ಕಮಲಿ
ಕವನ
ಆಗತಾನೆ ಕಮಲಿ ಜನಿಸಿದಳು
ಮಗುವಿನ ಮುಖ ತಾಯಿಯನ್ನೆ ಹೋಲುತಿತ್ತು
ಜನಿಸಿದ ವಿಷಯ ತಿಳಿದು ತಂದೆ
ಮನೆಗೆ ಬಂದು ನೋಡಿದ
ಹೆಣ್ಣು ಮಗು ಎಂದು ತಿರಸ್ಕಾರದ ನೋಟ ಬೀರಿದ
*****
ಕಮಲಿ ಶಾಲಿಗೆ ಹೋಗಲು ಶುರು ಮಾಡಿದಳು
ಆಟ-ಪಾಠ ಎಲ್ಲದರಲ್ಲೂ ನಮ್ಮ ಕಮಲಿಯೇ ಮುಂದು
ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಳು
ತಂದೆ-ತಾಯಿಯರ ಕೀರ್ತಿಯನು ಹೆಚ್ಚಿಸಿದಳು
*******
ಮದುವೆಯಾಗಿ ಕಮಲಿ ಗಂಡನ ಮನೆಗೆ ಹೋದಳು
ತಾಯಿಯಾಗುವ ಮುಂಚೆ ಕಮಲಿ ವಿಧವೆಯಾದಳು !!!
ಅತ್ತೆ-ಮಾವ ಮನೆಯಿಂದಾಚೆ ದೂಡಿದರು
ಧೈರ್ಯಗೆಡದೆ ಕಮಲಿ ಏಕಾಂಗಿಯಾಗಿ ಬದುಕಿದಳು
*****
ಕಮಲಿ ಎಂದೂ ಬೇರೆಯವರನ್ನು ಆಶ್ರಯಿಸಲಿಲ್ಲ
ಕಮಲಿಯ ವಿದ್ಯೆ ಸ್ವಾಭಿಮಾನ ಅವಳ ಕೈ ಬಿಡಲಿಲ್ಲ
ತನ್ನಂತ ಅನೇಕ ಮಹಿಳೆಯರಿಗೆ ದಾರಿದೀಪವಾದಳು
ಕಮಲಿಯಂತ ಮಗಳು ಎಲ್ಲರಿಗೂ ಇರಲಿ
*****
Comments
ಉ: ಕಮಲಿ
In reply to ಉ: ಕಮಲಿ by Rajendra Kumar…
ಉ: ಕಮಲಿ
In reply to ಉ: ಕಮಲಿ by makara
ಉ: ಕಮಲಿ
In reply to ಉ: ಕಮಲಿ by Rajendra Kumar…
ಉ: ಕಮಲಿ