ದಿನಪತ್ರಿಕೆ ಹಾಗೊ ಇನ್ನಿತರೆ ಸುದ್ದಿ ಪ್ರಾಸಾರಗಳ್ಳನ್ನ ಓದುವ‍_‍ ಕೇಳುವ _ ನೋಡುವ ಕ್ರಿಯೆ ನಿರಾಸೆಯ ನಿಟ್ಟುಸ್ಸಿರುಲ್ಲ‌ದೆ ಇನ್ನೇನು?

Submitted by dayanandac on Tue, 07/31/2012 - 02:32

 


ಈತ್ತೀಚಿಗಿನ ಎಲ್ಲಾ ಪತ್ರಿಕೆ ಮತ್ತು ಇನ್ನಿತರ ಸುದ್ದಿ ಪ್ರಾಸಾರಗಳನ್ನ ನೋಡಿದರೆ ಅತ್ಯಂತ ನಿರಾಸಯನ್ನ ಹಾಗೊ ಖಿನ್ನತೆಯನ್ನ ಉಂಟು ಮಾಡುವುವಂತಿವೆ.  ಹಸುಗೊಸುಗಳ ಹಾಗೊ ಮಹಿಳೆಯರ ಮೇಲಿನ ನಿರಂತರ ನೆಡೆಯುತ್ತಿರುವ ದೌರ್ಜನ್ಯಗಳು, ಲೈಂಗಿಕ ಕಿರುಕುಳಗಳು. ಕೈ  ಕಟ್ಟಿ ಕುಳಿತ ನಿರಂಕುಶ ಮತಿ ಸರ್ಕಾರಗಳು.  ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ನೆಡೆಯುತ್ತಿರುವ ಅತಿರೇಕಗಳು,  ಸಂವೇದನಾಶೀಲತೆಯನ್ನೆ ಕಳೆದುಕೊೞುತ್ತಿರುವ ಯುವ ಪೀಳಿಗೆ, ಮೇಲ್ ವರ್ಗದ ಹಾಗೊ ಬಹು ಸಂಖ್ಯಾತ ಜಾತಿಗಳ ಬಲ ಪ್ರದರ್ಶನಗಳಿಂದ  ಘಾಸಿಗೊಳಾಗಾಗಿರುವ ದುರ್ಬಲ ಸಮಾಜದ ಕೀಳಿರಿಮೆಗಳು. ನ್ಯಾಯದಾನ ಮಾಡುವ ನ್ಯಾಯಧೀಶರೇ ಲಂಚಕ್ಕೆ ಕೈ ಹಾಕುವ ಹೇಯ ಕೆಲಸಗಳು. ಆಧಿಕಾರದ ತಕ್ಕಡಿಯಲ್ಲಿ ಜಾತಿ ಆಧಾರಿತ ರಾಜಕೀಯ ನೆಡೆಗಳು. ಶೈಕ್ಶಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜದವರನ್ನ ಮತ್ತೆ ಸಮಾಜದಲ್ಲಿ ಬೆತ್ತಲು ಮಾಡಿ ಗಹ ಗಹಿಸಿ ನಗುವ ಈ ಪ್ರಾಜಾಪ್ರಬುತ್ವ ದ ಹೆಸರಿನಲ್ಲಿ ನೆಡೆಯುವ ಕ್ರಿಯೆಗಳಿಗೆ ನನ್ನ ದಿಕ್ಕಾರವಿರಲಿ. ಇವೆಲ್ಲವನ್ನೊ ಮೀರಿ ನಿಲ್ಲಬಲ್ಲ ಕ್ರೀಡೆಗಳು, ಸಾಹಿತ್ಯ, ಕಲೆ ಹಾಗೊ ಇನ್ನಿತರೆ ಮನರಂಜನೆಗಳು ಕಾಸಿಗಾಗಿ ಹಾರಾಜಾಗುವ ಸರಕುಗಾಳಾಗಿರುವುದನ್ನ ನೋಡಿದರೆ ಮನಸ್ಸಿನಾಳದಲ್ಲಿ ಖಿನ್ನತೆಯ ಭಾವ, ಸೋಲಿನ ಭಯ, ಆಭದ್ರತೆಗಳು ಕಾಡುತ್ತವೆ. ಈವುಗಳನ್ನೆಲ್ಲ ಸುಡುವ ಬಗತ್ - ಸುಭಾಶ್ ಚಂದ್ರರು ಮತ್ತೊಮ್ಮೆ ನಮ್ಮ ಹೆದೆಯಾಂತರಾಳದಲಿ ಚಿಗೊರೊಡೆಯಲಿ, ಮತ್ತೆ ಕ್ರಾಂತಿಗೆ ಮುನ್ನುಡಿಯನಿಡಲಿ ಎನ್ನುವ ಆಭಿಲಾಶೆಗಳೊಂದಿಗೆ, ದಿನಕ್ಕೊಂದು ಪುಟ ಕ್ರಾಂತಿ ವೀರರ ಬಗ್ಗೆ ನಮ್ಮ ಮಕ್ಕಳಿಗೆ ಹೇಳಿಕೊಟ್ಟರೆ ಮುಂದಿನ ದಿನ ಮಾನಗಳಲ್ಲಿ ನಮ್ಮ ಮಕ್ಕಳು ಧಿಟ್ಟ ಹಾಗೊ ಗೌರವದ ಬದುಕ ನೆಡೆಸಬಲ್ಲ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲುಗಳಾಗಬಲ್ಲರು ಹಾಗೊ ಅನ್ಯಾಯವನ್ನ ಪ್ರತಿಭಟಿಸುವ ಮಾನಸಿಕ ಸ್ಥರ್ಯ ಹಾಗೊ ಸೋಲನ್ನ ಗೆಲುವಾಗಿಸ್ಬಲ್ಲ ಧೈರ್ಯ ತಾನಾಗಿಯೆ ಪ್ರಾಪ್ತಿಯಾಗುವುದರಲ್ಲಿ ಅನುಮಾನಗಳಿಲ್ಲ. ಸುದ್ದಿಯಲ್ಲದ ಸುದ್ದಿಗಳನ್ನ ಮತ್ತೆ ಮತ್ತೆ ನಿರುಪಯುಕ್ತವಾಗಿ ಮೇಲೆ ಮೇಲೆ ಅದನ್ನೆ ತಲೆಗೆ ತಿಕ್ಕುವ ಸಮಾಜದ ನೈತಿಕ ಬೆನ್ನೆಲುಬುಗಳನ್ನೆ ಅಲುಗಾಡಿಸುತ್ತಿರುವ ಈ ಪತ್ರಿಕೆ ಹಗೊ ಸುದ್ದಿವಾಹನಗಳ ಪ್ರಾಸರ ಮಾಡುವವರು  ತಮ್ಮ TRP ಹಾಗೊ ಕಾಸಿನ ಲಾಭವನ್ನೆ ಮರೆತು ಕೆಲಸ ಮಾಡುವುದನ್ನ ನಿರೀಕ್ಶಿಸುವಸ್ಟು ನಂಬಿಕೆ ಅಥಾವ ಭ್ರಮೆ ಖಂಡಿತಾ ನಿರುಪಯುಕ್ತ ಹಾಗೊ ನಿರಾಶಾದಾಯಕ. ಇನ್ನು ನಮ್ಮ ಶಾಲೆಗಳಲ್ಲಿನ  ಪ್ರವಚನಗಳು ಬರೀ ಅಂಕಗಳಿಕೆಯ ಅನಿವಾರ್ಯ ಜೈಲುಗಳು, ನಮ್ಮ  ಬದುಕು ಕೊಡ ಅತ್ಯಂತ ದುರ್ಬರ ಹಂತದಲ್ಲಿದೆ. ಕೌಟುಂಬಿಕ ವ್ಯವಸ್ಥೆ ತನ್ನ ಹಿಡಿತ ಕಳೆದು ಕೊಂಡಿದೆ, ಹೆಗ್ಗಿಲ್ಲದೆ ಬಿಕರಿಯಾಕುವ ಎಲ್ಲಾ ರೀತಿಯ ಮಾದಕ ವಸ್ತುಗಳಿಂದಾಗಿ, ಬಹುಜನ ರೈತರು, ಕಾರ್ಮಿಕರು, ದಿನಗೊಲಿಗಳು ಮತ್ತು  ಸಮಾಜದ ದಿಕ್ಕನ್ನ ಬದಲಾಯಿಸುವ ಶಕ್ತಿಯಿರುವ ಮಧ್ಯಮ ವರ್ಗದ ಯುವಕ ಯುವತಿಯರು  ಅತ್ಯಂತ ಹೆಚಿಗೆ ಸಂಖ್ಯೆಯಲ್ಲಿ ಇವಕ್ಕೆಲ್ಲಾ ದಾಸರಾಗಿ ತಮ್ಮ ಬದುಕ್ಕನ್ನ ಅರ್ಧೆದಾರಿಗೆ ಮುಗಿಸುವಂಥಹ ಭಾಯಾನಕ ರೋಗ ರುಜಿನಗಳಿಗೆ, ಮತ್ತು ಅನೇಕ ಅನವಾಶ್ಯಕ ಅಪಾಘಾತಗಳಿಗೆ ತುತ್ತಾಗುವುದನ್ನ ಸದ್ದಿಲ್ಲದೆ ಮರೆಮಾಚುವ ಈ ನಮ್ಮ ಸಮಾಜಕ್ಕೆ ನನ್ನ ದಿಕ್ಕಾರವಿರಲಿ. ಹಾಗಾಗಿ ಈ ಪ್ರಾಸಾರಗಳನ್ನ ನೋಡುವ ಅಥಾವ ಓದುವ ಸಮಯದ ಅರ್ಧಸ್ಟನ್ನ ನಿಮ್ಮ ಮಕ್ಕಳಿಗೆ ಮೀಸಲಿಡಿ, ಅವರಿಗೆ ಜಗತ್ತಿನ , ನಮ್ಮ ನೆಲದ ವೀರರ, ಸಮಾಜ ಸುಧಾರಕರ, ಕಲೆಗಾರರ, ಸಾಹಿತಿಗಳ ಪರಿಚಯಿಸಿ, ಇದು ಸದ್ಯದ ಮಟ್ಟಿಗೆ ಮಧ್ಯಮ ವರ್ಗದ ಜನತೆಯು ಈ ಸಮಾಜಕ್ಕೆ ನೀಡಬಹುದಾದ ಉತ್ತಮ ಕೊಡಿಗೆಗಳಲೊಂದು.


 


 

Rating
No votes yet