ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
ಒಬ್ಬ ಕಳ್ಳ ಒಂದು ಶ್ರೀಮಂತರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನೆಲ್ಲ ಹೆದರಿಸಿ, ಬೆದರಿಸಿ ಇದ್ದ ಚಿನ್ನ ಮತ್ತು ಹಣವನ್ನು ದೋಚಿಕೊಂಡು ಹಿತ್ತಲ ಬಾಗಿಲ ಮುಲಕ ಹೊರಟ. ಹಿತ್ತಲಲ್ಲಿ ಕಟ್ಟಿದ್ದ ಒಂದು ಹಸು ನಕ್ಕಿತು. ಕಳ್ಳನಿಗೆ ಆಶ್ಚರ್ಯ. ಎಂತಹ ಅದ್ಭುತ! ಹಸುವಿನ ಹತ್ತಿರ ಹೋಗಿ "ನಗುತ್ತಿಯಾ, ಮಾತನ್ನೂ ಆಡುತ್ತಿಯಾ?" ಎಂದು ಹಾಸ್ಯ ಮಾಡಿದ. ಹಸು ಜೋರಾಗಿ ನಕ್ಕಿತು. ಕಳ್ಳ " ಯಾಕೆ ನಗುತ್ತಿರುವೆ? ಎಂದು ಕೋಪದಿಂದ ಕೇಳಿದ.
ಹಸು ಹೇಳಿತು " ಈ ಯಜಮಾನರ ಮನೆಯಲ್ಲಿ ನಾನು ಲೋಟ ಮಜ್ಜಿಗೆಯನ್ನು ಕದ್ದಿದ್ದೆ. ಅದರ ಸಲುವಾಗಿ ಎಷ್ಟೋ ದಿನದಿಂದ ಹಾಲು ಕೊಡುತ್ತಿದ್ದೇನೆ. ಇನ್ನು ನೀನು ಇಷ್ಟೊಂದನ್ನೆಲ್ಲಾ ಕದ್ದು ಒಯ್ಯುತಿರುವೆ. ನಾನು ಕದ್ದ ಇಷ್ಟಕ್ಕೆ ಅಷ್ಟಾದರೆ, ಇನ್ನು ನೀನು ಕದ್ದಿರುವ ಅಷ್ಟಕ್ಕೆ ಇನ್ನೆಷ್ಟೂ? " ಎಂದು ನಗು ಬಂತು.
ಹಸು ಹೇಳಿರಲಿ ಬಿಟ್ಟಿರಲಿ, ಇಲ್ಲಿರುವ ಮಾತಂತೂ ಸತ್ಯ. ಮಾಡಿದ ಪಾಪವನ್ನು ತೀರಿಸಲೇ ಬೇಕು.
" ನಗುನಗುತ್ತಾ ಮಾಡಿ ಅಳುಅಳುತ್ತ ತೀರಿಸುವುದು." " ಮಾಡಿದ್ದುಣ್ಣೋ ಮಹರಾಯ " ಎಂದು ಗಾದೆ ಮಾತುಗಳು ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಆದರೆ ನಾವು ಎಚ್ಚೆತ್ತುಕೊಳ್ಳಬೇಕು ಅಷ್ಟೇ.
(ಗೆಳೆಯ ಗಿರಿಧರ ಹೇಳಿದ ಕಥೆ)
Comments
ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
In reply to ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು? by makara
ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?
In reply to ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು? by Premashri
ಉ: ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?