗಿ ಮನೆಯಿಂದ ಹೊರಟೆ. ಮನೆ ಯಜಮಾನರಾದ್ ರಾಮಚಂದ್ರರಾಯರು ನನ್ನ ನೀರಿಕ್ಷೆಗೆ ವಿರುದ್ದವಾಗಿ ಯಾವುದೇ ಪ್ರಶ್ನೆಗಳನ್ನು ಕೇಳದೆ ಮನೆ ಬಾಡಿಗೆ ನಿಗದಿ ಮಾಡಿದರು. ಅವರು ಕೇಳದಿದ್ದರೂ ನಾನಾಗಿಯೇ ನನ್ನ ವಿವರಗಳನ್ನು ಹೇಳಿದೆ. ಅಲೋಕ ನೀವು ಮುಂದಿನ ವಾರವೇ ನಮ್ಮ ಮನೆಗೆ ಬರಬಹುದು, ಅಲ್ಲಿಯವರೆಗೆ ನಾವು ಸುಣ್ಣ ಮತ್ತು ಬಣ್ಣ ಮಾಡಿಬಿಡುತ್ತೇವೆ ಎಂದು ರಾಮಚಂದ್ರರಾಯರು ಹೇಳಿದಾಗ್, ನನಗೆ ನನ್ನ ದೊಡ್ಡ ಸಮಸ್ಯೆ ಬಗೆಹರಿದಿದಿಕ್ಕೆ ತುಂಬಾ ಸಂತೋಷ್ ಆಯಿತು.
 
ಹೊಸ ಮನೆಗೆ ಹೊಂದಿಕೊಳ್ಳಲು ಅಷ್ಟೇನೂ ಸಮಯ ತೆಗೆದುಕೊಳ್ಳಲಿಲ್ಲ. ಚಿಕ್ಕ ಪುಟ್ಟ ಅಗತ್ಯಗಳನ್ನು ಕಾವೇರಿಯವರು ಪುರೈಸಿದ್ದರಿಂದ ತುಂಬಾ ಅನುಕುಲಾಯಿತು.ರಾಮಚಂದ್ರರಾಯರ ಮನೆಯಿಂದ ಆಗಾಗ್ ಹುಡುಗಿಯ ದ್ವನಿಯೊಂದು ಕೇಳಿಬರುತ್ತಿತ್ತು. ಯಾರು ಇರಬಹುದು? ಅಂತ ಕುತುಹಲ್ ಇದ್ದರು, ಆಮೇಲೆ ತಾನೇ ಗೊತ್ತಾಗುತ್ತೆ ಅಂತ  ಸುಮ್ಮನಾದೆ. ಬೆಳಿಗ್ಗೆ ೭ ಘಂಟೆಗೆ ಹೊರಟು ರಾತ್ರಿ ೯ ಘಂಟೆಗೆ ಮನೆಗೆ ಆಫೀಸಿನಿಂದ ಬರುತಿದ್ದರಿಂದ, ರಾಮಚಂದ್ರ ರಾಯರ ಮನೆಯಲ್ಲಿ ಇರುವ ಎಲ್ಲ ಸದಸ್ಯರ ಬಗ್ಗೆ ಗೊತ್ತಾಗುವುದು ಸಾಧ್ಯವಾಗಲಿಲ್ಲ. ಒಂದು ತಿಂಗಳು ಹೇಗೆ ಕಳೆದು ಹೋಯಿತು ಗೊತ್ತಾಗಲೇ ಇಲ್ಲ. ಮೊದಲ ತಿಂಗಳ ಬಾಡಿಗೆಗೆ  ಕೊಡಲು ರಾಮಚಂದ್ರ ರಾಯರ ಮನೆಯ ಕಾಲಿಂಗ್ ಬೆಲ್ ಹಾಕಿದೆ, ಕಾವೇರಿ ಮೇಡಂ ನಿರೀಕ್ಷೆಯಲ್ಲಿ ಇದ್ದ ನನಗೆ ಬಾಗಿಲು  ಹಿಂದೆ  ಬಂದ ಹುಡುಗಿಯನ್ನು ನೋಡಿ ಸುಧಾರಿಸಿಕೊಳ್ಳಲು  ಸ್ವಲ್ಪ  ಸಮಯ್ ಬೇಕಾಯಿತು. ನನ್ನ ಕಲ್ಪನೆಯ ಹುಡುಗಿ ನನ್ನ ಮುಂದೆ ಪ್ರತ್ಯಕ್ಷ್ಯಆದ ಹಾಗೆ ಆಯಿತು. ಮನೆ ಬಾಡಿಗೆ  ಕೊಡಬೇಕಾಗಿತ್ತು  ಅಂತ  ಹೇಳಿದೆ. ಒಂದು ನಿಮಿಷ್ ತಾಳಿ ಎಂದು ಅವಳು ಹೇಳಿ ಅವಳು ಒಳಗೆ ಹೋದಳು.ಸ್ವಲ್ಪ ಹೊತ್ತಿನಲ್ಲೇ ರಾಯರು ಹೊರಗೆ ಬಂದರು. ಬನ್ನಿ ಒಳಗೆ, ಮನೆ ಕಡೆ ಎಲ್ಲ ಸೌಖ್ಯಾನಾ? ರಾಯರ ಪ್ರಶ್ನೆಗೆ, ಹೌದು ಅಂತ ಉತ್ತರಿಸಿದೆ. ಸಂಗೀತಾ ಎರಡು ಟೀ ತೆಗೆದುಕೊಂಡು ಬಾ ಎಂದು ಅಪ್ಪಣೆ  ರಾಯರು ಮಾಡಿದರು.  ಟೀ ತಂದ ಸಂಗೀತಾ ಬೇರೆ ಯಾರು ಆಗಿರದೇ ಬಾಗಿಲು ತೆರೆದ ಹುಡುಗಿಯೇ ಆಗಿದ್ದಳು. ಇವಳು ನನ್ನ ಮಗಳು ಸಂಗೀತ ಎಂ. ಎಸ. ಸ್ಸಿ ಓದುತಿದ್ದಾಳೆ ಎಂದು ರಾಯರು ಪರಿಚಯ ಮಾಡಿಸಿದರು.  ನನ್ನ ಹಲೋ ಗೆ ಸಂಗೀತಾ ಹೈ ಹೇಳಿದಳು. ಮನೆ ಬಾಡಿಗೆ ಕೊಟ್ಟು ಹೊರ ಬಂದೆ, ಆದರು ಮನ ತುಂಬಾ ಸಂಗೀತಾ ಮತ್ತು ಅವಳ ಮುಗುಳನಗೆ ತುಂಬಿತ್ತು. ಅವಳ ಜೊತೆ ಇನ್ನು ಮಾತನಾಡುವ ಬಯಕೆ ಆಯಿತು.
