ನೆಲೆ

ನೆಲೆ

 ಕೆಲವೊಂದು ಪದಗಳು ಮನದಾಳದಲ್ಲಿ ಮನೆ ಮಾಡಿಬಿಡುತ್ತೆ, ಅದಕ್ಕೆ ಕಾರಣ ಬಹುಶ: ಆ ಪದದ ಉಪಯೋಗ, ಅರ್ಥ ಅಥವಾ  ಮತ್ತೇನೋ ವಿಶೇಷತೆ ಇದ್ದು ಅದರಿಂದ ನಾವೇನೋ ಹೊಸೆತು ಕಲಿತಿರುತ್ತೇವೆ. ಅಂತಹ ಪದಗಳ ಪುಂಜದಲ್ಲಿ "ನೆಲೆ " ಅನ್ನೋ ಪದ ನನ್ನನ ಸೆಳೆದಿದ್ದು ನಾನು ೭ನೇ ತರಗತಿಯಲ್ಲಿದ್ದಾಗ, ಮೈಸೂರಿನ ಒಂಟಿಕೊಪ್ಪಲಿಂದ ಬೋಗಾದಿಗೆ  ಮನೆ  ಬದಲಾಯಿಸಿದ್ವಿ .  ಅಂದು ಮೈಸೂರಿನ ನಗರ ಬಸ್ ನಿಲ್ದಾಣದಿಂದ ೫೧ ಬಸ್ ನಲ್ಲಿ ಮನೆಗೆ ಹೊರಟಿದ್ದೆ. ಈ ಬಸ್ ನಿಂದ ನನಗೆ ಮನೆ ತಲುಪುವ ಸಂಪೂರ್ಣ ದಾರಿ ತಿಳಿದಿರಲಿಲ್ಲ, ಮಾರುತಿ ಟೆಂಟ್ ನಿಲ್ದಾಣದಿಂದ ಒಂದೇ ನೆರಮಾರ್ಗ ಹಿಡಿದರೆ  ನಮ್ಮ ಮನೆಯ ಎಂದು ತಿಳಿದಿತ್ತು ಆದರೆ ಎಂದಿಗೂ ಆ ಮಾರ್ಗದಲ್ಲಿ ನಾನು ಹೋಗಿರಲಿಲ್ಲ . ನನ್ನ ನಿಲ್ದಾಣ ಬಂದ ತಕ್ಷಣ ಕೆಳಗೆ ಇಳಿದು  ನೋಡಿದರೆ ಅಲ್ಲಿ ೨ ದಾರಿಗಳಿವೆ , ಅವುಗಳಲ್ಲಿ ಯಾವದನ್ನು ನಾನು ಹಿಡಿಯಲಿ ಎಂಬ ಪ್ರಶ್ನೆ ಬಂತು, ಒಮ್ಮೆ ದೂರದಲ್ಲಿ ನೋಡಿದೆ ; ಅಂದು ಆ ರಸ್ತೆ  ಪೂರ್ತಿ ಖಾಲಿ ದೂರದಲ್ಲಿ ನೋಡಿದರೆ ಎಲ್ಲೋ ಒಂದೋ ಎರಡು ಮನೆಗಳು. ತುಂಬಾ ಯೋಚಿಸ್ತಾ ಇದ್ದಾಗ, ದೂರದಲ್ಲಿ ಸುಮಾರು ೧ ಕಿ ಮೀ  ಅಲ್ಲಿ ವಿಶಿಷ್ಟ ಪೂರ್ಣ ಮನೆಯ ನೀರಿನ ಟ್ಯಾಂಕ್ ಕಾಣಿಸ್ತು, ಇದೆನೆಲ್ಲು ನೋಡಿದ ನೆನಪಾಯ್ತು , ಹಿಂದೆಂದೋ  ಅಕ್ಕಿ ಬಿಸಿಸಲು ಮೆಷೀನ್ ಅಂಗಡಿಗೆ ಹೋಗಬೇಕಾದ ನೋಡಿದ ಈ ಮನೆ ಇದು , ಅಲ್ಲಿಂದ  ಮನೆಗೆ ದಾರಿ ಗೊತ್ತು ಎನ್ನುತ  ನಡೆದೇ. ಆ ಮನೆಯ ಹೆಸರು " ನೆಲೆ ", ಅಂದು ನಾ ಆ ಪದ ಮತ್ತು ಅದರ ಅರ್ಥ ತಿಳಿದೇ.


ಮತ್ತೆ ನನ್ನ ಆ  ಪದ ಆವರಿಸಿದ್ದು ಬೆಂಗಳೂರುಗೆ ಬಂದ ಮೇಲೆ, ೫ ದಿನ ಇಲ್ಲಿ ಕೆಲಸ ಮಾಡು ಆಮೇಲೆ ವಾರಾಂತ್ಯ ಮೈಸೂರಿಗೆ ಹೋಗು; ಮತ್ತೆ ಸೋಮವಾರ ಬೆಂಗಳೂರು. ನಾನು ಮತ್ತು ನನ್ನ ಆಪ್ತ ಸ್ನೇಹಿತೆ ಎಂತಹ ಅಲೆಮಾರಿ ಜೀವನ ನಮ್ಮದು ಎಂದು ಎಷ್ಟೋ ಸಲ ಗೊಣಗಾಡಿ ಇದ್ದಿವಿ. ನಮ್ಮ ನೆಲೆ ಎಲ್ಲಿದೆ ಎಂಬುದು ದೊಡ್ಡ  ಪ್ರಶ್ನೆ.  ಈ ನೆಲೆಯಿಂದ  ನನಗೆ ಬಾರಿ ಬೇಸರ ಮಾಡಿಸಿದ್ದು  ಎಸ್  ಬಿ  ಐ ಬ್ಯಾಂಕ್ , ಅಲ್ಲಿ ಖಾತೆ ತೆಗೆಯಲು ಬಲು ಪ್ರಭಲವಾದ ನಿವಾಸ ಪುರಾವೆಗಳನ ಕೇಳ್ತಾರೆ. ಪಿ ಜಿ ಅಲ್ಲಿರುವ ನಾವು ಯಾವ ನಿವಾಸದ ಪುರಾವೆ ತರೋಣ ಹೇಳಿ? ನಮ್ಮ ಫೋಟಾನ್  ಅಥವಾ ಮೊಬೈಲ್ ಬಿಲ್ ಗಳಲ್ಲಿ ನಂಬಿಕೆ ಇಲ್ಲ, ಇನ್ನು ಕೆಲಸ ಮಾಡುವ ಸಂಸ್ಥೆ ಇಂದ ಕೊಡುವ ಹೆಚ್ ಆರ್ ಪಾತ್ರಗಳಲ್ಲೂ ನಂಬಿಕೆ ಇಲ್ಲ , ಕಾರಣ ಆ ಸಂಸ್ಥೆಗಳು ಎಸ್ ಬಿ ಐ ನ ಖಾತೆ ತೆರದಿಲ್ಲ.  ನಮ್ಮದೆಲ್ಲ ಎಂತಹ ಜೀವನ ಅನ್ಸ್ತು ನೆಲೆ ಇಲ್ಲದ್ದು  ಅಂತ. ಅಂದೇ ಅರಿತೆ ಆ ಪದದ ಬೆಲೆ  ಮತ್ತು ಮಹತ್ವ . ನೆಲೆ  - ನನ್ನ ಮೆಚ್ಚಿನ ಬರಹಗಾರ ಭ್ಯರಪ್ಪ ರವರ ಕಾದಂಬರಿ. ಒಂದು ಒಳ್ಳೆಯ ಪುಸ್ತಕ.

ಇನ್ನು ಸ್ವಲ್ಪ ಸಿಹಿ ಸುದ್ದಿನ ಸಂಪದರೊಂದಿಗೆ ಹಂಚಿಕೊಳ್ಳುವ ಸಮಯ!! ೧೭ ಜುಲೈ ೨೦೧೨ ಬದುಕಲ್ಲಿ ಮರೆಯಲಾಗದ ದಿನ. ಕಳೆದ ವರುಷ ನಾನು ಕರ್ನಾಟಕ ಗೃಹ ಮಂಡಳಿವತಿಯಿಂದ ಕರೆಯಲಾದ ನಿವೇಶನ/ಗೃಹ ಗಳಿಗೆ ನಾನು ಅರ್ಜಿ ಸಲ್ಲಿಸಿದ್ದೆ. ಅದರ ಪ್ರಯುಕ್ತ ಜುಲೈ ೧೭ ರಂದು ಹಂಚಿಕೆ ಕಾರ್ಯಕ್ರಮವಿತ್ತು,ಲಾಟರಿ ಆಯ್ಕಿಂದ ನನಗೆ ಗೃಹವನ್ನು ನಿಗದಿ ಪಡಿಸಿದರು;  ನನ್ನ ಹೆಸರು ಕೊನೆದಾಗಿ ಕರೆದಾಗ ಅಬ್ಬ ಸಿಕ್ಕಿತು ಅಂದುಕೊಂಡೆ. 

 ಸ್ನೇಹಿತರೆಲ್ಲ ಮನೆಗೆ " ಮಾನಸ ಸರೋವರ"  ವೆಂದು ಕರೆಯುವೆಯ ಎನ್ನಲು , ಇಲ್ಲ ನಾ ಎಂದೋ ನಿಶ್ಚಯ ಮಾಡಿರುವೆ "ನೆಲೆ" ಅಂತ -  ಕಾರಣ ಮೇಲಿರುವ ವಿವರಣೆ.

Rating
No votes yet

Comments