ಪೂಜಾರಿ-ಪುರೋಹಿತರು ಟೆಂಡರ್ ಪಟ್ಟಿಯಲ್ಲಿ!

ಪೂಜಾರಿ-ಪುರೋಹಿತರು ಟೆಂಡರ್ ಪಟ್ಟಿಯಲ್ಲಿ!

Comments

ಬರಹ

  ಅಲ್ಲಲ್ಲಿ ಅಷ್ಟಿಷ್ಟು ಮಳೆಯಾಗುತ್ತಿದೆಯಂತೆ; ಹವಾಮಾನ ಇಲಾಖೆ ಹೇಳುತ್ತದೆ. ಸರಕಾರದ ದೈಭಕ್ತಿಯಿಂದಲೊ ಅಥವಾ ನಿಸರ್ಗಸಿದ್ಧ ಕ್ರಿಯೆಯಾಗಿಯೋ ಎಂದೇನೂ ಅದು ಹೇಳುವುದಿಲ್ಲ! ಸರಕಾರವೆಂಬ ಕಾರ‍್ಯಾಂಗದ ’ಹಿತಾಸಕ್ತಿ’ ಮತ್ತು ಕಾರ್ಯದಕ್ಷತೆ, ಇಂದು ಎಲ್ಲಾ ಪ್ರೌಢ ಪ್ರಜೆಗಳಿಗೂ ರಟ್ಟಾಗಿರುವ ಗುಟ್ಟು. ಜನತೆಯ ಪರವಾಗಿ, ಸಾಮೂಹಿಕವಾಗಿ, ಪ್ರತಿನಿಧಿಕವಾಗಿ ಅದೀಗ ದೈವ ಪ್ರಾರ್ಥನೆ ಕೈಗೊಂಡಿದೆ ಎನ್ನುವುದಕ್ಕೆ ಜನ, ಸಿನಿಕತನ ತೋರಿದರೆ ತಪ್ಪೆಂದೇನೂ ಅನಿಸುವುದಿಲ್ಲ.
  ಸರಕಾರದ ಕೆಲಸ ಹೇಗೆ ನೆರವೇರುತ್ತದೆ? ಒಬ್ಬ ’ಸಕ್ಷಮ’ ಅಧಿಕಾರಿಯ, ನಿರ್ದಿಷ್ಟ ಫಾರ‍್ಮೆಟ್ಟಿನ ಒಂದು ಆದೇಶದಿಂದ. ಅಧೀನ ಅಧಿಕಾರಿ-ಗುಮಾಸ್ತರು ಆ ಹೆಸರಿನ ಕಡತ ಆರಂಭಿಸುತ್ತಾರೆ. ಲೋಕೋಪಯೋಗೀ ಇಲಾಖೆ - ಪಿಡಬ್ಲ್ಯುಡಿ - ಟೆಂಡರ್ ಕರೆದು ಕನಿಷ್ಠ ಬಿಡ್ಡರ್‌ಗೆ ಕಾರ‍್ಯ ಒಪ್ಪಿಸಿಕೊಡುತ್ತದೆ. ಟೆಂಡರು, ಬಿಡ್ಡರು, ಕಾಟ್ರಾಕ್ಟರು, ಬಿಲ್ ಮಂಜುರಾತಿಯೆಲ್ಲಾ ಎಲ್ಲರಿಗೂ ಗೊತ್ತಿರುವುದೇ!
  ಮಳೆ ಬರಿಸುವುದೂ ’ಲೋಕೊಪಯೊಗೀ’ ಕೆಲಸ ತಾನೇ? ಈಗ ಮುಜರಾಯಿ ಲಾಖೆಯಲ್ಲಿ ಪೂಜಾರೀ-ಪುರೋಹಿತರ ಅಧೀಕೃತ ಕಾಟ್ರಾಕ್ಟ್‌ದಾರರ ಪಟ್ಟಿ! ಮಳೆ ಬಂತೋ, ಬಡ್ತೋ; ಕಾಟ್ರಾಕ್ಟ್ ರಸ್ತೆಗೆ ಬಿಲ್ ಪಾಸದ ಮೇಲೆ, ಅದು ತಿಂಗಳಮಟ್ಟಿಗಾದರೂ ಉಳಿದಿದ್ದೀತೇ?     
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet