ನಾನು ಕ್ಲಾಸ್ ಮಾನಿಟರ್ ಆದಾಗಾ...

ನಾನು ಕ್ಲಾಸ್ ಮಾನಿಟರ್ ಆದಾಗಾ...

ಇದು ಒಂದ ಇಪ್ಪತ್ತ ವರ್ಷದ್ ಹಳಿ ಕಥಿ....
ನಾ ಆವಾಗ ಇನ್ನೂ ಸ್ಕೂಲ್ನೊಳಗ ಕಲೀತಿದ್ದೆ. ನಮ್ಮ ಸಾಲೀಯೊಳಗ ಹಿಂದಿನ ವರ್ಷ ಕ್ಲಾಸ್ನೊಳಗ ಫಸ್ಟ ಬಂದವರನ  ಫಸ್ಟ ಮಾನಿಟರ್,
ಸೆಕಂಡ್ ಬಂದವರನ ಸೆಕಂಡ್ ಮಾನಿಟರ್ ಮಾಡ್ತಿದ್ರು. ಮಾನಿಟರ್-ಗಿರಿ ಮಜಾ ಮಾನಿಟರ್ ಆದ್ಮ್ಯಾಲೇ ಗೊತ್ತಾತು...
ಮಾನೀಟರ್ ಆದಾಗಿನ ಖುಷಿ ಒಂದೆರ್ಡ ವಾರದೊಳಗ ತಲ್ಯಾಗಿಂದ ಇಳೀತು.
ಮಾನೀಟರ್ ಮಾಡೋ ಕೆಲ್ಸಾ ಒಂದಾss... ಎರಡಾss......
ಮಾನಿಟರ್ರು ಸ್ಚೂಲ್ಗೆ ಸ್ವಲ್ಪ್ ಲಗೂ ಬರ್ಬೇಕೂ, ಲಗೂ ಬಂದು ಇಡೀ ಕ್ಲಾಸ್ ಕಸಾ ಬಳೀಬೇಕು......
ಪೀರಿಯಡ್ ಘಂಟಿ ಹೋಡಿಯೋ ಗುಂಡಪ್ಪ ಬಂದಿದ್ದಿಲ್ಲಾಂದ್ರ ಹೋಗಿ ಲಾಂಗ್ ಬೆಲ್ಲು ಶಾರ್ಟು ಬೆಲ್ಲು ಹೊಡುದು ಬರ್ಬೇಕೂ.....
ಖಾಲೀ ಪೀರಿಯಡ್ನೊಳಗ  ಉಳದವ್ರ್ನಾ ಸುಮ್ಮ ಕೂಡ್ಸೋದೂ, ಗದ್ದಲಾ ಮಾಡೋ ಹುಡಗೀರ ಹೆಸರ ಬೋರ್ಡ್ ಮ್ಯಾಲೆ ಬರದು ಟೀಚರ್ಗೆ ತೊರ್ಸೋದು....
ಮೂರು ತಿಂಗಳಾ ಆರು ತಿಂಗಳಾ ....ಪರೀಕ್ಷಾ ಆದ ಮ್ಯಾಲೆ ಟೀಚರ್ರು ಚೆಕ್ಕ್ ಮಾಡಿದ್ದ ಆನ್ಸರ್ ಪೇಪರ್ ಮಾರ್ಕ್ಸು ಟೋಟಲ್ಲು ಮಾಡಿ ಮಾರ್ಕ್ಸ್ ಲಿಸ್ಟ್

