ಅಮರ‌..ಮಧುರ..ಪ್ರೇಮ = ಭಾಗ 15

ಅಮರ‌..ಮಧುರ..ಪ್ರೇಮ = ಭಾಗ 15

ಪರೀಕ್ಷೆಗಳು ಮುಗಿದು ಮೊಟ್ಟ ಮೊದಲ ಬಾರಿಗೆ ಮಧುರ ಪ್ರೇಮಗಿಂತ ಮೇಲುಗೈ ಸಾಧಿಸಿದ್ದಳು. ಮಧುರ ಆ ವರ್ಷ ಇಡೀ ಕಾಲೇಜ್ ಗೆ ಟಾಪರ್ ಆಗಿ ಬಂದಿದ್ದಳು. ಪ್ರೇಮಳ ಲೆಕ್ಚರರ್ ಪ್ರೇಮ ಬಳಿ ಬಂದು ಪ್ರೇಮ ನಾನು ನಿನಗೆ ತುಂಬಾ ದಿನದಿಂದ ಹೇಳುತ್ತಾನೆ ಇದ್ದೆ. ಓದಿನ ಕಡೆ ಹೆಚ್ಚು ಗಮನ ಕೊಡು ಎಂದು ಆದರೆ ನೀನು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನೀನು ಪಾಸ್ ಆಗಿದ್ದೀಯ ಆದರೆ ಕೇವಲ ೨೦ ಮಾರ್ಕ್ಸ್ ಇಂದ. ಲೆಕ್ಕಕ್ಕೆ ಪಾಸ್ ಆಗಿದ್ದೀಯ ಅಷ್ಟೇ ಆದರೆ ನಿನ್ನ ಟ್ರಾಕ್ ರೆಕಾರ್ಡ್ ಒಮ್ಮೆ ನೋಡಿಕೋ. ನೋಡು ಪ್ರೇಮ ನಿನ್ನ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಇನ್ನು ಎರಡು ವರ್ಷ ಅದೆಲ್ಲ ಮರೆತು ಕಷ್ಟ ಪಟ್ಟು ಓದು. ಇಲ್ಲದಿದ್ದರೆ ಈ ಸಲ ೨೦ ಮಾರ್ಕ್ಸ್ ಇಂದ ಪಾಸ್ ಆಗಿದ್ದೀಯ ಆದರೆ ಇದೆ ಮುಂದುವರಿದರೆ ಫಲಿತಾಂಶ ಕೆಟ್ಟದಾಗಿ ಇರುತ್ತದೆ. ನಿನ್ನಂಥ ಬ್ರಿಲಿಯಂಟ್ ವಿದ್ಯಾರ್ಥಿಗಳು ಹೀಗೆ ಆದರೆ ಹೇಗೆ. ನಿನ್ನಕ್ಕ ನೋಡು ಕಠಿಣ ಶ್ರಮದಿಂದ ಹೇಗೆ ಮೇಲುಗೈ ಸಾಧಿಸಿದ್ದಾಳೆ. ಏನಪ್ಪಾ ಇವಳು ಯಾರು ನನಗೆ ಇದೆಲ್ಲ ಹೇಳಲು ಎಂದುಕೊಳ್ಳುತ್ತಿರಬಹುದು ನೀನು ಆದರೆ ಒಂದು ಒಳ್ಳೆ ಹುಡುಗಿ ಭವಿಷ್ಯ ಹಾಳಾಗಬಾರದೆಂದು ಹೇಳುತ್ತಿದ್ದೇನೆ. ಇದರ ಮೇಲೆ ನಿನ್ನಿಷ್ಟ.


