ಕತ್ತಲು ನಡಿಗೆ

ಕತ್ತಲು ನಡಿಗೆ

ಕವನ

ಕತ್ತಲೆಯಲಿ ಅನವರತ ನಡಿಗೆ
ಹೊರಟಿರುವೆ ಹುಡುಕುತ ಬದುಕಿನ ಅರ್ಥವ
ಕಣ್ತೆರೆದು ಹುಡುಕಲೇ
ಕಣ್ಮುಚ್ಚಿ ಹುಡುಕಲೇ .

ಕನಸಿನ ಹಾಗೆ ತೋರುವ ವಾಸ್ತವ
ವಾಸ್ತವದ ಹಾಗೆ ಅನಿಸುವ ಕನಸುಗಳು
ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ
ಕಣ್ತೆರೆದರೊಂದು,ಕಣ್ಮುಚ್ಚಿದರೊಂದು .

ಹಿಂದೆ ಸವಿದ ದಾರಿ
ಮುಂದೆ ಸವೆಯುವ ದಾರಿಗೆ ಪ್ರೇರಣೆ
ಹೆದರದಿರು ಮನವೇ
ಸಾಗಲಿ ನಿರಂತರ ಅನ್ವೇಷಣೆ

 

Comments