' ಉಯ್ಯಾಲೆ'
ಶ್ರಾವಣದ ಪಂಚಮಿ ಊರ ಹೊರ ಬಯಲು
ಹಳೆಯ ಹುಳಿ ಮಾವು ಮರ
ಸರಿದ ಕಾಲದ ಸಾಕ್ಷಿ
ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ
ಶ್ರಾವಣಕೊಮ್ಮೆ ಬರುವ ಉಯ್ಯಾಲೆ
ತೂಗಲು ಸಿದ್ಧವಿದೆ ಭವದಿಂದ ಭುವಿಗೆ
ಚಂಚಲೆ ರಾಗಿಣಿ ಏರಿಹಳು ಉಯ್ಯಾಲೆ
ನೆಟ್ಟಿಹಳು ನೋಟ ನಕ್ಷತ್ರ ಲೋಕದೆಡೆಗೆ
ಎಷ್ಟು ಸುಂದರ ಕನಸು ತಾರೆ ಲೋಕದ ಪಯಣ
ಗ್ರಹ ತಾರೆ ನಿಹಾರಿಕೆ ಹಾಲುಪಥಗಳ ದಾಟಿ
ಎಷ್ಟು ಸಂಚರಿಸಿದರೂ
ಎಲ್ಲಿಯೂ ಕಾಣದು ಗಗನದಂಚು
ಒಂದೊಂದು ನಕ್ಷತ್ರ ವಿಸ್ತಾರ ಪರಿಧಿ ಕೋಟಿ
ಕೋಟಿ ನಕ್ಷತ್ರಗಳು ಹೋಗುವುದು ಎಲ್ಲಿ ?
ಸಾಗಬೇಕಿದೆ ಪಯಣ
ಜ್ಯೋತಿರ್ವರ್ಷಗಳ ದೂರ
ಕೋಟಿ ಅಬ್ಜ ನಿಖರ್ವ ! ಸಂಖ್ಯಾ ಶಾಸ್ತ್ರ
ಸೋತು ಮಲಗಿಹುದಿಲ್ಲಿ
ನಕ್ಷತ್ರ ಲೋಕದ ಕನಸು ಬೇಕು
ಕನಸಲಿ ವಿಹರಿಸುವ ಮನಸು ಬೇಕು
ಮತ್ತೇರಿ ಬರುತಲಿವೆ ದಟ್ಟ ಕರಿ ಮೋಡಗಳು
ಮೊಳಗುತಿದೆ ಸಿಡಿಲು ಗುಡುಗುಗಳ ರಣಭೇರಿ
ಕಣ್ಣು ಕೋರೈಸುವ ಕಾಂತಿಯ ಮಿಂಚುಗಳು
ಕರಿಯ ಗರ್ಭದಲಿ ಮಿಂಚು ಬೆಳಕಿನ ಸೆಳಕು
ಬಿಳಿ ಬಂಜೆ ಕರಿ ಜೀವ ಜೀವ ಸೆಲೆಯುಗಮ
ಹೆದರದಿರು ತರಳೆ ಏರು ' ಉಯ್ಯಾಲೆ '
ಎದೆಯ ಗೂಡನು ಬಿಚ್ಚಿ ಕನಸುಗಳ
ಹೊರ ತೆಗೆದು ನೀರು ಗೊಬ್ಬರವುಣಿಸಿ
ಹೃದಯ ಗರ್ಭದಿ ಆಳ ಬೇರುಗಳ ಇಳಿಸು
ಕನಸು ನನಸಾಗಿಸಲು ಜೋಕಾಲಿಯನು
ಜೀಕು ಮೇಲು ಮೇಲಕೆ ಸಾಗು
ತೆರೆದು ಕೊಳ್ಳುವುದು ನವ ನವೀನ ಲೋಕ
ಆದಿ ಅಂತ್ಯಗಳಿಲ್ಲ ದ್ವೇಷಾಸೂಯೆಗಳ ಹಂಗಿಲ್ಲ
ಸಂಕುಚಿತ ಲೋಕದ ಕಟ್ಟು ಪಾಡುಗಳಿಲ್ಲ
ನಿನ್ನೊಲುಮೆಯ ನಲ್ಲ ಸಿಕ್ಕರೂ ಸಿಗಬಹುದು
ಪಯಣಿಸು ಎಲ್ಲ ಅಡೆತಡೆಯ ನೀಗಿ
ಕುಗ್ಗದಿರು ಹೆಣ್ಣೆ ಮುಂದೆ ಕಾದಿದೆ ಸಗ್ಗ
ನಕ್ಷತ್ರ ಪುಂಜಗಳ ಸ್ವರ್ಗಲೋಕ ವಿಹರಿಸು
ಮನದಣಿಯೆ ಇಚ್ಛೆ ತೀರುವ ವರೆಗೆ
ಯಾರಂಕುಶ ವಿಲ್ಲದ ' ನಿರ್ಭೀತ ಲೋಕ '
ಬರಿಯ ಕನಸೊಂದೆ ನಿಜವಲ್ಲ ಹುಡುಗಿ
ವಾಸ್ತವದ ಮಣ್ಣೆ ನಿತ್ಯ ಸತ್ಯ ವಾಸ್ತವದಿಳೆ
ಕನಸಿನಾಕಾಶ ಕನಸು ವಾಸ್ತವ ನಡುವೆ
ಉಯ್ಯಾಲೆಯಾಟ ಯುಗದಿಂದ ಯುಗಕೆ
ಸಾಗಿ ಬಂದಿದೆ ಬದುಕು ನಶ್ವರ ಬದುಕಿನ
ಉಯ್ಯಾಲೆಯಾಟ ಶ್ರಾವಣ ಬಂದು
ಮತ್ತೆ ಶ್ರಾವಣ ತೆರಳಿ ನವ ಮನ್ವಂತರಕೆ
ಸಾಗಿದೆ ' ಜೀವನದುಯ್ಯಾಲೆಯಾಟ '
***
Comments
ಉ: ' ಉಯ್ಯಾಲೆ': ಹಿರಿಯರೆ
In reply to ಉ: ' ಉಯ್ಯಾಲೆ': ಹಿರಿಯರೆ by venkatb83
ಉ: ' ಉಯ್ಯಾಲೆ': ಹಿರಿಯರೆ
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by makara
ಉ: ' ಉಯ್ಯಾಲೆ'
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by partha1059
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by Premashri
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by partha1059
ಉ: ' ಉಯ್ಯಾಲೆ'
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by swara kamath
ಉ: ' ಉಯ್ಯಾಲೆ'
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by swara kamath
ಉ: ' ಉಯ್ಯಾಲೆ'
ಉ: ' ಉಯ್ಯಾಲೆ' @ ಹಿರಿಯರೇ
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by makara
ಉ: ' ಉಯ್ಯಾಲೆ'
In reply to ಉ: ' ಉಯ್ಯಾಲೆ' by Premashri
ಉ: ' ಉಯ್ಯಾಲೆ'