ತೃಣವ ತಿಳಿದು

ತೃಣವ ತಿಳಿದು


ನೋಡಲು ಬರಿಯ ಮೋಡಗಳು
ಕ್ಷಣದಲಿ  ಸುರಿಸಿದವು
ಧಾರಾಕಾರ ಮಳೆಯನು

ನೋಡಲು ಬರಿಯ ಕಲ್ಲುಗಳು
ಒಂದಕ್ಕೊಂದು ಘರ್ಷಿಸಲು
ಸಿಡಿಸಿದವು ಬೆಂಕಿಯ ಕಿಡಿಗಳನು

ಕೇಳಲು ಬರಿಯ ಮಾತುಗಳು
ಅಂತರಾಳದಲಿ ಹುದುಗಿಹುದವೆಷ್ಟೋ ?


ನೋಟಕೆ ನಿಲುಕದ,
ಮನಕೆ ತಾಗದ
ನಿಜವು ಇರುವುದೆಷ್ಟೋ ?
ಕಣ್ಣಾರೆ ನೋಡಬಹುದೇ
ನಮ್ಮ ಮೊಗವನ್ನೇ ?

ತೃಣವ ತಿಳಿದು
ಬಿಗುಮಾನ ಪಡುವುದೇತಕೋ ?







ಕವಿಗರಾಜ ಅವರ "ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ? " ಬರಹ ಓದಿದಾಗ ತಿಂಗಳ ಹಿಂದೆ ಬರೆದಿಟ್ಟ ಕವನ ನೆನಪಾಯಿತು.  ಹಾಗೆ ಸಂಪದಕ್ಕೆ ಸೇರಿಸುವ ಮನಸ್ಸಾಯಿತು.

Rating
No votes yet

Comments