                                                                                                                                                                                                                ನನ್ನ ಬಯಕೆಯನ್ನ ಆ ದೇವರು ಇಷ್ಟು ಬೇಗ್ ಪುರೈಸುತ್ತಾನೆ ಅಂತ ಕಲ್ಪನೆ ಕೂಡ ಮಾಡಿರಲಿಲ್ಲ. ಅವತ್ತು  ಆಫೀಸೆನಿಂದ ಮನೆಗೆ ಬೇಗ ಬಂದಿದ್ದೆ.  ಸುಮಾರು ರಾತ್ರಿ ೮ ಘಂಟೆಗೆ ಕಾವೇರಿ ಆಂಟಿ ನನ್ನ ಕರೆದು, ಅಲೋಕ್ ನಮ್ಮ ಸಂಗೀತ ಕಾಲೆಜನಿಂದ  ಇನ್ನು ಮನೆಗೆ  ಬಂದಿಲ್ಲ, ಮತ್ತೆ ಅವಳ ಫೋನ್ ಕೂಡ  ಸ್ವಿಚ್ ಆಫ ಆಗಿದೆ, ದಯವಿಟ್ಟು ನೀನು ಅವಳ ಕಾಲಿಜಿಗೆ ಹೋಗಿ ಬರುತ್ತಿಯಾ? ಎಂದು ಆತಂಕದಿಂದ ಕೇಳಿದರು. ರೋಗಿ ಬಯಸಿದ್ದು ಅದೇ ಮತ್ತು ವೈದ್ಯ ಹೇಳಿದ್ದು ಅದೇ ಅಂತ  ನಾನು ಮನಸಿನಲ್ಲೇ ಅಂದುಕೊಂಡೆ.ನಾನು ಸಂಗೀತಾಳ ಮೊಬೈಲ್ ನಂಬರ್ ಮತ್ತು ಕಾಲೇಜಿನ ವಿಳಾಸ್ ಪಡೆದು ಕೊಂಡು ಹೊರಟೆ. ಕಾಲೇಜ್ ತಲುಪುವ್ ಹೊತ್ತಿಗೆ ಸಂಗೀತ ಕಾಲೇಜ್ ಗೇಟ್ ಹತ್ತಿರ ನಿಂತಿದ್ದಳು. ನನ್ನ ನೋಡಿದ ಕೂಡಲೇ ಸಂಗೀತ ಅಲೋಕ  ನೀವಿಲ್ಲಿ? ಎಂದು ಕೇಳಿದಳು. ನೀವು ಬರುವುದು ತುಂಬಾ ತಡ ಆಯ್ತಲ್ಲ, ಅದಕ್ಕೆ ನಿಮ್ಮ ತಾಯಿ ನನ್ನ ಕಳುಹಿಸಿದರು ಎಂದೇ. ನಾನು  ತುಂಬಾ ಹೊತ್ತಿನಿಂದ ಆಟೋಗೆ  ಕಾಯ್ತಾ ಇದ್ದೀನಿ ಮತ್ತು ನನ್ನ ಮೊಬೈಲ್ ಬ್ಯಾಟರಿ ಕೂಡ ಮುಗಿದುಹೋಗಿದೆ ಎಂದು ಸಂಗೀತ ತನ್ನ ಪರಸ್ಥಿತಿ ವಿವರಿಸಿದಳು. ನಾನು ಮಾತ್ರ ಆಗಿದೆಲ್ಲ ಒಳ್ಳೆಯದಕ್ಕೆ ಬಿಡಿ ಎಂದೇ. ಏನು ಹೇಳಿದ್ರಿ ನನಗೆ ಕೇಳಿಸಲಿಲ್ಲ ಎಂದಳು ಸಂಗೀತ. ನಾನು ಮನಗೆ ಹೋಗೋಣ ನಿಮ್ಮ ತಾಯಿ ಸುಮ್ಮನೆ ಕಾಯ್ತಾ ಇರ್ತಾರೆ ಎಂದು ಬೈಕ್ ಸ್ಟಾರ್ಟ್ ಮಾಡಿದೆ. ಹೇಗೆ ಮಾತಿಗೆ ಮುನ್ನುಡಿ ಹಾಕೆಬೇಕು ಎಂದು ವಿಚಾರಿಸುತಿದ್ದಾಗಲೇ ಸಂಗೀತ "ನಿಮಗೆ ಸುಮ್ಮನೆ ತೊಂದರೆ ಕೊಟ್ಟಹಾಗೆ ಆಯ್ತು ಎಂದಳು". ಹಾಗೇನಿಲ್ಲ ನೆರೆ ಹೊರೆ ಎಂದರೆ ಒಬ್ಬರಿಗೊಬ್ಬರು ಸಹಾಯ ಆಗಬೇಕಲ್ಲವೇ? ಎಂದೇ. ಇವತ್ತು ಕಾಲೇಜಿನಲ್ಲಿ ಸೆಮಿನಾರ್ ಇದ್ದುದರಿಂದ ತಡ ಆಯ್ತು, ಇಲ್ಲದಿದ್ರೆ ಮನೆಗೆ ಬೇಗ್ ಬಂದುಬಿಡುತಿದ್ದೆ ಎಂದು  ಸಂಗೀತ ಹೇಳುವಷ್ಟರಲ್ಲಿ ನಾವು ಮನೆ ತಲುಪಿದೆವು.