ಪ್ರೇಮ ಫಲಿತಾಂಶ ತಿಳಿದು ಅವರ ಅಪ್ಪ ಅಮ್ಮ ಕೂಡ ಊರಿನಿಂದ ಬಂದು ಬುದ್ಧಿ ಹೇಳಿ ಹೋದರು. ಮಧುರ ಸಹ ಅವಳಿಗೆ ಬುದ್ಧಿ ಹೇಳಿದಳು. ಪ್ರೇಮ ನೀನು ನನಗೆ ಮಾತು ಕೊಟ್ಟಿದ್ದೆ. ಕಾಲೇಜ್ ಮುಗಿಯುವ ತನಕ ಅಮರನ ವಿಷಯ ಮರೆತು ಬಿಡುತ್ತೇನೆಂದು ಆದರೆ ಈಗ ಆಗಿರುವುದೇನು?. ಪ್ರೇಮ ಮಧುರಳ ಬಳಿ ಬಂದು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮಧು ನನ್ನನ್ನು ಕ್ಷಮಿಸಿಬಿಡು ನನಗೆ ಅವನನ್ನು ಮರೆಯಲು ಆಗುತ್ತಿಲ್ಲ. ಅವನೂ ಕೂಡ ಇತ್ತೀಚಿಗೆ ನನ್ನನ್ನು ಬಹಳ ಅವಾಯ್ಡ್ ಮಾಡ್ತಾ ಇದ್ದ. ಈಗ ಅವನು ಜಪಾನ್ ಗೆ ಬೇರೆ ಹೋಗುತ್ತಿದ್ದಾನೆ. ನನಗೆ ಏನು ಮಾಡಬೇಕೆಂದು ಗೊತ್ತಾಗದೆ ಓದಿನ ಕಡೆ ಗಮನ ಕೊಡಲಾಗಲಿಲ್ಲ. ಇನ್ನು ಮುಂದೆ ಸರಿಯಾಗಿ ಗಮನ ಕೊಟ್ಟು ಓದುತ್ತೇನೆ. ಹೇಗಿದ್ದರೂ ಅವನು ಕಣ್ಣ ಮುಂದೆ ಇರುವುದಿಲ್ಲ. ಪ್ಲೀಸ್ ನನ್ನ ನಂಬು ಮಧು ಎಂದು ಗಳಗಳನೆ ಅಳಲು ಶುರುಮಾಡಿದಳು.


ಪ್ರೇಮ ಆಯ್ತು ಆಯ್ತು...ನೀನು ಪ್ರತಿ ಬಾರಿ ಹೀಗೆ ಹೇಳುತ್ತೀಯ. ನನಗೂ ಬೇಸರ ಬಂದಿದೆ ನಿನ್ನ ಮಾತುಗಳನ್ನು ಕೇಳಿ ಕೇಳಿ..ಇದೆ ಕೊನೆ. ಅಪ್ಪ ಅಮ್ಮ ಹೇಳಿ ಬಿಟ್ಟಿದ್ದಾರೆ. ಈ ಬಾರಿಯೂ ಇದೆ ಫಲಿತಾಂಶ ಬಂದರೆ ಕಾಲೇಜ್ ಬಿಡಿಸಿ ಊರಿಗೆ ಕರೆದುಕೊಂಡು ಹೋಗಿ ಯಾವುದಾದರೂ ಹುಡುಗನನ್ನು ನೋಡಿ ಮದುವೆ ಮಾಡುತ್ತಾರಂತೆ. ನೋಡು ಇನ್ನು ನಿರ್ಧಾರ ನಿನಗೆ ಬಿಟ್ಟಿದ್ದೇನೆ. ಓದಾ? ಮದುವೇನ?


ಪರೀಕ್ಷೆಗಳು ಮುಗಿದ ನಂತರ ಅಮ್ಮನ ಬಲವಂತಕ್ಕೆ ಅಮರ್ ಅಮೆರಿಕಾಕ್ಕೆ ಹೋಗಿ ಎರಡು ತಿಂಗಳು ಕಳೆದು ಬಂದಿದ್ದ. ಊರಿಗೆ ಬಂದು ಎರಡು ದಿನಗಳಿಂದ ಮಧುರ ಜೊತೆ ಮಾತಾಡಲು ಪ್ರಯತ್ನ ಪಟ್ಟಿದ್ದ ಆದರೆ ಮಧುರ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಪ್ರೇಮ ಜೊತೆ ಮಾತಾಡೋಣ ಎಂದು ಪ್ರಯತ್ನಿಸಿದರೆ ಅವಳ ನಂಬರ್ ಕೂಡ ಸ್ವಿಚ್ ಆಫ್ ಎಂದು ಬರುತ್ತಿತ್ತು. ಮರುದಿನ ಅವನು ಜಪಾನ್ ಗೆ ಹೊರಡುವವನಿದ್ದ. ಇನ್ನು ಎರಡು ವರ್ಷ ಈ ದೇಶ ಮಧುರ ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲ ಎಂದು ತೊಳಲಾಡುತ್ತಿದ್ದನು. ಊರಿಗೆ ಹೊರಡುವ ಮುನ್ನ ಒಮ್ಮೆಯಾದರೂ ಮಧುರ ಜೊತೆ ಮಾತಾಡೋಣ ಎಂದುಕೊಂಡರೆ ಆಗುತ್ತಿಲ್ಲವಲ್ಲ ಎಂದುಕೊಂಡು ಒಮ್ಮೆ ಪೀಜೀ ಬಳಿ ಹೋಗಿ ನೋಡೋಣ ಎಂದುಕೊಂಡು ಪೀಜೀ ಬಳಿ ಬಂದು ವಿಚಾರಿಸಿದರೆ ಅವರಿಬ್ಬರೂ ಊರಿಗೆ ಹೋಗಿರುವುದಾಗಿಯೂ ಇನ್ನು ಎರಡು ದಿನದ ನಂತರ ಬರುವುದಾಗಿ ತಿಳಿಸಿದರು. 


ಅಮರನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಯಾಕೆ ಇಬ್ಬರೂ ಊರಿಗೆ ಹೋಗಿದ್ದಾರೆ? ಒಬ್ಬರಾದರೂ ಫೋನ್ ಆನ್ ಮಾಡಬಾರದ? ನಾನು ಅಮೆರಿಕಾದಿಂದ ಹೊರಡಬೇಕಾದರೆನೆ ಮಧುಗೆ ತಿಳಿಸಿದ್ದೆನಲ್ಲ ನಾನು ಜಪಾನ್ ಗೆ ಹೋಗುವ ದಿನಾಂಕ ಆದರೂ ಯಾಕೆ ಅವಳು ಊರಿಗೆ ಹೋಗಿದ್ದಾಳೆ. ಅದೂ ಅಲ್ಲದೆ ಫೋನ್ ಬೇರೆ ಆಫ್ ಮಾಡಿಟ್ಟಿದಾಳೆ. ಬಹುಶಃ ಅವಳಿಗೆ ಏನಾದರೂ ಆಗಿದೆಯ? ಛೆ ಹಾಗಾಗಿರಲು ಸಾಧ್ಯವಿಲ್ಲ ಇಬ್ಬರೂ ಫೋನ್ ಆಫ್ ಮಾಡಿದ್ದರೆ ಎಂದರೆ ಬೇರೇನೋ ಕಾರಣ ಇರಬಹುದು. ಅಥವಾ ಮಧುಗೆ ಮದುವೆ ಏನಾದರೂ......ಆ ಯೋಚನೆ ಬಂದ ಕೂಡಲೇ ಅಮರನ ಕಾಲುಗಳು ಕಂಪಿಸಲು ಶುರುವಾಗಿ ಕುಸಿದು ಕುಳಿತ. ಇಲ್ಲ ಇಲ್ಲ...ಹಾಗಾಗಲು ಸಾಧ್ಯವಿಲ್ಲ ಹಾಗೇನಾದರೂ  ಇದ್ದರೆ ಯಾರಾದರೂ ಒಬ್ಬರಾದರೂ ವಿಷಯ ತಿಳಿಸುತ್ತಿದ್ದರು. ಛೆ ಈಗ ಏನು ಮಾಡೋದು...ಅವರ ಊರಿಗೆ ಹೋಗಿಬಿಡಲ...ಬೇಡ ಆಮೇಲೆ ಅವರ ಅಪ್ಪ ಅಮ್ಮ ತಪ್ಪಾಗಿ ತಿಳೀದರೆ, ಅದೂ ಅಲ್ಲದೆ ಮಧುಗೆ ಅದೆಲ್ಲ ಇಷ್ಟ ಆಗಲ್ಲ....ಅಮರನ ತಲೆಯಲ್ಲಿ ಒಟ್ಟಿಗೆ ನೂರಾರು ಯೋಚನೆಗಳು ತುಂಬಿಕೊಂಡು ಒದ್ದಾಡುತ್ತಿದ್ದ.


ಹ್ಮ್ಮ್....ಬೇರೇನೂ ದಾರಿ ಇಲ್ಲ, ನಾಳೆ ಜಪಾನ್ ಗೆ ಹೋಗುವುದು ದೇವರು ನನ್ನ ಹಣೆಯಲ್ಲಿ ಮಧುರಳ ಜೊತೆ ಋಣ ಸಂಬಂಧ ಬರೆದಿದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಜಪಾನ್ ಗೆ ಹೊರಟ. ಹೊರಡುವ ಮುನ್ನ ಎಲ್ಲವನ್ನೂ ಮೆಸೇಜ್ ಮಾಡಿ ಹೊರಟ.


