ಬೆನ್ನ ಹಿಂದೆ ಬಿದ್ದು(ಬಂದು)ನೀ...........!!

ಬೆನ್ನ ಹಿಂದೆ ಬಿದ್ದು(ಬಂದು)ನೀ...........!!

 





ದಾರಿಯಲ್ಲಿ ಹೋಗುವಾಗ  ನಮ್ಮ ಬೆನ್ನ ಹಿಂದೆ ಯಾರೋ ಒಬ್ಬರು ಹಿಂಬಾಲಿಸಿದರೆ ನಾವ್ ಹೇಗೆ ಫೀಲ್ ಆಗುತ್ತೇವೆ?
 
ಅದು ಬಹುತೇಕ ಎಲ್ಲರ ಅನುಭವಕ್ಕೆ ಬಂದಿರುತ್ತೆ...
ಬಹುತೇಕ ಸಂದರ್ಭಗಳಲ್ಲಿ  ಹಿಂಬಾಲಿಸುತ್ತಿರುವವರನ್ನ ನಾವು ನೋಡಬಹುದು ಸಹ..
ಅಪ್ಪಿ ತಪ್ಪಿ ಅವರು ಮುಸುಕು ಹಾಕಿದ್ದರೂ  ಅವರ ದೇಹ ಆಕೃತಿ ಬಗ್ಗೆ ಒಂದು ಕಲ್ಪನೆ ಇರುತ್ತೆ... 
ಅಲ್ಲವೇ?
ಆದರೆ  ನಾವು ಇಂಟರ್ನೆಟ್ನಲ್ಲಿ  ವ್ಯವಹರಿಸುವಾಗ ಚಾಟ್ ಮಾಡುವಾಗ -ಸರ್ಫ್ ಮಾಡುವಾಗ , ಮಾಹಿತಿ ಹುಡುಕುವಾಗ, ಮೇಲ್ ಕಳಿಸುವಾಗ  ಕಳಿಸಿ ಆದ ಮೇಲೂ ನಮ್ಮ  ಬಹುತೇಕ ಸೀಕ್ರೆಟ್  ಅನ್ನುವ ಮಾಹಿತಿ ಎಲ್ಲವನ್ನು  ದೂರದಲ್ಲಿ(ಅತಿ ಹತ್ತಿರದಲ್ಲೂ ಇರಬಹುದು..!!)ಕುಳಿತು  ಯಾರಾದರೂ ಆಗಂತುಕರು ಗಮನಿಸುತ್ತಿದ್ದರೆ....!!
.......ರೆ 
 ಎನ್ನುವುದು  ಬರೀ 'ಊಹೆ' -ಕಲ್ಪನೆ ಆಗಿ ಉಳಿದಿಲ್ಲ.... 

ನಾವ್ ಯಾವುದನ್ನ ಸೀಕ್ರೆಟ್ ಅಂತ  ಟಾಪ್ ಸೀಕ್ರೆಟ್ ಅಂತ  ಯಾರಿಗೂ ಗೊತ್ತಿಲ್ಲ ಅಂದುಕೊಂಡಿದ್ದೆವೆಯೋ... ಅಸಲಿಗೆ ಅದು ಸೀಕ್ರೆಟ್  -ಟಾಪ್ ಸೀಕ್ರೆಟ್ ಆಗಿ ಉಳಿದಿಲ್ಲ....:(((

ಹೀಗೆ ನಮ್ಮನ್ನು ಅನವರತ ದಿನನಿತ್ಯ ಪ್ರತಿ ಕ್ಷಣಾ  ಹಿಂಬಾಲಿಸುತ್ತಿರುವವರು- ಟ್ರ್ಯಾಕರ್ಸ್....
 