 

ಕಾವೇರಿ ಆಂಟಿ ಮನೆ ಬಾಗಿಲಲ್ಲೇ ಕಾಯ್ತಾ ಇದ್ದರು. ಸಂಗೀತ ತಡವಾಗಿ ಬರಲು ಆದ ಕಾರಣ ಹೇಳುವ ಹೊತ್ತಿಗೆ ನಾನು ಬೈಕ್ ಪಾರ್ಕ್ ಮಾಡಿದೆ. ಕಾವೇರಿ ಆಂಟಿ ಅಲೋಕ ನಿನ್ನಿಂದ ತುಂಬಾ ಉಪಕಾರ ಆಯಿತಪ್ಪ ಎಂದರು. ಅದಕ್ಕೆ ನಾನು ಸುಮ್ಮನೆ ಮುಗುಳನಕ್ಕೆ. ಸಂಗೀತ ಕೂಡ ಥ್ಯಾಂಕ್ಸ್ ಹೇಳಿದಳು. ನಾನು ಅವರಿಬ್ಬರಿಗೂ ಶುಭರಾತ್ರಿ ಹೇಳಿ ರೂಮ್ ಸೇರಿದೆ. ಹಾಸಿಗೆಯಲ್ಲಿ ಮಲಗಿದರೂ ಮನಸ್ಸು ಮಾತ್ರ ಸಂಗೀತಳ್ ಕಲ್ಪನೆಯಲ್ಲೇ ಇತ್ತು. ಯಾವೊದೋ ಅವ್ಯಕ್ತ ಆಕರ್ಷಣೆ ನನ್ನನ್ನು ಸಂಗೀತಳ್ ಸನಿಹ  ಬರಲು  ನನ್ನನ್ನು ಪ್ರೇರೇಪಿಸುತ್ತಿದೆ ಅಂದುಕೊಂಡೆ.  ಮರುದಿನ ಶನಿವಾರ ಆದುದರಿಂದ ಆರಾಮಾಗಿ ತಡವಾಗಿ ಏಳಬಹುದು ಅಂತ ನಿದ್ದೆಗೆ ಜಾರಿದೆ.


 ಮುಂಜಾನೆ ಕಾಲಿಂಗಬೆಲ್ ಶಬ್ದಕ್ಕೆ ಎಚ್ಚರಾಯಿತು. ಇಷ್ಟು ಬೆಳಿಗ್ಗೆ ಯಾರಿರಬಹುದು ಅಂತ ಬಾಗಿಲು ತೆರೆದೆ. ಏನಪ್ಪಾ ಅಲೋಕ ಇನ್ನು ಮಲಗೆ ಇದ್ದೀಯ ಎಂದು ಕಾವೇರಿ ಮೇಡಂ ನನ್ನ ಕೇಳಿದರು. ಹೌದು ಆಂಟಿ ನಿಮ್ಮ ಮಗಳ ಬಗ್ಗೆ ಕನಸು ಕಾಣ್ತಾ ಇದ್ದೆ ಎಂದು ಹೇಳ್ಬೇಕು ಅಂದುಕೊಂಡೆ. ಅಷ್ಟರಲ್ಲಿ  ಕಾವೇರಿ ಆಂಟಿ ಬೇಗ  ರೆಡಿ ಆಗಿ ಟಿಫಿನಗೆ ನಮ್ಮ ಮನೆಗೆ  ಬಂದು ಬಿಡು ಎಂದರು. ಮನಸಿನಲ್ಲಿ ಸಂತೋಷ್  ಆದರು ಅದನ್ನು ತೋರ್ಪಡಿಸದೆ ನಿಮಗೆ ಯಾಕೆ ಸುಮ್ಮನೆ ತೊಂದರೆ ಆಂಟಿ ಎಂದೇ. ಇದರಲ್ಲಿ ತೊಂದರೆ ಏನಿಲ್ಲ ನೀನು ಬೇಗನೆ ಕೆಳಗೆ ಬಾ ಎಂದು ಹೇಳಿ ಹೊರಟೆ ಬಿಟ್ಟರು. ನಾನು ಬೇಗನೆ ಸ್ನಾನ ಮಾಡಿ ಕೆಳಗೆ ಹೋದೆ. ಎಲ್ಲರು ನನಗಾಗಿಯೇ ಕಾಯುತ್ತ ಇದ್ದರು. ಸಂಗೀತ ಕೂಡ.  ನನಗೆ ಆದ ಸಂತೋಷಕ್ಕೆ ಮಿತಿನೇ ಇರಲಿಲ್ಲ. ಸಂಗೀತ ನನಗೆ ಇಷ್ಟವಾದ್ ಆಕಾಶ್ ನೀಲಿ ಬಣ್ಣದ ಚೂಡಿದಾರ್ ಹಾಕಿದ್ದಳು. ಅಷ್ಟರಲ್ಲಿ ಅಜ್ಜಿ ಕೂಡ ಅಲ್ಲಿಗೆ ಬಂತು. ಛೇ ! ಶಿವಪುಜೆಯಲ್ಲಿ ಕರಡಿ ಬಂದ ಹಾಗೆ ಇಗಲೇ ಬರ್ಬೇಕಾಗಿತ್ತಾ ಎಂದುಕೊಂಡೆ. ನಾನು ಯಾವ್ ರೀತಿ ಮಾತನ್ನು ಆರಂಭ ಮಾಡಬೇಕು ಅಂತ ವಿಚಾರಿಸುತಿದ್ದೆ. ಕೊನೆಗೆ ಕಾವೇರಿ ಆಂಟಿ ಏನಪ್ಪಾ ಅಲೋಕ ಏನು ಮಾತನಾಡ್ತಾ ಇಲ್ಲ? ದೋಸೆ ಹೇಗಿದೆ ಎಂದು ಕೇಳಿದರು?  ದೋಸೆ ತುಂಬಾ ಚನ್ನಾಗಿದೆ ಆಂಟಿ ಎಂದೇ. ಲೇ ಸಂಗೀತ ದಿನ ಬೆಳಗಾದರೆ ಎಷ್ಟೊಂದು ಮಾತನಾಡುತ್ತಿಯ, ಇವತ್ತು ಏನಾಗಿದೆ ನಿನಗೆ? ಎಂದು  ಮಗಳನ್ನು ತರಾಟೆಗೆ ತೆಗೆದುಕೊಂಡರು ಕಾವೇರಿ ಮೇಡಂ. ನಾನೇ ಸ್ವಲ್ಪ ಧೈರ್ಯ ಮಾಡಿ ಎಂ. ಎಸ. ಸಿ. ನಲ್ಲಿ ಮೇಜರ್ ವಿಷಯ ಯಾವುದು? ಎಂದು ಕೇಳಿದೆ. ಫಿಸಿಕ್ಸ್ ಎಂದು ಸಂಗೀತ ಉತ್ತರಿಸಿದಳು. ಒಹ್ ನಾನು ಕಾಲೇಜಿನಲ್ಲಿ ಇರಬೇಕಾದರೆ ನನ್ನ ಅಚುಮೆಚ್ಚಿನ್ ವಿಷಯ್ ಅದೇ ಆಗಿತ್ತು ಎಂದೇ. ಮುಂದೆ ಸಂಗೀತ ಏನಾದರು ಪ್ರಶ್ನೆ ಕೇಳಬಹುದು ಎಂದು ಕಾಯ್ತಾ ಇದ್ದೆ, ಆದರೆ ಹಾಗೇನು ಆಗಲಿಲ್ಲ, ಇದರಿಂದ ತುಂಬಾ ನಿರಾಸೆ ಆಯ್ತು. ಮುಂದೆ ಏನು ಮಾಡಬೇಕೆಂಬ ವಿಚಾರ  ಇದೆ? ಎಂದು ಸಂಗೀತಳನ್ನು  ಕೇಳಿದೆ. ಫಿಸಿಕ್ಸ್ ನಲ್ಲಿ  ಪಿ.ಎಚ್.ಡಿ ಮಾಡಿ ಲೆಕಚರೆರ್ ಆಗಿಬೇಕು ಅಂತ ಅಂದುಕೊಂಡಿದ್ದೇನೆ ಎಂದಳು ಸಂಗೀತ. ತುಂಬಾ ಒಳ್ಳೆಯ ವಿಚಾರ. ಎಲ್ಲರು ಇಗಿನ ಕಾಲದಲ್ಲಿ   ಸಾಫ್ಟ್ ವೇರ  ಇಂಜಿನಿಯರ್ ಆಗಬೇಕು ಅನ್ನುತ್ತಾರೆ, ನಿಮ್ಮ  ನಿರ್ಧಾರ ತುಂಬಾ ಭಿನ್ನವಾಗಿದೆ ಎಂದೇ. ಟಿಫಿನ ಮುಗಿದುದರಿಂದ ನಾನಿನ್ನು ಹೊರಡುತ್ತೀನಿ ಎಂದು ಹೇಳಿದೆ. ಮನಸಿಲ್ಲದ ಮನಸಿನ್ನಿಂದ  ಕಾಲು ಎಳೆದುಕೊಂಡು ಹೊರಟೆ.
