ಮರೆವಿನ ಮಾಯೆ (ಶ್ರೀ ನರಸಿಂಹ 42)

Submitted by sathishnasa on Tue, 07/31/2012 - 10:39

ಮರೆವು ಎಂಬುವುದೆಮಗೆ ದೇವ ನೀಡಿರುವ ವರವು
ನೀಡಿರದಿದ್ದರೆ ಮರೆವ ನಡೆಯುತಿರಲಿಲ್ಲವಿ ಜೀವನವು
ಕ್ಷಣಿಕವಾಗನುಭವಿಪುದು ಮನ ಸುಖ,ದುಃಖಗಳನು
ಸಮಯ ಕಳೆದಂತೆಮಗೆ ಇವುಗಳನವ ಮರೆಸುವನು
 
ಮರೆ ಸುಖ,ದುಃಖಗಳ ಮರೆಯದಿರು ಜನನಿ,ಜನಕರ
ಮರೆ ಕೋಪ,ದ್ವೇಷಗಳ ಇರಿಸೊಳಗೆ ತಾಳ್ಮೆಯ ಬೇರ
ಮರೆ ನೀನು, ನಾನು,ನನದೆಂದೆನುವ ಅಹಮಿಕೆಯನು
ಮರೆಯದಿರು ಮನವೆ ನೀನು ಶ್ರೀಹರಿಯ ಸ್ಮರಣೆಯನು
 
ಮರೆಸುವನೆಲ್ಲ ಅಗಲಿಕೆಯ ನೋವನು,ಪರಿಹರಿಸುವನೆಲ್ಲ ಕ್ಲೇಷವನು

ನಂಬು,ನಂಬದಿರು ಶ್ರೀನರಸಿಂಹನೇ ಕೋಟಿ ಬ್ರಹ್ಮಾಂಡಕೆ ಒಡೆಯನು

Rating
No votes yet

Comments