ಅಮರ‌..ಮಧುರ..ಪ್ರೇಮ = ಭಾಗ 13

ಅಮರ‌..ಮಧುರ..ಪ್ರೇಮ = ಭಾಗ 13

ಸೋಮವಾರ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತು ಗೆಳೆಯರೊಡನೆ ಮಾತಾಡುತ್ತಿದ್ದ ಅಮರ್ ಕೆಳಗಡೆ ಮಧುರ ಮತ್ತು ಪ್ರೇಮ ಒಟ್ಟಿಗೆ ಬರುತ್ತಿದ್ದನ್ನು ಕಂಡು ಬಹ ಖುಷಿಯಿಂದ ಕೆಳಗಿಳಿದು ಬಂದು ಅವರೆದುರಿಗೆ ಬಂದು ಇಬ್ಬರಿಗೂ ಹಾಯ್ ಎಂದ. ಪ್ರೇಮ ಎಂದಿನಂತೆ ಲವಲವಿಕೆಯಿಂದ ಹಾಯ್ ಎಂದರೆ ಮಧುರ ಮಾತ್ರ ಮುಲಾಜಿಗೆ ಂಬಂತೆ ಹಾಯ್ ಎಂದಳು. ಅಮರನಿಗೆ ಪಿಚ್ಚೆನಿಸಿತು. ಆದರೆ ಮರುಕ್ಷಣದಲ್ಲೇ ಓಹೋ ಪ್ರೇಮ ಜೊತೆಯಲ್ಲಿದ್ದಾಳೆ ಅದಕ್ಕೆ ಹೀಗೆ ವರ್ತಿಸುತ್ತಿದ್ದಾಳೆ ಎಂದುಕೊಂಡು ಓಕೆ ಪ್ರೇಮ ನಾನು ನಿನ್ನನ್ನು ಆಮೇಲೆ ಭೇಟಿ ಮಾಡುತ್ತೇನೆ. ಬಾಯ್ ಪ್ರೇಮ, ಬಾಯ್ ಮಧು.

ಅವನು ಅಲ್ಲಿಂದ ಹೋದ ಮೇಲೆ ಮಧುರ ಮತ್ತೆ ಪ್ರೇಮಳ ಮೇಲೆ ರೇಗಲು ಶುರುಮಾಡಿದಳು. ಪ್ರೇಮ ಮೊದಲು ಅವನಿಗೆ ಹೋಗಿ ಹೇಳು ಕಾಲೇಜಿನಲ್ಲಿ ಹೀಗೆ ಎಲ್ಲರ ಮುಂದೆ ಬಂದು ನನ್ನನ್ನು ಮಾತಾಡಿಸುವುದು ನನಗೆ ಇಷ್ಟವಿಲ್ಲ ಎಂದು. ನೀನು ಅಷ್ಟೇ ಆದಷ್ಟು ಅವನ ಜೊತೆ ಒಡನಾಟ ಕಮ್ಮಿ ಮಾಡಿದರೆ ಒಳ್ಳೆಯದು. ಇನ್ನೇನು ಪರೀಕ್ಷೆಗಳು ಬೇರೆ ಹತ್ತಿರವಾಗುತ್ತಿದೆ ಮೊದಲು ಓದಿನ ಕಡೆ ಗಮನ ಹಗಿಸಲು ಹೇಳು ಅವನಿಗೆ. ನೀನು ಅಷ್ಟೇ ಮೊದಲು ಓದುವುದುದರ ಕಡೆ ಗಮನ ಕೊಡು.  ಸುಮ್ಮನೆ ಆಟ ಆಡಿಕೊಂಡು ಇರಬೇಡ. ಅವನಿಗೇನು ಅವರಪ್ಪ ಚೆನ್ನಾಗಿ ಸಂಪಾದಿಸಿ ಇಟ್ಟಿರುತ್ತಾರೆ. ಅವನು ಪಾಸ್ ಆದರೂ ಒಂದೇ ಆಗದಿದ್ದರೂ ಒಂದೇ. ಆದರೆ ನಮಗೆ ಹಾಗಲ್ಲ. ಪರಿಸ್ಥಿತಿ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಕ್ಲಾಸಿನೊಳಗೆ ಹೋದರು.

 ಸಮಯದಲ್ಲಿ ಫೋನ್ ಮಾಡುವುದು ಬೇಡ ವಳು ಕ್ಲಾಸಿನಲ್ಲಿದ್ದರೆ ಫೋನ್ ತೆಗೆಯುವುದಿಲ್ಲ. ಆಮೇಲೆ ಮಾತಾಡಿದರೆ ಆಗುತ್ತದೆ ಎಂದು ಸಮಾಧಾನ ಮಾಡಿಕೊಂಡ ಅಮರ್. ಸ್ವಲ್ಪ ಹೊತ್ತಿನ ನಂತರ ಮಧುರಳೆ ಮೆಸೇಜ್ ಮಾಡಿದಳು. ಹಾಯ್ ಅಮರ್ ಸಾರಿ ಕಣೋ ಜೊತೆಯಲ್ಲಿ ಪ್ರೇಮ ಇದ್ದಳು ಅಂತ ಸರಿಯಾಗಿ ಮಾತಾಡಲಿಲ್ಲ. ನಾನೇ ಬಿಡುವು ಮಾಡಿಕೊಂಡು ಕರೆ ಮಾಡುತ್ತೇನೆ ಬೈ. ಅವನು ರಿಪ್ಲೈ ಮಾಡಿದ. ಮಧು ಐ ಕ್ಯಾನ್ ಅಂಡರ್ಸ್ಟ್ಯಾಂಡ್. ಪರವಾಗಿಲ್ಲ ನಿಧಾನವಾಗಿ ಕರೆ ಮಾಡು ಬೈ.

ಮಧ್ಯಾಹ್ನ ಅಮರ್ ಕ್ಯಾಂಟೀನ್ ನಲ್ಲಿ ಇದ್ದಾಗ ಪ್ರೇಮ ಬಂದು ಎದುರಿನಲ್ಲಿ ಕುಳಿತಳು. ಅಮರ್ ಗೆ ಯಾರೆಂದು ಗೊತ್ತಾಗಲಿಲ್ಲ. ನಂತರ ಪ್ರೇಮ ಇದ್ದಾಳೆ ಅಂದರೆ ಮಧು ಕ್ಲಾಸ್ ಬಿಟ್ಟು ಆಚೆ ಬರಲ್ಲ. ಹಾಗಿದ್ದರೆ ವಳು ಪ್ರೇಮನೆ. ಹಾಯ್ ಪ್ರೇಮ ಹೇಗಿದ್ದೀಯ? ಒಂದು ವಾರ ಆಯ್ತು ನಿನ್ನನ್ನು ನೋಡಿ. ಅಮ್ಮನ ಕೈರುಚಿ ತಿ೦ದು ಒಂದು ಸುತ್ತು ದಪ್ಪ ಆಗಿದೀಯ ನಿಸುತ್ತೆ.  ಹೌದಪ್ಪ ಒಂದೇ ವಾರದಲ್ಲಿ ದಪ್ಪ ಆಗಿಬಿಡ್ತಾರೆ...ದಪ್ಪಾನೂ ಇಲ್ಲ ಏನೂ ಇಲ್ಲ. ಮತ್ತೆ ಹೇಗೆ ನಡೀತಿದೆ ನಿಮ್ಮಿಬ್ಬರ ಪ್ರೇಮ್ ಕಹಾನಿ.  

ಕಹಾನಿನೂ ಇಲ್ಲ ಗಿಹಾನಿನೂ ಇಲ್ಲ. ಬೆಳಿಗ್ಗೆ ನೀನೆ ನೋಡಿದ್ಯಲ್ಲ ಹಾಯ್ ಎಂದರೆ ಹೇಗೆ ವರ್ತಿಸಿದಳು ಎಂದು.