                                            

ನಾನು ಗೇಟ್ ತೆಗೆದು ಬೈಕ್ ಸ್ಟಾರ್ಟ್ ಮಾಡ್ಬೇಕು ಅನ್ನುವಷ್ಟರಲ್ಲಿ, ಸಂಗೀತ ಅಲೋಕ ನಿಲ್ಲಿ  ಎಂದಳು. ನನ್ನ ಹತ್ತಿರ ಬಂದು ನೀವು ನಿಮ್ಮ ಮೊಬೈಲ್ ಮರೆತು ಬಂದಿದ್ರಿ ಎಂದು ಅದನ್ನು ಕೊಟ್ಟಳು. ಥ್ಯಾಂಕ್ಸ್ ಸ್ವಲ್ಪ ಮರೆವು ಎಂದೇ. ಮನೆಯಲ್ಲಿ ನಿಮ್ಮ ಜೊತೆ ಮಾತನಾಡೋಕೆ ಆಗಲಿಲ್ಲ ಅದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ, ಅಜ್ಜಿ ಇದ್ದಾಗ ನಾನು ಹೆಚ್ಚಿಗೆ ಮಾತುನಾಡುವದಿಲ್ಲ  ಎಂದು ಸಾಂತ್ವಾನ್ ಹೇಳಿದಳು ಸಂಗೀತ. ಪರವಾಗಿಲ್ಲ ಮತ್ತೆ ಸಮಯ ಸಿಕ್ಕಾಗ್ ನೋಡೋಣ ಎಂದೇ. ಅಷ್ಟರಲ್ಲಿ ಅಜ್ಜಿ ಹೊರಗಡೆ ಬಂದು, ಲೇ ಸಂಗೀತ ಬೇಗ ಬಾರೆ ಸ್ವಲ್ಪ  ಕೆಲಸ ಇದೆ ಎಂದು ಕರೆಯಿತು. ಸರಿ ನಾನಿನ್ನು ಬರ್ತೀನಿ ಎಂದಳು ಸಂಗೀತ. ಅಜ್ಜಿಗೆ ತನ್ನ ಮೊಮ್ಮಗಳ ಮೇಲೆ ಮಮತೆ ಜಾಸ್ತಿನ ಅಥವಾ ನನ್ನ ಮೇಲೆ ಅಪನಂಬಿಕೆಯಾ ಅಂತ ಗೊತ್ತಾಗ್ಲಿಲ್ಲ. ಬೈಕ್ ಸ್ಟಾರ್ಟ್ ಮಾಡಿ ಗಣೇಶ್'ನ ರೂಮ ಕಡೆಗೆ ಬೈಕ್ ತಿರುಗಿಸಿದೆ. ಗಣೇಶ್ ನನ್ನ ಆತ್ಮೀಯ ಸ್ನೇಹಿತ್. ಗಣೇಶನ್ ಹತ್ತಿರ ನಾನು ಭಾವನೆಗಳನ್ನ ಹೇಳಿಕೊಳ್ಳುತಿದ್ದೆ. ಅವನು ಕೂಡ ಅಷ್ಟೇ ತನ್ನ ಸುಖ:ದುಖ ಗಳನ್ನ ನನ್ನ ಜೊತೆ ಹೇಳಿಕೊಳ್ಳುತಿದ್ದ. ನಾವಿಬ್ಬರು ಪ್ರತಿ ಶನಿವಾರ ಮತ್ತು ಭಾನುವಾರ ಬೇಟಿ ಆಗುತಿದ್ದೆವು.  ಗಣೇಶ ಮೊಟ್ಯಾ ಎಂದೇ   ಕರೆಯಲ್ಪದುತಿದ್ದ, ಅದು ಅವನ ದೇಹದ ಆಕರದಿಂದ ಬಂದಿತ್ತು. ಏನೋ ಮೊಟ್ಯಾ ಏನು ಮಾಡ್ತಾ ಇದ್ದಿಯಾ ಎಂದೆ. ಬಾರಪ್ಪ ರಾಜಕುಮಾರ್ ನಿನಗೆ ಕಾಯ್ತಾ ಇದ್ದೇ, ನಡೆ ಟಿಫಿನ ಮಾಡಿ ಬರೋಣ ಎಂದ ಮೊಟ್ಯಾ. ನನ್ನದು ಆಯ್ತು ನೀನು ಮಾಡು, ನಿನ್ನೇ ರಾತ್ರೀ ಇಂದ ಇವತ್ತಿನ ಮುಂಜಾನೆವರೆಗೆ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದೆ. ಏನು ಮೊದಲ ನೋಟದಲ್ಲೇ ಪ್ರೇಮನಾ ? ಎಂದು ಮೊಟ್ಯಾ ಕೇಳಿದ.
