ಪ್ರೀತಿ ಅಂದರೆ ಇದೇನಾ???‍ (ಭಾಗ‍ 1)

ಪ್ರೀತಿ ಅಂದರೆ ಇದೇನಾ???‍ (ಭಾಗ‍ 1)

ಪ್ರತಿಯೊಬ್ಬರ ಜೀವನದಲ್ಲು ಪ್ರೀತಿ ಅನ್ನೋದು ಬಂದೆ ಬರುತ್ತೆ ಅಂತಾರೆ, ಆದರೆ ಅದನ್ನು ಯಾವತ್ತು ನಂಬದೆ ಇರೋ ಹುಡುಗಿ ನಾನು.. ಯಾಕೆಂದರೆ ಪ್ರೀತಿ ಅನ್ನೋದೆಲ್ಲಾ ಬರೀ ವಯಸ್ಸಿನ ಸೆಳೆತ(ಅಟ್ರಾಕ್ಶನ್) ಅನ್ಕೊಂಡಿದ್ದೆ... ಆದರೆ ದೂರ ಹೋದ ಒಬ್ಬ ಗೆಳೆಯನನ್ನಾ ಮರಿಯೋಕೆ ಆಗದೆ ಕಣ್ನೀರು ಇಟ್ತಾಗಲೆ ನನಗೂ ಗೊತ್ತಾಗಿದ್ದು, ಪ್ರೀತೀನಾ ಕಲ್ಕೊಂಡರೆ ಜೀವನಾ ಹೇಗಿರುತ್ತೆ ಅಂತಾ...


                            ಬರೀ ಓದು,ಬರಹ,ಆಟ,ಸ್ನೇಹಿತರು,ಮನೆ ಅಂತಾ ಕಾಲ ಕಳಿತಾ ಜೀವನಾ ಎಂಜಾಯ್ ಮಡುತ್ತಿದ್ದ ಹುಡುಗಿ ನಾನು... ಪಿ.ಯು.ಸಿ ಗೆ ಕಾಲಿಟ್ಟಾಗಲೆ ಗೊತ್ತಾಗಿದ್ದು ಜೀವನ ಅಂದರೆ ಬರಿ ಇಸ್ಟೆ ಅಲ್ಲಾ ಅಂತಾ.      