ಅಮರ್, ನಾನು ನಿನಗೆ ಎಷ್ಟು ಸಲ ಹೇಳಿದ್ದೀನಿ ಅವಳ ಜೊತೆ ನಾನಿದ್ದಾಗ ಮಾತಾಡಿಸಬೇಡ ಎಂದು. ನಾನು ಜೊತೆಯಲ್ಲಿ ಇದ್ದರೆ ಅವಳಿಗೆ ಮುಜುಗರ ಅದಕ್ಕೆ ಸರಿಯಾಗಿ ಮಾತಾಡಲ್ಲ. ಅಷ್ಟೇ ಯಾಕೆ ನನಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಳು ಗೊತ್ತ. ನೀನು ಅವಳನ್ನು ಕಾಲೇಜಿನಲ್ಲಿ ಎಲ್ಲರ ಮುಂದೆ ಮಾತಾಡಿಸಬಾರದಂತೆ. ನಾನೂ ನಿನ್ನೊಡನೆ ಜಾಸ್ತಿ ಸೇರಬಾರದಂತೆ. ಪರೀಕ್ಷೆಗಳು ಹತ್ತಿರ ಬರುತ್ತಿದೆಯಂತೆ ಹಾಗಾಗಿ ಮೊದಲು ಓದಿನ ಕಡೆ ಗಮನ ಕೊಡಬೇಕಂತೆ. ನಿನಗೇನೂ ನಿಮ್ಮಪ್ಪ ಸಂಪಾದಿಸಿ ಇಟ್ಟಿದ್ದಾರೆ, ನಮ್ಮ ಪರಿಸ್ಥಿತಿ ಹಾಗಲ್ಲ ಅದೂ ಇದೂ ಅಂತ ಸರಿಯಾಗಿ ಬ್ಲೇಡ್ ಹಾಕಿದಳು. ಹೌದು ಕಣೋ ಅಮರ್, ಪರೀಕ್ಷೆಗೆ ಇನ್ನು ಕೇವಲ ಐದು ತಿಂಗಳು ಮಾತ್ರ ಇದೆ ಆಮೇಲೆ ಏನು ನಿನ್ನ ಪ್ಲಾನ್ಸ್? ಈಗೇನಾದರೂ ನೀನು ನಿನ್ನ ಪ್ರೀತಿಯ ವಿಷಯ ತಿಳಿಸಿದರೆ ನಿನಗೂ ಅದೇ ಬ್ಲೇಡ್ ಹಾಕ್ತಾಳೆ. ಅದಕ್ಕೆ ಪರೀಕ್ಷೆ ಮುಗಿಯುವ ತನಕ ಸುಮ್ಮನಿದ್ದುಬಿಡು. ಆಮೇಲೆ ಹೇಳಿದರಾಯಿತು.

ಪ್ರೇಮ ನೀನು ಹೇಳುವುದೇನೋ ಸರಿ ಆದರೆ ಈ ವರ್ಷ ನನ್ನ ಕಾಲೇಜ್ ಜೀವನದ ಕೊನೆಯ ವರ್ಷ. ಆಮೇಲೆ ನಾನು ಇಲ್ಲೇ ಇರುತ್ತೇನೋ ಎಲ್ಲಿರುತ್ತೇನೋ ಗೊತ್ತಿಲ್ಲ. ಮತ್ತೆ ಯಾವಾಗ ನಾನು ಅವಳಿಗೆ ನನ್ನ ವಿಷಯ ತಿಳಿಸುವುದು. ಅಮರ್, ಒಂದು ವೇಳೆ ನೀನು ಅವಳಿಗೆ ನಿನ್ನ ವಿಷಯ ಹೇಳಿ ಅವಳು ಒಪ್ಪಿದಳು ಎಂದು ಇಟ್ಟುಕೋ. ತಕ್ಷಣವಂತೂ ನಿಮ್ಮಿಬ್ಬರ ಮದುವೆ ಸಾಧ್ಯವಿಲ್ಲ. ಏಕೆಂದರೆ ನಮ್ಮಿಬ್ಬರ ಕಾಲೇಜ್ ಮುಗಿಯಲು ಇನ್ನೂ ಎರಡು ವರ್ಷ ಇದೆ. ಅದಾದ ನಂತರ ಅವಳು ಮೊದಲೇ ಮಹಾ ಸ್ವಾಭಿಮಾನಿ, ತಾನೇ ದುಡಿದು ಸಂಪಾದಿಸಬೇಕು ಎನ್ನುವ ಮನಸ್ಥಿತಿಯವಳು. ಅವಳು ಕೆಲಸಕ್ಕೆ ಸೇರಿ ಒಂದು ವರ್ಷವಾದರೂ ಆಗಬೇಕು. ಆಮೇಲಷ್ಟೇ ನಿಮ್ಮಿಬ್ಬರ ಮದುವೆ ಸಾಧ್ಯ. ಆದ್ದರಿಂದ ಈಗಲೇ ಅವಳಿಗೆ ಈ ವಿಷಯ ಹೇಳಬೇಡ.