 

ದಿನ ಪೂರ್ತಿ ನಾವಿಬ್ಬರು ಕೂಡಿ ಇದ್ದರೂ ನನ್ನ ಮನಸ್ಸು ಮಾತ್ರ ಸಂಗೀತಾಳ ಬಗ್ಗೆ ವಿಚರಿಸುತಿತ್ತು. ಶನಿವಾರ್ ಮತ್ತು ರವಿವಾರ್ ಹೇಗೆ ಕಳೆದು ಹೋದವು ಗೊತ್ತಾಗಲೇ ಇಲ್ಲಾ . ನಾನು ಮಾತ್ರ  ಮನಸಿನಲ್ಲಿ ಆದಷ್ಟು ಬೇಗ ಸಂಗೀತಾಳ ದರ್ಶನ ಆಗಲಿ ಅಂತ ದೇವರಲ್ಲಿ ಬೇಡಿಕೊಳ್ಳುತಿದ್ದೆ .ಬಹುಷ್ ನನ್ನ ಮನದ ಅಳಲು ದೇವರಿಗೇ ಬೇಗ ಮುಟ್ಟಿತೋ ಏನೋ. ಮುಂದಿನ ಶನಿವಾರವೇ ಸುವರ್ಣಾವಕಾಶ್ ಕುಡಿಬಂತು. ಅವತ್ತು ಮೊಟ್ಯಾ ಊರಲ್ಲಿ ಇರಲಿಲ್ಲ ನನ್ನ ಬೇಜಾರಿಗೆ ಏನಾದರು ವ್ಯವಸ್ತೆ ಮಾಡಬೇಕಾಗಿತ್ತು  ಅದಕ್ಕೆ ಕಾವೇರಿ  ಅಂಟಿಗೆ   ಹತ್ತಿರ ಇರುವ ಲೈಬ್ರರಿ ಬಗ್ಗೆ ವಿಚಾರಿಸಿದೆ . ಶಾಲಿನಿ ಆಂಟಿ ಇಲ್ಲಿ ಹತ್ತಿರ ಒಂದು ಲೈಬ್ರರಿ ಇದೆ, ನಮ್ಮ ಸಂಗೀತ ಅಲ್ಲಿಂದ ಯಾವಾಗಲೂ ಪುಸ್ತಕ ತರ್ತಾ ಇರ್ತಾಳೆ ಎಂದರು . ನಾನು ಅವರಿಂದ ವಿಳಾಸ ಪಡೆದು ಹೊರಟೆ. ಆದರೆ ಲೈಬ್ರರಿನಲ್ಲಿ  ನೊಂದಾಯಿತ ಸದಸ್ಯರ ಪರಿಚಯ ಇದ್ದರೇ ಮಾತ್ರ  ಹೊಸ ನೋಂದಣಿ ಸಾಧ್ಯ ಎಂದು ಗೊತ್ತಾಯಿತು. ಈ ಸಮಸ್ಯೆಗೆ ಕೂಡ ಪರಿಹಾರವು ಸಂಗೀತಳಿಂದ ಮಾತ್ರ ಸಾಧ್ಯ ಎಂದು ಮನೆಗೆ ಹೊರಟೆ. ಸಂಗೀತಾ ಕಾಲೇಜ್ ಗೆ ಹೋಗಿದಾಳೆ ಅವಳು ಬಂದ ಕೂಡಲೇ ನಿನಗೆ ಹೇಳುತ್ತೇನೆ ಎಂದರು ಕಾವೇರಿ  ಆಂಟಿ. ರೂಮಿನಲ್ಲಿ ಒಂದೊಂದೂ ನಿಮಿಶವು ಒಂದು ಯುಗ ಕಳೆದಂತೆ ಆಯಿತು.
 

ಸುಮಾರು  ಎರಡು ಘಂಟೆಗಳ ಬಳಿಕ ಸಂಗೀತ ಅಲೋಕ ಲೈಬ್ರರಿಗೆ ಹೋಗೋಣ ಬರ್ತಿರಾ ಎಂದು ಕೇಳುತ್ತಾ ಬಂದಳು. ಹೋಗಲು ನಾನು ಬೈಕ್ ಹೊರಗಡೆ ತರಲು ಹೊರಟೆ ಅದಕ್ಕೆ ಸಂಗೀತ ನಡೆದುಕೊಂಡೇ ಹೋಗಣ ಎಂದಳು. ನನ್ನ ಆತುರತೆ ಕೆಲಸ ಕೆಡಿಸಿತ್ತು . ನಡೆದುಕೊಂಡು ಹೋದರೆ ಮಾತನಾಡಲು ಜಾಸ್ತಿ ಹೊತ್ತು ಸಿಗುತ್ತೇ ಅಂತ ನನಗೇಕೆ ಹೊಳಿಯಲಿಲ್ಲ, ಎಂದು ಮನಸಿನಲ್ಲೇ ಬೈದುಕೊಂಡೆ. ನಮ್ಮಿಬ್ಬರ ನಡುವಿನ  ಮೌನವನ್ನು ಮುರಿಯುವುದು ಹೇಗೆ ಅಂತ ಆಲೋಚಿಸ ತೊಡಗಿದೆ, ಅಷ್ಟರಲ್ಲಿ ಸಂಗೀತ ನಿಮಗೆ ಯಾವ್ ತರಹದ ಸಾಹಿತ್ಯ ನಿಮಗೆ ಇಷ್ಟ? ಸಂಗೀತಳೆ ಮೌನ ಮುರಿದಳು. ಕಾಲ್ಪನಿಕ, ಪತ್ತೇದಾರಿ ಸಾಹಿತ್ಯ ಇಷ್ಟ ಎಂದೇ. ನಿಮಗೆ ಯಾವ ರೀತಿಯ ಸಾಹಿತ್ಯ ಇಷ್ಟ ಅಂತ ನಾನು ಮರಳಿ ಕೇಳಿದೆ. ಸಾಹಿತ್ಯದ ಎಲ್ಲ ಪ್ರಕಾರಗಳು ನನಗೆ ಇಷ್ಟ ಎಂದು ಚುಟಕಾಗಿ ಉತ್ತರಿಸಿದಳು. ನಾನು ಅಷ್ಟಕ್ಕೇ ಬಿಡದೇ ಯಾವ ಸಾಹಿತಿಯ ನಿಮಗೆ ಇಷ್ಟ? ಅದಕ್ಕೆ ಸಂಗೀತ ಎಲ್ಲ ಸಾಹಿತಿಗಳು ನನಗೆ ಇಷ್ಟ, ಮುಖ್ಯವಾಗಿ ಸಾಹಿತ್ಯದ ಸಾರ ಹಾಗು ಬರವಣಿಗೆಯ ಶೈಲಿ  ಚೆನ್ನಾಗಿರಬೇಕು. ಪ್ರವಾಸ ಕಥನಗಳು ಹಾಗು  ಬೆರೆರಯವರ್ ಜೀವನದ  ವ್ಯಯಕ್ತಿಕ ಅನುಭವಗಳನ್ನು ಓದುವದು