ಬಹುಪಾಲು ಸಂದರ್ಭಗಳಲ್ಲಿ ನಮ್ಮನ್ನು ಟ್ರಾಕ್ ಮಾಡುತ್ತಿರುವವರು  ನಮ್ಮೆಲ್ಲ ಮಾಹಿತಿ ಅರಿತಿದ್ದರೂ  ನಮ್ಮ ವಿವರವನ್ನು(ಹೆಸರು-ಉದ್ಯೋಗ-ವ್ಯವಹಾರಿಕ-ಹಣಕಾಸು ಸ್ಥಿತಿ ಗತಿ)  ಕೆಲ ಕಂಪನಿಗಳಿಗೆ  ಮಾರಿಕೊಳ್ಳುವರು  ಅವರು (ಕಂಪನಿ) ತಮ್ಮ  ಉತ್ಪನ್ನಗಳ  ಬಗೆಗಿನ ಜಾಹೀರಾತು , ವಿವರ ಬಗ್ಗೆ ಮೇಲಿಂದ ಮೇಲೆ ಈ ಮೇಲು ಕಳಿಸಿ ನಮ್ಮ ಪ್ರಾಣ ಹಿಂಡುವರು...!!
 
ಈಗ ನಿಮಗೆ ಅನ್ನಿಸಿರಬೇಕು- ಹೌದಲ್ಲ ನನ್ ಇನ್ಬಾಕಸ್ನಲ್ಲಿ ಬೇಕು ಬೇಡದ  ಯವ್ಯಾವ್ದೋ ಮೇಲ್ ಬಂದು ಬೀಳುತ್ತವಲ್ಲ... ಅದ್ನ ತಡ್ಯೋಕೆ  ಆ ತರಹದ ಮೇಲುಗಳನ್ನು  ಸ್ಪಾಮ್ ಅಂತ ಮಾಡಿದ ಮೇಲೂ ಸ್ಪಾಮ್ ಬಾಕ್ಸ್  ತುಂಬಿ ತುಳುಕುತ್ತದಲ್ಲ...!!
ಅದನ್ನು ತಪ್ಪಿಸಲು  ಈ ತರಹದ  ಅನಾಮಿಕ ಮೇಲು ಬೇಡ ಅಂತ  ಇನ್ಯಾವುದೋ  ಸಾಪ್ಟ್ವೇರ್  ಹಾಕಿದರೆ? ಅವರು ಸಹಾ ನಮ್ಮ ವಿವರ ಕದಿಯೋಲ್ಲ- ಮಾರಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತರಿ ಇಲ್ಲ.....:((

ಹೌದು ಅವರಿಗೆ ಏನೆಲ್ಲಾ ಮಾಹಿತಿ ಸಿಗುತ್ತೆ?
ನಾವ್ ಬೇರೆಯವರಿಗೆ  ಕಳಿಸುವ ಪ್ರತಿ 
ಮೇಲ್- 
ಚಿತ್ರ-
ಸುದ್ಧಿ-
ವರದಿ - 
ನೆಟ್ನಲ್ಲಿ ಏನೆಲ್ಲಾ  ಹುಡುಕಾದಿದ್ದೀವಿ, 
ನೋಡಿದ್ದೀವಿ..
ಡೌನ್ಲೋಡ್ ಮಾಡಿದ್ದೀವಿ-
ಇನ್ಸ್ಟಾಲ್ ಮಾಡಿದ್ದೀವಿ....
  ಹೀಗೆ 
ಎ  ಟು ಜಡ್ ಗೊತ್ತಾಗುವುದು .........