ಸರಿ ಪ್ರೇಮ ನೀನು ಹೇಳುವುದು ಸರಿ ಇದೆ. ಇನ್ನು ಐದು ತಿಂಗಳು ಹೇಗೆ ನಡೆಯುತ್ತಿದೆಯೋ ಹಾಗೆ ನಡೆಯಲಿ ಆಮೇಲೆ ಕಾಲವೇ ನಿರ್ಧರಿಸಲಿ. ತುಂಬಾ ಥ್ಯಾಂಕ್ಸ್ ಪ್ರೇಮ ನಿನ್ನ ಸಲಹೆಗೆ. ಅದಕ್ಕೆ ಹೇಳೋದು ನೀನು ನನ್ನ ಮೆಚ್ಚಿ ಗೆಳತಿ ಎಂದು. ನನ್ನ ಮನಸನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀಯ ನೀನು.  ಮುಂದೆ ಒಂದು ವೇಳೆ ನನಗೆ ಮಧುರ ಜೊತೆ ಮದುವೆ ಆದರೆ ನೀನು ನಿನ್ನ ಗಂಡನೂ ನಮ್ಮ ಜೊತೆಯಲ್ಲೇ ಇದ್ದು ಬಿಡಿ. ನನಗೆ ಯಾವಾಗ ನಿನ್ನ ಸಲಹೆಯ ಅಗತ್ಯ ಬರುತ್ತದೋ ಆಗ ಕೂಡಲೇ ನಿನ್ನ ಬಳಿ ಕೇಳಬಹುದು ಏನಂತೀಯ...

ಹಾಗೆ ಆಗಲಿ ಸರ್ ಹ್ಹ...ಹ್ಹ...ಹ್ಹ...ಹ್ಹ...., ಯಾಕೆ ಪ್ರೇಮ ಹಾಗೆ ನಗ್ತಾ ಇದ್ದೀಯ? ನಾನೇನು ಅಂತ ತಮಾಷೆ ಮಾಡಿ ಅಂತ ಈ ಪರಿ ನಗ್ತಾ ಇದ್ದೀಯ?

ಏನಿಲ್ಲ ಕಣೋ...ನೀನು ಹೇಳಿದ್ಯಲ್ಲ ನಾನು ಮಧುರ ಒಂದೇ ಕಡೆ ಇರಬೇಕು ಎಂದು. ಆಮೇಲೆ ನಿನಗೂ ನನ್ನ ಗಂಡನಿಗೂ ಹತ್ತಿದ ಜಗಳ ಹರಿಯಲ್ಲ. ಯಾಕೆ ಹೇಳು ಆಮೇಲೆ ನೀನು ನನ್ನನ್ನು ಮಧುರ ಎಂದುಕೊಂಡು ಅವನು ಮಧುರಳನ್ನು ನಾನೆಂದುಕೊಂಡು....ಹ್ಹ...ಹಹ್ಹ....ಹ್ಹ...ಅದಕ್ಕೆ ನಗು ಬಂತು ಅಷ್ಟೇ. ಮೊದಲು ನೀನು ಪರೀಕ್ಷೆ ಮುಗಿಸು ಆಮೇಲೆ ನೀನಂದ ಹಾಗೆ ಕಾಲವೇ ನಿರ್ಧರಿಸಲಿ.  ಅಷ್ಟರಲ್ಲಿ ಪ್ರೇಮಳ ಮೊಬೈಲ್ ರಿಂಗಾಯಿತು. ನೋಡಿದರೆ ಮಧುರ ಕರೆ ಮಾಡಿದ್ದಳು. 