ತುಂಬಾ ಇಷ್ಟ. ಇದರಿಂದ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಬೇರೆಯವರ ಆಲೋಚನಾ ರೀತಿ ಮತ್ತು  ಜನರನ್ನು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ. ನಾನು ಇಲ್ಲಿಯವರಿಗೆ ಕಾದಂಬರಿಗಳನ್ನು ಕೇವಲ ಮನೋರಂಜನೆ ಮತ್ತು ಸಮಯ ಕಳೆಯಲು ಮಾತ್ರ ಓದುತ್ತ ಇದ್ದೆ ಸಂಗೀತಳ ಆಲೋಚನಾ ರೀತಿಯು ತುಂಬಾ ವಿಭಿನ್ನ. ಅಷ್ಟರಲ್ಲಿ ನಾವಿಬ್ಬರು ಲೈಬ್ರರಿಯನ್ನು ತಲುಪಿದೆವು. ಬೇಗನೆ ನೋಂದಣಿಯನ್ನು ಮುಗಿಸಿ ಬೇಕಾದ ಪುಸ್ತಕ ಆಯ್ದು ಕೊಂಡೆ. ಮನೆಗೆ ಹಿಂದುರುಗಿ ಹೊಗುವಾಗ್ ಧೈರ್ಯಮಾಡಿ ಸಂಗೀತಳನ್ನು ಕಾಫಿ ಕುಡಿಯಲು ಅವ್ಹಾನಿಸಿದೆ. ಮನಸಿನಲ್ಲಿ ಅವಳು ನಿರಾಕರಿಸುವ್ ಅಳಕು ಇದ್ದರೂ ಅವಳ ಜೊತೆ ಮಾತನಾಡುವ ತವಕ ನನ್ನಲ್ಲಿ ಸ್ಪೂರ್ತಿಯನ್ನು ತುಂಬಿತ್ತು .  ನನ್ನ ನಿರೆಕ್ಷೆಗೆ ವಿರುದ್ದವಾಗಿ ಸಂಗೀತ ಸರಿ  ಹೊಗೋಣ ಎಂದಳು . ನನಗೆ ಆದ ಸಂತೋಷಕ್ಕೆ ಲೆಕ್ಕವೇ ಇರಲಿಲ್ಲ .
                                    ಕಾಫೀಯ ಸ್ವಾದವನ್ನು ಹೀರುತ್ತಾ ಸಂಗೀತ ನಿಮಗೆ ಕಥೆ ಹೇಗೆ ಇದ್ದರೆ ಇಷ್ಟ್ ಎಂದೇ? ಅದಕ್ಕೆ ಸಂಗೀತ ಮೊದಲು ನಿಮಗೆ ಯಾವ ಕಾರಣಕ್ಕೇ ಕಥೆ ಇಷ್ಟ್ ಆಗುತ್ತೆ ಹೇಳಿ ಅಂದಳು. ನನ್ನ  ಅನುಭವದಿಂದ ಹೇಳಬಹುದಾದರೆ    ಕಥೆಯು ನನ್ನ ಜೀವನದಲ್ಲಿ  ಘಟಿಸಿದ ಘಟನೆಗಳ ಜೊತೆ ಏನಾದರು ತಳಕು ಇದ್ದರೆ ಮತ್ತು ನನಗೆ ಇಷ್ಟವಾದ್ ವಿಷಗಳ ಮೇಲೆ ಆದರಿಸಿದ್ದರೆ ಇಷ್ಟ ಆಗುತ್ತೆ ಎಂದೇ. ಅಂದರೆ ನೀವು ಯಾವಾಗಲು ಓದುವಾಗ್ ಕಥೆಯಲ್ಲಿ ಬರುವ ಪಾತ್ರಗಳಲ್ಲಿ ನಿಮ್ಮನ್ನೇ ಹುಡುಕುವ ಪ್ರಯತ್ನ ಮಾಡುತ್ತೀರ ಮತ್ತೇ ನಿಮ್ಮದೇ ದ್ರಷ್ಟಿಕೋನದಲ್ಲಿ ಕಥೆಯನ್ನು ಅರ್ಥಮಾಡಿಕೊಳುತ್ತಿರಿ ಅಲ್ವಾ ಎಂದು ಸಂಗೀತ ಸುಲಭವಾಗಿ ನನ್ನ ಬಗ್ಗೆ ತನ್ನ ವಿಮರ್ಶೆ ಹೇಳಿದಳು. ಹೌದಲ್ವ? ಅವಳ ಮಾತು ನೂರಕ್ಕೆ  ನೂರು ಸತ್ಯ ಎಂದೆ. ಅದಕ್ಕೆ ಸಂಗೀತ ಕಥೆಗಳಲ್ಲಿ ನಮ್ಮದೇ ಆದ ಅಭಿಪ್ರಾಯ್ ದೊಂದಿಗೆ  ಓದುವುದಕಿಂತ ಸುಮ್ಮನ್ನೇ ನಿಷ್ಪಕ್ಷಪಾತವಾಗಿ ಓದುವುದು ತುಂಬಾ ಚೆನ್ನಾಗಿರುತ್ತೆ ಎಂದಳು. ಇದರಿಂದ ಜೀವನದಲ್ಲಿ ಕೂಡ ಬೇರೆಯವರನ್ನು ಅರ್ಥಮಾಡಿಕೊಳ್ಳಲು ತುಂಬಾ ಸುಲಭ ಎಂದಳು. ಅವಳ  ಪ್ರಭಬ್ದ ವಿಚಾರಕ್ಕೆ ನಾನು ಸೋತು  ಹೋದೆ . ಇವಳು ಜೀವನ ಸಂಗಾತಿ ಆದರೆ ಎಷ್ಟು ಚೆಂದ ಎಂದು ಮನಸಲ್ಲೇ  ಯೋಚಿಸಿದೆ. ಅಲೋಕ ಮನಗೆ ಹೊಗೋಣ ಅಮ್ಮ ಕಾಯ್ತಾ ಇರ್ತಾರೆ ಎಂದಳು ಸಂಗೀತ. ನಾನು ಸುಮ್ಮನೆ ಅವಳನ್ನೆ ಹಿಂಬಾಲಿಸಿದೆ. ಈ  ಘಟನೆ ನಂತರ ನಂತರ ಸಂಗೀತ  ಬಗ್ಗೆ ನನ್ನ ಅಭಿಮಾನ್ ಇಮ್ಮಡಿಸಿತು.


