ವೀರಭದ್ರ
ಚಕ್ಷು ವಿಚಕ್ಷಣ ವಿಜೃಂಭಣ ದಕ್ಷ ಯಜ್ಞ ಸಂಘಟನಂ
ದೇವಾನುದೇವ ಮುನಿ ಜನ ಬಂಧು ಬಾಂಧವಾಮಂತ್ರಣಂ
ದಕ್ಷಪ್ರಜಾಪತಿ ಯಜ್ಞ ಸಂಭ್ರಮಂ ತ್ರೈಲೋಕ್ಯ ಸಂಚಲನಂ
ದಕ್ಷದುರುದ್ದೇಶ ಪೂರಣ ವಿರೂಪಾಕ್ಷ ಉಪೇಕ್ಷಣಂ
ದಕ್ಷಪುತ್ರಿ ದಾಕ್ಷಾಯಣಿ ದಕ್ಷ ಯಜ್ಞ ವೀಕ್ಷಣಾಪೇಕ್ಷಣಂ
ವಿಚಕ್ಷಿತ ಶಂಕರಂ ಶಾಂಕರೀ ನಿವೇದನಾ ಪೂರಣಂ
ಹರ್ಷಿತ ಸತಿ ಶಿವಗಣಸಹಿತ ಪಿತೃ ಗೃಹ ಗಮನಂ
ದುರ್ಮದ ದಕ್ಷ ದಾಕ್ಷಾಯಣಿ ಅನಾದರಣಾಪಮಾನಂ
ದಕ್ಷ ದೂಷಿತ ದಾಕ್ಷಾಯಣೀ ದುಖಃ ಪ್ರವರ್ಧಮಾನಂ
ದುಖಿಃತ ದಕ್ಷಪುತ್ರಿ ಭಯಂಕರ ಯಜ್ಞಾನಲ ಪ್ರವೇಶಂ
ಭಯ ವಿಭ್ರಮಿತ ಶಿವಗಣ ಕ್ರೋಧಾತಿರೋದನಂ
ಶಿವ ವಾಮಾರ್ಧಬಾಗಿನೀ ದೇಹ ದಹನ ದಾರುಣಂ
ತಾಂಡವ ರುದ್ರ ಕ್ರೋಧಾನಲ ಜಟಾಜವಿ ಪೀಡನಂ
ರುದ್ರ ಭಯಂಕರ ವೀರಭದ್ರ ಶಿವಗಣ ಪ್ರಮಥೋದ್ಭವಂ
ರುದ್ರಾದೇಶಿತ ದುಷ್ಠದಕ್ಷ ಯಜ್ಞ ವಿನಾಶನ ಕಂಕಣ ಬದ್ಧಂ
ವೀರಭದ್ರಂ ವೀರೋಚಿತ ದಕ್ಷ ನಿವಾರಣ ವೀರ ಗಣ ಪಯಣಂ
ಬದ್ಧಭೃಕುಟಿ ವೀರಗಣ ದಕ್ಷ ಪಟು ಭಟ ಘಟ ವಿಘಟನಂ
ಸಂಭ್ರಮಿತ ದಕ್ಷ ಯಜ್ಞ ಸದನ ದಾರುಣ ಭಗ್ನಂ
ಕೋಪಾವಿಷ್ಠ ಕ್ರೋಧಿತ ವೀರಭದ್ರ ಖಡ್ಗ ಸಂಚಾಲನಂ
ಶಿವದೂಷಣ ದುಷ್ಠ ದಕ್ಷಬ್ರಹ್ಮಪ್ರಜಾಪತಿ ಶಿರಚ್ಛೇದನಂ
ವಿಜಯೋನ್ಮತ್ತ ವೀರಗಣ ದಕ್ಷಶಿರ ಸಹಿತ ಕೈಲಾಸ ಪ್ರವೇಶಂ
ದಕ್ಷಶಿರ ಭಸ್ಮಿತ ಪಾಲಾಕ್ಷ ಕ್ರೋಧಾಗ್ನಿ ಶಮನಂ
ಸಕಲ ದೈವ ಮುನಿ ಜನ ಪ್ರಾರ್ಥನಂ ಶಿವ ಕಾರುಣ್ಯ ಕಟಾಕ್ಷಂ
ದಕ್ಷ ಪ್ರಜಾಪತಿ ಮುಂಡಂ ಮೇಷ ಮುಖ ಮಂಡಲ ಪ್ರಸಾದಿತಂ
ಪ್ರಾಣವಲ್ಲಭೆ ದಾಕ್ಷಾಯಣೀ ವಿರಹಂ ಶಿವ ಕೈಲಾಸ ನಿರ್ಗಮನಂ
ಧರಣಿ ಮಂಡಲಂ ಭೂಕೈಲಾಸಂ ಶಿವ ಸಮಾಧಿ ಸ್ಥಿತಿ ಪ್ರವೇಶಂ
ಲೋಕ ಕಲ್ಯಾಣ ಜಗನ್ನಾಟಕ ರಂಗ ಸಿದ್ಧಂ ಪರ್ವತ ಪುತ್ರಿ ಜನನಂ
ಶಿವ ಸಮಾಧಿ ಸ್ಥಿತಿ ಸಮಾಧಿಂ ಮನ್ಮಥ ದಹನಂ ಪ್ರೇಮಾಂಕುರಂ
ಗಿರಿಜಾ ಕಲ್ಯಾಣಂ ಕುಮಾರ ಸಂಭವ ಕ್ಷಣ ಗಣನಂ…..