ಸರಿ ಅಮರ್ ನಾನು ಹೊರಡುತ್ತೇನೆ. ಇನ್ನು ಇಷ್ಟು ಹೊತ್ತು ನಿನ್ನೊಡನೆ ಯಾಕೆ ಮಾತಾಡಿದೆ ಎಂದು ಅದಕ್ಕೂ ಬ್ಲೇಡ್ ಹಾಕುತ್ತಾಳೆ ನಮ್ಮಕ್ಕ. ಕ್ಲಾಸಿನಲ್ಲಿ ಲೆಕ್ಚರರ್ ಹಾಕುವ ಬ್ಲೇಡ್ ತಡೆದುಕೊಳ್ಳಬಹುದು. ಆದರೆ ಮಧು ಹಾಕುವ ಬ್ಲೇಡ್ ತಡೆಯಲು ಆಗಲ್ಲ. ಕಿವಿಯಲ್ಲಿ ರಕ್ತವೇ ಬಂದು ಬಿಡುತ್ತದೆ. ಹಾಗೆ ಕುಯ್ತಾಳೆ ಅವಳು. ಸರಿ ಸರಿ...ಆಮೇಲೆ ಸಿಗೋಣ ಬೈ..ಬೈ ಪ್ರೇಮ...ಥ್ಯಾಂಕ್ಸ್ ಫಾರ್ ಯುವರ್ ಟೈಮ್.

ಪ್ರೇಮ ಹೇಳಿದ ಮಾತುಗಳು ಅಮರನ ತಲೆಯಲ್ಲಿ ಗಿರಾಕಿ ಹೊಡೆಯುತ್ತಿದ್ದವು. ಇವಳು ನೋಡಿದರೆ ಪರೀಕ್ಷೆ ಮುಗಿಯುವ ತನಕ ಸುಮ್ಮನಿರು ಎನ್ನುತ್ತಿದ್ದಾಳೆ. ಈಗಲೇ ಅಪರೂಪಕ್ಕೊಮ್ಮೆ ಎಂಬಂತೆ ಮಾತಾಡುತ್ತಾಳೆ ಮಧು, ಆಮೇಲೆ ನಾನು ಕಾಲೇಜ್ ಬಿಟ್ಟ ಮೇಲೆ ಮಾಡುತ್ತಾಳ? ಅದೂ ಅಲ್ಲದೆ ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಅಮ್ಮ ಏನು ಹೇಳುತ್ತಾರೋ? ಒಂದು ವೇಳೆ ಅಲ್ಲಿಗೆ ಬಂದುಬಿಡು ಎಂದರೆ ನಾನೆಂದು ಹೇಳಲಿ. ಮಧುರಳ ಒಪ್ಪಿಗೆ ಇಲ್ಲದೆ ಅಮ್ಮನಿಗೆ ವಿಷಯ ತಿಳಿಸುವುದು ಬೇಡ. ಮೊದಲೇ ತಿಳಿಸಿ ಆಮೇಲೆ ಮಧು ನನ್ನನ್ನು ತಿರಸ್ಕರಿಸಿದರೆ ಸುಮ್ಮನೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಮೊದಲು ಪರೀಕ್ಷೆಗೆ ಮತ್ತು ಕ್ಯಾಂಪಸ್ ಇಂಟರ್ವ್ಯೂ ಗೆ ಸಿದ್ಧತೆ ಮಾಡಿಕೊಳ್ಳೋಣ. ಆಮೇಲೆ ಮುಂದಿನದು ನಿರ್ಧಾರ ಮಾಡೋಣ ಎ೦ದುಕೊಂಡು ಕ್ಲಾಸಿನ ಕಡೆ ಹೊರಟ.

Rating
No votes yet

Comments