ಹೊಸ ದೇಶ, ಹೊಸ ಜನ, ಹೊಸ ಭಾಷೆ, ಹೊಸ ವಾತಾವರಣ ಎಲ್ಲದಕ್ಕೂ ಹೊಂದಿಕೊಳ್ಳಲು ಬಹಳ ಸಮಯ ಬೇಕು ಎಂದು ಅಮರನಿಗೆ ತಿಳಿದಿತ್ತು. ಪ್ರತಿಯೊಬ್ಬರ ಹೆಸರುಗಳು ಲಿ, ಚಾಂಗ್, ಶಿ, ಮಾ ಎಂದು ಕೊನೆಯಾಗುತ್ತಿದ್ದದ್ದು ಅಮರನಿಗೆ ನಗೆ ತರಿಸಿತ್ತು. ಅಲ್ಲಿನ ಜನರ ಮುಖಗಳು ಹೆಚ್ಚೂ ಕಡಿಮೆ ಒಂದೇ ತರಹ ಇದ್ದು ಜನಗಳು ಗುರುತು ಹಿಡಿಯಲು ಬಹಳ ಕಷ್ಟ ಪಡಬೇಕು ಎಂದುಕೊಂಡ. ಜಪಾನ್ ಗೆ ಹೋಗಿ ಎರಡು ದಿನ ಮಧುರಗೆ ಕರೆ ಮಾಡಲು ಪ್ರಯತ್ನಿಸಿದರೆ ಮತ್ತೆ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಪ್ರೇಮ ಕೂಡ ಸ್ವಿಚ್ ಆಫ ಮಾಡಿಕೊಂಡಿದ್ದಳು.


ಮೂರು ದಿನದ ನಂತರ ಕೆಲಸ ಮುಗಿಸಿ ತನ್ನ ಅಪಾರ್ಟ್ಮೆಂಟ್ ಗೆ ಬಂದ ಅಮರ್ ಮಧುರಗೆ ಕರೆ ಮಾಡೋಣ ಎಂದು ಪ್ರಯತ್ನಿಸಿದಾಗ ರಿಂಗಾಗುತ್ತಿತ್ತು. ಅಮರನಿಗೆ ಸ್ವರ್ಗವೇ ಸಿಕ್ಕಂತಾಯಿತು. ಐದಾರು ಸಲ ರಿಂಗಾದ ಬಳಿಕ ಫೋನ್ ಎತ್ತಿದ ಮಧುರ ಹಲೋ ಯಾರಿದು ಎಂದಳು. ಅವಳ ಧ್ವನಿ ಕೇಳುತ್ತಲೇ ಗದ್ಗತಿತನಾದ ಅಮರ...ಮಧು ನಾನು ಅಮರ್....ಎಂದು ಮಾತನಾಡಲು ಆಗದೆ ಬಿಕ್ಕುತ್ತಿದ್ದ. ಹೇ ಅಮರ್ ಇದು ಜಪಾನ್ ನಂಬರಾ? ಐ ಅಂ ವೆರಿ ಸಾರಿ ಕಣೋ ನೀನು ಅಂದು ಅಮೆರಿಕದಿಂದ ಫೋನ್ ಮಾಡಿ ಇಟ್ಟ ನಂತರ ಊರಿನಿಂದ ಫೋನ್ ಬಂತು. ನಮ್ಮ ತಾತ ಹೋಗಿಬಿಟ್ಟರು ಕಣೋ. ಕೂಡಲೇ ನಾನು ಪ್ರೇಮ ಊರಿಗೆ ಹೊರಟು ಬಿಟ್ಟೆವು. ಅಲ್ಲಿ ವಿಪರೀತ ಮಳೆಯಿಂದ ಒಂದು ವಾರ ವಿದ್ಯುತ್ ಇರಲಿಲ್ಲ. ಹಾಗಾಗಿ ಫೋನ್ ಗಳು ಸ್ವಿಚ್ ಆಫ್, ಲ್ಯಾಂಡ್ ಲೈನ್ ಕೂಡ ಸ್ತಬ್ಧವಾಗಿ ಹೋಗಿತ್ತು ಕಣೋ. ನನಗೆ ಗೊತ್ತು ನಿನಗೆಷ್ಟು ಬೇಸರ ಆಗಿದೆ ಎಂದು. ದಯವಿಟ್ಟು ನನ್ನನ್ನು ಕ್ಷಮಿಸು ಅಮರ್...


