ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

ಬರಹ

ಈಗೀಗ ಮಾಧ್ಯಮಗಳಿಗೆ ಸುದ್ದಿಯ ಕ್ಷಾಮವೇ? ಹೌದು ನನಗೆ ಹಾಗೇ ಅನಿಸುತ್ತದೆ. ಕೆಲವರ ವಯಕ್ತಿಕ ವಿಚಾರಗಳನ್ನು ವಾರಗಟ್ಟಲೆ ಅವರು ಬೇಡ ಬೇಡ ವೆಂದರೂ ಮಾಧ್ಯಮಗಳು ಕಾಡಿ ಬೇಡಿ ಪ್ರಸಾರ ಮಾಡುತ್ತಿರುವದನ್ನು ನೋಡಿದರೆ ಹಾಗೇ ಅನಿಸುತ್ತದೆ. ಉದಾಹರಣೆಗೆ ಐಶ ಮದುವೆ. ಅವರು ಯಾರನ್ನೂ ಕರೆಯದೆ ಮಾಧ್ಯಮಗಳು ದೂರವಿರಲಿ ಎಂದು ಹೇಳಿದರೂ ಕಾಡಿ ಬೇಡಿ ಕೊನೆಗೆ ಅವರ ಸೆಕ್ಯೂರಿಟಿಗಳಿಂದ ನಿಂದನೆಗೊಳಗಾದರೂ ಅದರ ಪ್ರಸಾರದ ಹಿಂದೆ ಬಿದ್ದುರುವ ಜನರನ್ನು ನೋಡಿದರೆ ನನಗೆ ಹಾಗೇ ಎನಿಸುತ್ತದೆ. ಮದುವೆ ಅವರ ವಯಕ್ತಿಕ ವಿಚಾರ. ಹೋಗಲಿ ಕರೆದರೆ ಹೋಗಿ ಪ್ರಚಾರ ಕೊಡಿ. ಇಲ್ಲದಿದ್ದರೆ ಚುಟುಕು ಸುದ್ದಿ ಪ್ರಸಾರ ಮಾಡಿ ಅದು ಬಿಟ್ಟು ಈರೀತಿ ಗೊಗರೆದರೆ ಏನು ಹೇಳಬೇಕು. ಹೋಗಲಿ ಓಬೇರಾಯ್ ಅವನ ಪಾಡಿಗೆ ಗೋ ಸಮ್ಮೇಳನಕ್ಕೆ ಹೋದರೆ ಅಲ್ಲಿಯೂ ಹೋಗಿ ಐಶ್ ಮದುವೆಗೆ ಯಾಕೆ ಹೋಗಿಲ್ಲ ಎಂದು ಅವರ ನಡುವಿನ ಸಂಬಂಧ ಮುರಿದು ಬಿದ್ದುರುವದು ಗೊತ್ತಿದ್ದರೂ ಕೇಳುವದು. ರಾಜಕುಮಾರ ಪುಣ್ಯತಿಥಿ ವಾರಗಟ್ಟಲೆ ಅವರ ಮನೆಯವರು ನಿಂತಿದ್ದು ಕುಂತಿದ್ದು ಎಲ್ಲ ಅವರಿಗೆ ಮುಜುಗರ ಆಗುವಷ್ಟು ಮತ್ತು ನೋಡುವವರಿಗೂ ಕೇಳುವವರಿಗೂ ತಲೆನೋವಾಗುವಷ್ಟು ಪ್ರಸಾರ ಮಾಡುವದು ಯಾವುದರ ಲಕ್ಷಣ? ಕುಚೋದ್ಯ ಕ್ಕಾಗಿ ದೊಡ್ಡವರನ್ನು ಅಭಿಪ್ರಾಯ ಕೇಳುವದು ಅವರು ಯಾವುದೋ ಪ್ರಜ್ಞೆಯಲ್ಲಿ ಉತ್ತರಿಸುವದು ಅದನ್ನೇ ವಾರಗಟ್ಟಲೆ ಗುಲ್ಲೆಬ್ಬಿಸುವದು. ಉದಾ ನಾರಾಯಣ ಮೂರ್ತಿಗಳ ವಿಚಾರ, ಹೋಗಲಿ ಅವರು ತಮ್ಮ ತಪ್ಪರಿತು ಕ್ಷಮೆಯನ್ನಾದರೂ ಕೇಳಿದರು ಆದರೆ ಹಿಂದೆ ಕಾರ್ನಾಡರು ಆದೊಡ್ಡತನವನ್ನೂ ತೋರಲಿಲ್ಲ. ಇದೆಲ್ಲಾ ಮಾಧ್ಯಮದವರು ಅತಿಬುಧ್ಧಿವಂತರೆಂದು ಕೊಂಡು ಮಾಡುವ ಕುಚೋದ್ಯಗಳು ಅವರ ಟೊಳ್ಳುತನವನ್ನು ಪ್ರದರ್ಶಿಸುತ್ತವೆ ಅಷ್ಟೆ. ಇದರಿಂದ ಅವರು ಸಮಾಜಕ್ಕೆ ಸಾಮಾನ್ಯಜನರಿಗೆ ಕೊಡುವ ತಪ್ಪುಪಾಠ ಸಾಕಷ್ಟು ಹಾನಿಮಾಡಬಲ್ಲದು. ಅಲ್ಲದೆ ಇದು ಕಾಲೆಳೆದು ದೊಡ್ಡವರನ್ನು ಹತೋಟಿಗೆ ಒಳಪಡಿಸಲಿಚ್ಚಿಸುವ ರಾಜಕಾರಣಿಗಳಿಗೆ ರಸಗವಳ.

ಗಾಂಧಿಜಯಂತಿಯಂದು ೨ ನಿಮಿಷದ ಸುದ್ದಿ ಬಿತ್ತರಿಸುವ ಮಾಧ್ಯಮಗಳು ರಾಜ ಜಯಂತಿಯನ್ನೋ, ಐಶ ಮದುವೆಯನ್ನೋ ಇಷ್ಟೊಂದು ವಿಜ್ರಂಭಿಸುವ ದನ್ನು ನೋಡಿದರೆ ಮಕ್ಕಳು ಇವರು ಗಾಂಧಿಗಿಂತ ದೊಡ್ಡವರಿರಬೇಕು ಎಂದು ಕೊಂಡರೆ ತಪ್ಪಿಲ್ಲ ಅಲ್ಲವೆ?

ಅನಂತ ಪಂಡಿತ