 ನಾನು ಸಂಗೀತಳ ಬಗ್ಗೆ ಮತ್ತು ಅವಳ ವಿಚಾರಗಳ ಕುರಿತು ಮೋಟ್ಯನ  ಹತ್ತಿರ ಹೇಳಿದೆ ಅದಕ್ಕೆ ಅವನು ಒಂದು ಸಲ ಆವಳನ್ನು ಭೆಟ್ಟಿ ಮಾಡಿಸು ಎಂದ. ಅದಾದ ಮೆಲೆ ಸುಮಾರು ದಿವಸಗಳವರೆಗೆ ನಾವು ನಮ್ಮ ಕೆಲಸಗಳಲ್ಲಿ ವ್ಯಸ್ತ್ಯ ಆಗಿದ್ದರಿಂದ ಯಾವುದೇ ಬೆಳವಣಿಗೆ ಆಗಲಿಲ್ಲ. ಒಂದು ದಿವಸ ನಾನು ಹೊರಗಡೆ ಹೋಗುವಾಗ್ ಸಂಗೀತ ನನ್ನ ತಡೆದು, ಅಲೋಕ ನಿಮ್ಮಿಂದ ಸಹಾಯ ಆಗಬೇಕಿತ್ತಲ್ಲ ಎಂದಳು. ಓ ಖಂಡಿತವಾಗಿ ಮಾಡ್ತೀನಿ ಎಂದೇ. ನನ್ನ ಕೊನೆ ವರ್ಷದ ಪ್ರೋಜೆಕ್ಟಗೆ ಪ್ರೋಗ್ರಾಮ್ಮಿಂಗ್ ಮಾಡಲು ಸಹಾಯ ಮಾಡಿ ಎಂದಳು. ನಾನು ನನ್ನ ಕಂಪ್ಯೂಟರ್ ಪಾಂಡಿತ್ಯವನ್ನು ಸಂಪೂರ್ಣವಾಗಿ ಧಾರೆ ಎರದು ಅವಳ ಪ್ರಾಜೆಕ್ಟನ್ನು ಮುಗಿಸಿ ಕೊಟ್ಟೆ. ಸಂಗೀತ ಅವಳ ಕಾಲೇಜ್ ನಲ್ಲಿ ಅವಳ ಪ್ರೋಜೆಕ್ಟಗೆ ಎಲ್ಲರು ಮೆಚ್ಚಿ ಹೊಗಳಿದರು ಎಂದು ಹೇಳಿದಳು. ಇದಕೆಲ್ಲ ನಿಮ್ಮ  ಪರಿಶ್ರಮವೇ ಕಾರಣ ಎಂದು ತನ್ನ ಕ್ರತಜ್ಞೆತೆಯನ್ನು ವ್ಯಕ್ತಪಡಿಸಿದಳು. ಪ್ರೊಜೆಕ್ಟ್ ಮಾಡುವಾಗ್ ಅವಳ ಸಾಮಿಪ್ಯ, ಅವಳ ಬಗ್ಗೆ ಹೆಚ್ಚಿಗೆ ಅರ್ಥಮಾಡಿಕೊಳ್ಳಲು ಸಹಾಯ ಆಯ್ತು. ನಿಮ್ಮ ಉಪಕಾರವನ್ನು ಹೇಗೆ ತಿರಿಸೋದು ಅಂತ ಸಂಗೀತ  ಕೇಳಿದಳು. ಒಂದು ಟ್ರೀಟ್ ಕೊಡಿ ಅಷ್ಟೆ ಎಂದೆ. ಸರಿ ನಾಳೆನೆ ಹೊರಡೋಣ ಎಂದಳು ಸಂಗೀತ. ನಾನು ಅವಳ ಟ್ರೀಟ್ ಗೆ ಮೊಟ್ಯಾ ನನ್ನು ಕೂಡ ಕರೆದುಕೊಂಡು ಹೋದೆ . ಆ ಸಂಜೆಯನ್ನು ನಾನೆಂದು ಮರೆಯಲ್ಲ, ಮೊಟ್ಯ ಕೂಡ ಸಂಗೀತಳ ತುಂಬಾ ಪ್ರಭಾವಿತ್  ಗೊಂಡ. ಅಲೋಕ ಹುಡುಗಿ ನೀನು ಹೇಳಿದಂತೆ ನೋಡಲಿಕ್ಕೆ ಚೆಂದ  ಹಾಗು ಮಾತನಾಡಲಿಕ್ಕು ಚುರುಕು ಎಂದ ಮೊಟ್ಯ.


ಮರುದಿನ ಆಫೀಸಿನಲ್ಲಿ  ಬಾಸ್ ನನ್ನ ಕರೆದು ಅಲೋಕ  ನೀವು ಮುಂದಿನ ವಾರವೇ ಒಂದು ತಿಂಗಳು ಪ್ಯಾರಿಸಿಗೆ ಕೆಲಸದ ನಿಮಿತ್ಯ ಹೋಗಬೇಕು ಎಂದರು. ಅಯ್ಯೋ ನಾನು ಸಂಗೀತಳಿಂದ  ಒಂದು ತಿಂಗಳು ದೂರ ಹೋಗಬೇಕಲ್ಲಾ ಅಂತ ಅಲೊಚನೆಆಯಿತು. ನಾನು ನಿಧಾನವಾಗಿ ನನ್ನ ಮನದ ಬಯಕೆಯನ್ನು ಸಂಗೀತಾಗೆ ಹೇಳಬೇಕು ಅಂತ ವಿಚಾರಿಸಿದ್ದೆ, .ನೋಡೋಣ ವಾಪಸ್ ಬಂದ ಮೇಲೆ ಹೇಳಿದರಾಯಿತು ಎಂದುಕೊಂಡೆ. ಕಾವೇರಿ ಆಂಟಿಗೆ ನಾನು ಒಂದು ತಿಂಗಳ ಮಟ್ಟಿಗೆ ಕೆಲಸದ ನಿಮಿತ್ಯ ಹೊರಗೆ ಹೋಗುತ್ತಿರುವ ಬಗ್ಗೆ ಹೇಳಿದೆ. ಸರಿ ಅಲೋಕ ನೀನು ಹುಷಾರಾಗಿ ಹೋಗಿಬಾರಪ್ಪ ಎಂದು ಅವರು ಹಾರೈಸಿದರು.