ಮಧು ಅಷ್ಟು ಯಾಕೆ ಕ್ಷಮಿಸು ಅಂತೀಯ. ನನ್ನ ಹಣೆಬರಹದಲ್ಲಿ ನಿನ್ನನ್ನು ಭೇಟಿ ಮಾಡಬಾರದೆಂದು ಇತ್ತೇನೋ ಅದಕ್ಕೆ ಹೀಗೆಲ್ಲ ಆಯ್ತು ಅಷ್ಟೇ. ಹ್ಮ್ಮ್...ಮತ್ತೆ ಹೇಗಿದ್ದೀಯ ಮಧು.


ಅಮರ್ ನಾನು ಚೆನ್ನಾಗಿದ್ದೀನಿ ಕಣೋ. ನೀನು ಹೇಗಿದ್ದೀಯ? ಹೇಗಿದೆ ಹೊಸ ಜಾಗ? ಹೊಸ ಜನ? ಹೊಸ ಭಾಷೆ? ಊಟ ಎಲ್ಲ ಅಡ್ಜಸ್ಟ್ ಆಯ್ತಾ? ಏನೂ ತೊಂದರೆ ಇಲ್ಲ ತಾನೆ?


ಏನೂ ತೊಂದರೆ ಇಲ್ಲ ಮಧು. ಮೊದಲೆರಡು ದಿನ ಕಷ್ಟ ಆಯ್ತು. ಆದರೆ ಏನೂ ಮಾಡಕ್ಕಾಗಲ್ಲ ಅಡ್ಜಸ್ಟ್ ಆಗಲೇ ಬೇಕಲ್ಲ. ಹೋಗ್ತಾ ಹೋಗ್ತಾ ಎಲ್ಲ ಸರಿ ಹೋಗತ್ತೆ. ಮಧು ಎಲ್ಲಕ್ಕಿಂತ ಮಿಗಿಲಾಗಿ ಐ ಅಂ ಮಿಸ್ಸಿಂಗ್ ಯೂ ಅ ಲಾಟ್. ಗಂಟೆಗೊಂದು ಬಾರಿಯಾದರೂ ನಿನ್ನ ನೆನಪು ಕಾಡುತ್ತಿದೆ. ಈ ಸಮಯದಲ್ಲಿ ನೀನು ಏನು ಮಾಡುತ್ತಿರಬಹುದು ಎಂದು ಆಲೋಚಿಸುತ್ತಿರುತ್ತೇನೆ. ಒಮ್ಮೊಮ್ಮೆ ಅಂತೂ ಬಹಳ ಕಷ್ಟ ಆಗತ್ತೆ ಮಧು. ಆದರೆ ಯಾರ ಬಳಿ ಹೇಳಲಿ ನನ್ನ ಕಷ್ಟಗಳನ್ನು.


ಅಮರ್ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ ಇನ್ನು ಎರಡು ವರ್ಷ ಅಷ್ಟೇ ತಾನೇ. ಕೆಲಸದಲ್ಲಿ ಬಿದ್ದರೆ ಎರಡು ವರ್ಷ ಹೇಗೆ ಓಡಿ ಹೋಗುತ್ತದೋ ಗೊತ್ತಾಗುವುದಿಲ್ಲ. ಆಮೇಲೆ ಇಲ್ಲೇ ಬಂದುಬಿಡು ಅಷ್ಟೇ. ನಾನೂ ಸಹ ಕಾಯುತ್ತಿರುತ್ತೇನೆ ಅಮರ ನಿನ್ನನ್ನು ನೋಡಲು. ಸರಿ ಈಗ ತುಂಬಾ ಹೊತ್ತಿನಿಂದ ಮಾತಾಡ್ತಾ ಇದ್ದೀನಿ. ಇನ್ನು ಪ್ರೇಮ ನೋಡಿದರೆ ಇಲ್ಲದ ತಲೆನೋವು ಓಕೆನ ಬಿಡುವಾದಾಗ ಮತ್ತೆ ಮಾಡು ಓಕೆ ಬೈ...


ಬೈ ಮಧು...ನನ್ನನ್ನು ನೋಡಲು ಕಾಯುತ್ತೇನೆ ಎಂದೆಯಲ್ಲ ಅಷ್ಟು ಸಾಕು ಮಧು. ನನಗೆ ಕಳೆದಿದ್ದ ಎನರ್ಜಿ ಎಲ್ಲ ಮತ್ತೆ ವಾಪಸ್ ಬಂತು. ಥ್ಯಾಂಕ್ ಯೂ ಸೊ ಮಚ್...ಬೈ ಮಧು

Rating
No votes yet