ಕಾಣದ ಲೋಕ

ಕಾಣದ ಲೋಕ

ನಾ ಕಾಣದ ಲೋಕ;
ತೆರಕೊಂಡಿತಿಂದು ಇಲ್ಲಿ,
ಕಂಡಿರದ ಮಾಟಗಳ ಕೊಡಮಾಡಿತು.

ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.

ದೂರದಿಂದ ಕಂಡೆ;
ಕಂಡು ಸೋತುಹೋದೆ,
ಮಾತುಗಳಿಲ್ಲದೆ ಮೂಕನಾಗಿಹೋದೆ.

ನೀನೇನೋ ದೋಚಿಕೊಂಡೆ;
ನಾನೇನೋ ಕಳೆದುಕೊಂಡೆ,
ಕೊಟ್ಟುಕೊಳುವ ಲೆಕ್ಕವನೂ ನಾ ಮರೆತುಹೋದೆ.

ಕೇಳರಿಯದಾ ರಾಗ;
ನಿನ್ನ ಪಿಳ್ಳಂಗೋವಿಯಲಿ,
ನನ್ನ ಸ್ಪರ್ಶದಿಂದೊಮ್ಮೆ ಮೂಡಿಬಂದ ಹಾಗೆ.

ಆಕಾಶ ಗೋಪುರದ;
ಮೇಲುಹಾಸನೂ ದಾಟಿ,
ಇಂಪಾದ ರಾಗವನ್ನು ಊದುತಿರುವ ಹಾಗೆ.

Rating
No votes yet

Comments

Submitted by kpbolumbu Fri, 09/28/2012 - 16:55

ಧನ್ಯವಾದಗಳು ನಾವಡರು, ಮಕರ, ಪ್ರೇಮಶ್ರೀ, ವೆಂಕಟ್ ಮತ್ತು ಪಾರ್ಥ.