                 ((ನಾನು ಓದಿದ್ದು ನವೋದಯ ಶಾಲೆಯಲ್ಲಿ... ೬ ನೇ ತರಿಗತಿ ಇಂದಾ ೧೨ ನೇ ತರಗತಿ ವರೆಗು ಉಚಿತ ಶಿಕ್ಶನ)) ಅವತ್ತು ಪಿ.ಯು.ಸಿ ಮೊದಲನೆ ದಿವಸ, ಮನದಲ್ಲಿ ಏನೋ ಕಳವಳ, ಭಯ,ಆತಂಕಾ....ಎಸ್.ಎಸ್.ಎಲ್.ಸಿ ವರೆಗೂ ಹೆಗೋ ಎನೋ ಪಾಸ್ ಆದ್ವಿ... ಆದ್ರೆ ಕಾಲೇಜ್ ಬಂದ್ವಲ್ಲಾ ಹೇಗಿರುತ್ತೋ ಏನೋ ಅನ್ನೊ ಭಯ ಮನಸಲ್ಲಿ ಇತ್ತು..ಅದ್ರಲ್ಲಿ ಬೇರೆ ನಾವು ಬರೀ ೬ ಜನಾ ಹುಡುಗಿರು ಮಾತ್ರ ಇದ್ದದ್ದು.. ಮಿಕ್ಕವರೆಲ್ಲ ೧೦ ನೇ ತರಗಯತಿ ಮುಗಿಸಿ ಬೇರೆ ಕಾಲೇಜುಗಳಿಗೆ ಹೋಗಿದ್ರು.. ಹಳೆಯ ಸ್ನೇಹಿತರೆಲ್ಲಾ ತಿರುಗಿ ಅಲ್ಲೇ ಬಂದಿದ್ದರೆ ಅಸ್ಟೊಂದು ಭಯಾ ಮತ್ತು ಆತಂಕ ಇರ್ತಾಇರ್ಲಿಲ್ಲ.. ಹೇಗೋ ಮೊದಲನೇ ದಿವಸಾ ಕಳಿತು ಅನ್ನೋವಸ್ತರಲ್ಲಿ ಪ್ರಾನ್ಶುಪಾಲರು ನಿನ್ನನ್ನಾ ಕರೀತಿದಾರೆ ಬಾ ಅಂತಾ   ನಮ್ಮ ಆಯಾ ಬಂದು ಹೇಳಿದ್ರು. ನನಗೆ ಮತ್ತಸ್ಟು ಭಯಾ ಶುರುವಾಯ್ತು.. ಮನಸ್ಸಿನಲ್ಲೇ ಭಯಾಪಡುತ್ತ   ಪ್ರಾನ್ಶುಪಾಲರ ಕೊಠಡಿಗೆ ಹೋದೆ... "ಗುಡ್ ಅಫ್ ಟರ್ ನೂನ್ ಸರ್"  ಅಂದೆ..   ಅವರಿಗೆ ಕನ್ನಡ ಭಾಶೆ ಬರದು..ಹಿಂದಿಯಲ್ಲಿಯೇ "ಅಂದರ್ ಆ ಜಾ" ಅಂತಾ ಅಂದ್ರು.. ಒಳಗೆ ಹೋಗಿ "ವ್ಹಾಯ್  ಡಿಡ್ ಯು ಕಾಲ್ಡ್ ಮಿ ಸರ್" ಅಂದೆ.. ಏನಮ್ಮಾ ಮೊದಲನೇ ದಿವಸಾನೇ ನಿನ್ನಾ ಹೆಸರಿಗೆ ಒಂದು ಕಾಗದ ಬಂದಿದೆ ಅಂತಾ ಅಂದ್ರು, ನನಗ್ಯಾರಪ್ಪಾ ಶಾಲೆ ವಿಳಾಸಕ್ಕೆ ಕಾಗದಾ ಬರೆಯೋರು ಅಂತಾ ಅನ್ಕೊಂಡು ಕಾಗದಾನಾ ಇಸ್ಕೊಂಡೆ. ನನ್ನ ಬೆಡ್ ಹತ್ರಾ ಹೋಗಿ ಕಾತುಕದಿಂದ ಕಾಗದಾನ ಓದಬೇಕು ಅಂತ ತೆಗೆದೆ..    ದೊಡ್ದ ಬಿಳೀ ಹಾಳೇಲಿ ಬರೀ ನಾಲ್ಕು ಲೈನ್ ಮಾತ್ರ ಬರಹ ಇತ್ತು.ಅದನ್ನಾ ನೋಡಿ ವಿಚಿತ್ರಾ ಆಯ್ತು, ಹಾಗೆ ಏನು ಬರೆದಿದೆ ಅಂತಾ ಓದೊ ಕುತೂಹಲಾನು ಜಾಸ್ತಿ ಆಯ್ತು... ಓದಬೇಕು ಅನ್ನೋವಸ್ಟರಲ್ಲಿ ಊಟಕ್ಕೆ ಘಂಟೆ ಹೊಡಿತು..ತಡ ಮಾಡಿದ್ರೆ ಬೈತಾರೆ ಅಂತ ಕಾಗದ ಅಲ್ಲೆ ಇಟ್ಟು ಊತಕ್ಕೆ ಹೊರಟೆ.. ನಂತರ ಬಂದ್ಮೇಲೆ ಸುಸ್ತಾಗಿತ್ತು, ಅದಕ್ಕೆ ವಿಶ್ರಾಂತಿ  ತಗೋಬೇಕು ಅಂತ ಮಲಗಿ ಬಿಟ್ಟೆ. ಆಮೇಲೆ ಓದೋಕೆ ಸಮಯಾನೆ ಸಿಗ್ಲಿಲ್ಲ.. ರಾತ್ರಿ ಊಟ ಮುಗಿದ್ ಮೇಲೆ ಒದ್ಬೇಕು ಅನ್ಕೊಂಡೆ..ಬೇರೆ ಕೆಲಸದಲ್ಲಿ ಮರೆತು ಹೋಯ್ತು. ಹಾಗೆ ಮಲಗಿ ಬಿಟ್ಟೆ. ಮಧ್ಯರಾತ್ರಿ ಎಚ್ಹರಾ ಆಯ್ತು, ೩ ತಿಂಗಳು ಮನೇಲಿದ್ದು ನಂತರ ಹಾಸ್ಟೆಲ್ ಗೆ ಹೋದ್ರೆ ಎಸ್ಟು ಧುಕ್ಶ ಆಗತ್ತೆ ಅಂತ ಮನೆಯಿಂದ ದೂರ ಇರೋರಿಗೆ ಮಾತ್ರ ಗೊತ್ತಾಗತ್ತೆ.    . ತುಂಬಾನೆ ಮನೆ ನೆನಪು ಬರ್ತಾಯಿತ್ತು, ಕಳೆದ ದಿವಸಾ ತಮ್ಮನ ಮತ್ತು ಅಮ್ಮನ ಜೊತೆ ತಿರ್ಗಾಡಿದ್ದು,ತರತರದ ತಿಂಡಿ ತಿಂದದ್ದು ಎಲ್ಲ ನೆನಪಾಗ್ತಾಇತ್ತು, ಕನ್ನಲ್ಲಿ ನೀರು ಸಹ ಬರ್ತಾಯಿತ್ತು..ಆದ್ರೆ ಏನು ಮಾಡೊದು, ಯಾಕೆ ಅಲ್ತಿದಿಯಾ ಅಂತ ಕೇಲೊಕೆ ಅಲ್ಲಿ ಅಮ್ಮ ಸಹ ಇರ್ಲಿಲ್ಲಾ.. ಅಸ್ಟರಲ್ಲಿ ಆ ಕಾಗದ ನೆನಪಯ್ತು..             ಹೇಗು ನಿದ್ದೆ ಅಂತು ಬರ್ತಿಲ್ಲ,ಅದನ್ನಾದ್ರು ಓದೋನ ಅಂತ ತೆಗೆದೆ.. ಆದ್ರೆ ಅದನ್ನ ಓದಿದ್ ಮೇಲೆ ಕನ್ನಲ್ಲಿ ಇನ್ನಸ್ಟು ನೀರು ತುಂಬಿಕೊಲ್ಟು. 


(((ಯಾಕೆ ಅಂತ ಮುಂದಿನ ಬರಹದಲ್ಲಿ ಹೇಳ್ಟಿನಿ))..