ಬೇಸ್ತು ಬಿದ್ದವರಾರು ? ಜಮಾನಾದ ಜೋಕುಗಳು - ೧೦

ಬೇಸ್ತು ಬಿದ್ದವರಾರು ? ಜಮಾನಾದ ಜೋಕುಗಳು - ೧೦

    ಒಮ್ಮೆ ರೈಲಿನಲ್ಲಿ ಇಬ್ಬರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಅವರ ಎದುರು ಸೀಟಿನಲ್ಲಿ ಓರ್ವ ಹೆಂಗಸು ಹಾಗು ಅವಳ ವಯಸ್ಕ ಮಗಳು ಕುಳಿತಿದ್ದರು. ಸ್ವಲ್ಪ ದೂರ ಕ್ರಮಿಸಿದ ನಂತರ ರೈಲು ಸುರಂಗ ಮಾರ್ಗದೊಳಕ್ಕೆ ಉಪಕ್ರಮಿಸಲಾರಂಭಿಸಿತು; ಇದರಿಂದಾಗಿ ಆ ಕಂಪಾರ್ಟುಮೆಂಟಿನಲ್ಲಿ ಕತ್ತಲೆ ಆವರಿಸಿತು.   ಆಗ ಇದ್ದಕ್ಕಿದ್ದಂತೆ ಒಂದು ಮುತ್ತು ಕೊಟ್ಟ ಶಬ್ದವೂ ಅದರೊಂದಿಗೆ ಒಂದು ಛಟೀರ್ ಎಂಬ ಶಬ್ದವೂ ಕೇಳಿಬಂದವು. ಆಗ ಇಬ್ಬರು ಸ್ನೇಹಿತರಲ್ಲಿ ಒಬ್ಬ ಅಂದು ಕೊಂಡ, ಮುತ್ತು ಕೊಟ್ಟವನು ಅವನು, ಏಟು ತಿಂದವನು ನಾನು. ಆ ಹೆಂಗಸು ಅಂದುಕೊಡಳು, ನನ್ನ ಮಗಳು ಬಹಳ ಸಂಸ್ಕಾರವಂತಳು, ಮುತ್ತು ಕೊಟ್ಟವನಿಗೆ ಸರಿಯಾದ ಶಾಸ್ತಿಯನ್ನೇ ಮಾಡಿದಳು. ಆ ಮಗಳೆಂದುಕೊಂಡಳು, ಛೇ! ನನ್ನಂಥ ಹುಡುಗಿಯಿದ್ದಾಗ ಅವನು ಹೋಗಿ, ಹೋಗಿ ನನ್ನ ತಾಯಿಗೆ ಮುತ್ತು ಕೊಟ್ಟು ಏಟನ್ನು ತಿಂದ ಮೂರ್ಖ! ಎಂದು ಚಡಪಡಿಸಿದಳು. ಆಗ ಇನ್ನೊಬ್ಬ ಸ್ನೇಹಿತ, ನನ್ನ ಒಂದು ಕೈಗೆ ನಾನೇ ಮುತ್ತು ಕೊಟ್ಟುಕೊಂಡು, ಇನ್ನೊಂದು ಕೈಯ್ಯಿಂದ ನನ್ನ ಸ್ನೇಹಿತನ ಕೆನ್ನೆಗೆ ಹೊಡೆದೆ, ನಾನೇ ಬುದ್ಧಿವಂತ! ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ. 

 

Rating
No votes yet

Comments