                  ಒಂದು ತಿಂಗಳ ಕಾಲ ಪ್ಯಾರಿಸನಲ್ಲಿ ಇದ್ದರೂ ಮನಸ್ಸು ಮಾತ್ರ ಸಂಗೀತಳ ಬಗ್ಗೆ ಆಲೋಚಿಸುತಿತ್ತು. ಹಾಗು ಹೀಗೂ ಒಂದು ತಿಂಗಳ ಕಳೆದು ವಾಪಸ ಬೆಂಗಳೂರಿಗೆ ಬಂದೆ. ಮನೆಯು ತಳಿರು, ತೋರಣಗಳಿಂದ ಅಲಂಕ್ರತವಾಗಿದ್ದು ದೂರಿಂದಲೇ ಕಂಡುಬಂತು. ಕಾಲಿಡುತ್ತಲೇ ಮನೆಯಲ್ಲಿ ಯಾವುದೊ ಕಾರ್ಯಕ್ರಮದ ವಾತಾವರಣ ಕಂಡುಬಂತು.ಅಷ್ಟರಲ್ಲಿ ರಾಮಚಂದ್ರರಾಯರು  ಮುಂದೆ ಬಂದು ಅಲೋಕ ನೀನು ತುಂಬಾ ಒಳ್ಳೆಯ ಸಮಯಕ್ಕೇ ಬಂದಿದಿರಾ, ಇವತ್ತು ನಮ್ಮ ಸಂಗೀತಳ ನಿಶ್ಚಿತಾರ್ಥ್ ಎಂದರು. ಅಯ್ಯೋ ಏನು ಹೇಳ್ತಿದಿರ ಅಂಕಲ್ ಇದೆಲ್ಲ ಯಾವಾಗ್ ಆಗಿದ್ದು? ತುಂಬಾ ಸಂತೊಷ್ ಎಂದೇ. ಆದ್ರೆ ನನಗೆ ತುಂಬಾ ನಿರಾಶೆ ಆಯ್ತು  ಜೀವನದಲ್ಲಿ ಮೊದಲಬಾರಿ ಇಷ್ಟವಾದ ಹುಡುಗಿ ಸಿಗ್ತಾ ಇಲ್ಲಾ , ಇಷ್ಟು ದಿವಸದಿಂದ ಸಂಗೀತಳ ಜೊತೆ ಕಟ್ಟಿದ ಕಲ್ಪೇನಗಳು ಹಾಗೆಯೇ ಕಲ್ಪನೆಆಗಿಯೇ ಉಳಿದವು. ನನ್ನ ಸಪ್ಪೆ ಆದ ಮುಖ ನೋಡಿ ರಾಯರು ಅಲೋಕ ನೀವು ಪ್ರಯಾಣದಿಂದ ಸುಸ್ತಾಗಿದಿರಿ ಅನ್ನಿಸುತ್ತೆ ಸ್ವಲ್ಪ ವಿಶ್ರಾಂತಿ ತಗೊಳ್ಳಿ ಎಂದರು. ನನಗೇ  ಆದ ಹತಾಶೆಯನ್ನು ತೋರಿಸದೆ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡೆ. ಕಾರ್ಯಕ್ರಮದ ಮಧ್ಯದಲ್ಲಿ ರಾಯರು ಹುಡುಗ ಅಮೇರಿಕಾದಲ್ಲಿ ಸಾಫ್ಟ್ ವೇರ  ಇಂಜಿನಿಯರ್ ಎಂದು ಹೇಳಿದರು. ಹುಡುಗ ಕೂಡ ನೋಡಲಿಕ್ಕೆ ಸುಂದರವಾಗಿದ್ದ. ಸಂಗೀತಳ ಆಯ್ಕೆ ಬಗ್ಗೆ ಹೆಮ್ಮೆ ಆಯ್ತು .ಕಾರ್ಯಕ್ರಮದ ಕೊನೆಯಲ್ಲಿ ಇಬ್ಬರಿಗೂ ನನ್ನ ಶುಭಾಶಯಗಳನ್ನು ಹೇಳಿದೆ.


                      ಮರುದಿವಸ ಕಾವೇರಿ ಆಂಟಿ ನನ್ನ ಕರೆದು ಅಲೋಕ ಇನ್ನು ಎರಡು ತಿಂಗಳ ನಂತರ ನಮ್ಮ ಸಂಗೀತಳ ಮದುವೆ ಅದಕ್ಕೆ ನೀನು ಒಂದು ತಿಂಗಳ ಒಳಗೆ ಮನೆ ಖಾಲಿ ಮಾಡ್ತಿಯಪ್ಪ ಎಂದು ಹೇಳಿದರು. ಸರಿ ಆಂಟಿ ಎಂದೇ. ಬೈಕ್ ಸ್ಟಾರ್ಟ್ ಮಡಿ ಮತ್ತೆ  ಹೊಸ ಬಾಡಿಗೆ ಮನೆ ಹುಡುಕಲು ಹೊರಟೆ. ಮತ್ತೆ ಅದೇ ಪರಸ್ತ್ಥಿತಿ ,ಅದೇ "ಮನೆ ಬಾಡಿಗೆ ಮನೆ " ಹುಡುಕಾಟ್. ದೂರದಲ್ಲಿ ರೆಡಿಯೋದಿಂದ ಹಿಂದಿ ಮರೆ ಅಪ್ನೆ ಚಿತ್ರದಿಂದ ಕಿಶೋರ ಕುಮಾರ್ ಹಾಡಿದ "ಕೋಯೀ ಹೊತಾ ಜಿಸಕೋ ಹುಮ ಅಪನಾ ಕೆಹೇತೆ " ಹಾಡು ಬರ್ತಾ ಇತ್ತು . ಇದು ಕಾಕತಾಳಿಯೋ ಅಥವಾ ಬಗವಂತ್ ನನಗೆ ಸಂತ್ವಾನ ಮಾಡಲು ಮಾಡಿದ ಕೆಲಸವೋ ಗೊತ್ತಾಗಲಿಲ್ಲ . ಅಷ್ಟರಲ್ಲಿ ಒಂದು ಮನೆ ಮುಂದೆ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್ ಕಂಡು ಬಂತು.

Comments