ಪ್ರತಿಕ್ರಿಯೆಗಳು

ಪ್ರತಿಕ್ರಿಯೆಗಳು

ಕವನ

 

ಪ್ರತಿಕ್ರಿಯೆಗಳು

ಒಂಬತ್ತು ತಿಂಗಳು ಹೊತ್ತು ತಿರುಗಾಡಿ,
ಹೆತ್ತ ಅಮ್ಮನ ಪ್ರಸವದ ನೋವನಳಿಸಿ ಹಾಕುತ್ತವೆ
ಪುಟ್ಟ ಕಂದನ ಅಳುವಿನ, ನಗುವಿನ ಪ್ರತಿಕ್ರಿಯೆಗಳು 

ವಿರಹಕೆ ಸೊರಗಿ, ನೆನಪಲಿ ಕೊರಗಿ,
ಬಾಡಿನಿಂತಿಹ ಮನಸಿಗೆ ಅರಳಿ ನಿಲ್ಲಿಸುತ್ತವೆ
ಪ್ರಿಯತಮೆಯ ಹುಸಿಗೋಪ, ಮುಗುಳುನಗೆಯ ಪ್ರತಿಕ್ರಿಯೆಗಳು

ರಾತ್ರಿಯಲಿ ಕಳೆದು ಹೋಗಿ,
ಕತ್ತಲಲ್ಲಿ ಅಳಿದು ಹೋಗುತಿಹ ಬದುಕಿಗೆ,
ಹೊಸ ದಾರಿಯ ಆಶ್ವಾಸನೆಯಾಗಿ ನಿಲ್ಲುತ್ತವೆ
ಮುಂಜಾನೆಯ ಬೆಳಕಿನ ಪ್ರತಿಕ್ರಿಯೆಗಳು

ಗೆಳೆಯ, ಗೆಳತಿ,
ನಿನ್ನ ಒಂದು ಪ್ರತಿಕ್ರಿಯೆಗೆ
ಮತ್ತೆ ಹೊಸ ರೂಪದಲಿ
ಹುಟ್ಟಿಬರುತ್ತೇನೆ ಎನ್ನುತ್ತದೆ ನನ್ನ ಕವಿತೆ. 

ರಾಜೇಂದ್ರಕುಮಾರ್ ರಾಯಕೋಡಿ - Copyright©

Comments