ಮಾಡಿ ಎಲ್ಲಾರ್ಗೂ ಪೇಪರ್ ಹಂಚೋದು.... ಫೀಸ್ ರಿಸಿಪ್ಟು ಬರಿಯೋದು.....ಒಂದೊಂದು ತಿಂಗಳು ಹಾಜರಿ ಪುಸ್ತಕದೊಳಗ ಎಲ್ಲಾ ವಿದ್ಯಾರ್ಥಿಗಳ
ಹೆಸರು ಬರಿಯೋದು .....ಹೀಂಗ ಒಂದಾ ಎರಡಾ....ಬೇಕಾದಷ್ಟು ಕೆಲ್ಸಾ ತೊಗೋತಿದ್ರು....ಇವು ಬರೀ ಕ್ಲಾಸಿನೊಳಗ ಮಾಡೋ ಕೆಲ್ಸಾ ಆದವು ....
ಕ್ಲಾಸ್ ಬಿಟ್ಟು ಹೊರಗಂದ್ರ ....ಆವಾಗಾವಾಗ ಇಂಟರ್ವಲ್ ಒಳಗ ಟೀಚರ್ಗೆ ಇಡ್ಲಿ-ವಡಾ ,ಬಾಳೇಹಣ್ಣು, ಬ್ರೆಡ್ಡು-ಬನ್ನು ತಂದ ಕೊಡೋದು
ಆವಾಗಾವಾಗ ಬ್ಯಾಂಕಿಂದ ಒಂದು-ಎರಡು ಸಾವಿರ ರೊಕ್ಕ ತಗಿಸ್ಕೊಂಡು ಬರೋದು (ಅದೂ ಹೆಡ್ಡಮಾಸ್ತರಿಗೆ ಗೊತ್ತಾಗ್ಲಾರಧಂಗ ಹಿಂದಿನ್ ಬಾಗ್ಲಿಂದ
ಹೋಗಿ ಬರೋದು..)
      ಇನ್ನು ಬೋರ್ಡ ಮ್ಯಾಲೆ ಬರ್ದಿದ್ದು ಎಲ್ಲಾರ್ಗೂ  ಛಂದ ಕಾಣಸ್ವಲ್ತು  ಬೋರ್ಡ  ಮಿಂಚಲಿಕತದ ಅಂದ್ರ ಸಾಕು ಆ ಕೆಲ್ಸ್ಲಾನೂ ನಮ್ಮ
ಕುತ್ಗೀಗೇ  ಬರ್ತಿತ್ತು . ಎಲ್ಲಾರೂ ಸೇರಿ ಎಂಟಾಣಿ -ಒಂದು ರೂಪಾಯಿ , ಎರಡ ರೂಪಾಯಿ ಹಾಕಿ ಕರೀ ಬಣ್ಣ ತಂದು ಅದಕ್ಕ ಒಂದಿಷ್ಟು ಬಿಳಿ ರಂಗೋಲಿ
ಮಿಕ್ಸ ಮಾಡಿ ಹಳಿ ಬಟ್ಟಿ ತೊಗೊಂಡು ಸಾಲೀ ಬಿಟ್ಟಮ್ಯಾಲೆ ಒಂದು ೫-೬ ಮಂದಿ ಕೂಡಿ  ಇಡೀ ಬೋರ್ಡಿಗೆ ಬಣ್ಣ ಹಚ್ಹಿ ಹೋಗ್ತಿದ್ವಿ.ಮರದಿನಾ
ಖರ್ರಗ ಹೊಳಿಯೋ ಬೋರ್ಡ ನೋಡಿದ ಮ್ಯಾಲೆ ಮನಸಿಗೆ ಏನೋ ಒಂದು ಖುಷಿ ಆಗ್ತಿತ್ತು.
 ಒಟ್ಟು ಹೇಳಬೇಕಂದ್ರ ಮಾನಿಟರ್ ಗಿರಿ ಅಷ್ಟೇನು ಈಸಿ ಆಗಿರಲಿಲ್ಲ.

ಈ ಮಾನಿಟರ್ ಗಿರಿ ಈಗ ಹೆಂಗದನೋ ಏನೋ ಆವಾಗಂತೂ ನಮ್ಮ ಕಡೆಯಿಂದ ರಗಡs.. ಕೆಲ್ಸಾ ತೊಗೊತಿದ್ರು.

Rating
No votes yet

Comments