ಹೌದು  ನಮ್ಮೆಲ್ಲ ವಿವರ  ಆ ಅನಾಮಿಕರಿಗೆ , ಅಪರಿಚಿತರಿಗೆ  ಗೊತ್ತಾಗೋದು ಹೇಗೆ?........
ನಾವ್ ನೆಟ್ನಲ್ಲಿ ಏನಾರ ಡೌನ್ಲೋಡ್ ಮಾಡಿದಾಗ / ಕಂಪ್ಯೂಟರ್ಗೆ  ಇನ್ಸ್ಟಾಲ್ ಮಾಡಿದಾಗ...
ಸರ್ಚ್ ಮಾಡುವಾಗ (ಬ್ರೌಸೆರ್  ಓಪನ್ ಮಾಡಿ ಏನಾರ  ಟೈಪ್ ಮಾಡಲು ಶುರು ಹಾಕಿಕೊಂಡ ಕೂಡಲೇ  ಈ ಟ್ರ್ಯಾಕರ್ಸ್  ಧಿಗ್ಗನೆ ಎದ್ದು ಕೂರುವರು..!!)
ಸಾಮಾಜಿಕ ಜಾಲ ತಾಣಗಳಲಿ ಯಾರಿಗೋ ಮೇಲ್  ಅಡ್ರೆಸ್ಸು  ಫೋನ್ ನಂಬರ್ ಹೇಳಿದಾಗ (ಇದೆ ಜಾಸ್ತಿ ಆಗುವುದು)
ಇನ್ನು ಕೆಲವೊಮ್ಮೆ  ೧೦ ಕಲ್ಲು ಬೀಸಿದಾಗ  ಒಂದು ಕಲ್ಲು ತಗುಲುವ ಹಾಗಿನ  ಟ್ರ್ಯಾಕ್  ಮಾಡುವ ಮೇಲ್  ತಾವೇ ತಾವಾಗಿ ಯ್ರ್ಯಾರಿಗೋ ಬಂದು ಬೀಳುವವು..:()))

ಹೌದು ಇದು   ನಂಗೇ ಮಾತ್ರ  ಯಾಕೆ? ಅಂತ ಅನ್ನುವಿರಾದರೆ,
ಚಿಂತಿಸಬೇಡಿ.....!!
ನನಗೆ ಯಾಕೆ  ಅನ್ನುವವರ  ಲಿಸ್ಟ್ ತುಂಬಾ ದೊಡ್ಡದಿದೆ... 
ಅಲ್ಲಿ  ನಾ .ನೀವು ..ಅವರು.... ಇವರು...
ಎಲ್ಲರೂ ಇರ್ವರು...!!

ಹಾಗಾದ್ರೆ ಅದ್ಕೆ/ಇದಕೆ  ಪರಿಹಾರ ಇಲ್ಲವೇ?...
ಇದೆ-ಇಲ್ಲ ...!!
ಪೂರ್ಣ-ಸಂಪೂರ್ಣ  ಪರಿಹಾರ ಇಲ್ಲ..
ಆದರೆ ಸುರಕ್ಷಿತರಾಗಿರಲು  ಕೆಲ  ವ್ಯವಸ್ಥೆಗಳಿವೆ...

ಈ ಸಮಸ್ಯೆ ದೊಡ್ಡದು ಆಗುತ್ತಿದೆ- ಅದನ್ನು ನಿವಾರಿಸಲು  ಕೆಲ ಕಂಪನಿಗಳು (ಮೊಜಿಲ್ಲ- ಗೂಗಲ್ ಕ್ರೋಮ್-ಇಂಟರ್ನೆಟ್ ಎಕ್ಸ್ಪ್ಲೋರರ್ ೯- ಸಫಾರಿ  ) ಕೆಲ ಬ್ರೌಸರ್ಗಳಲ್ಲಿ  ಟ್ರ್ಯಾಕ್ ಮಾಡುವವರನ್ನ  'ಲಕ್ಷ್ಮಣ ರೇಖೆ'  ಹಾಕಿ ದೂರ ಇರಿಸುವ ವ್ಯವಸ್ಥೆ ಮಾಡಿವೆ...
ಆ ಬ್ರೌಸರ್ಗಳನ್ನು ನೀವು  ಡೌನ್ಲೋಡ್ ಮಾಡಿಕೊಂಡು  ಬಳಸಬಹುದು..
 
 
 
 
 
 

ಹಾಗೆಯೇ  ಅತಿ ಅವಶ್ಯವಾದ  ಹೊರತು  ವಯುಕ್ತಿಕವಾದ ಯಾವುದೇ ಮಾಹಿತಿಯನ್ನ  ಎಲ್ಲೂ  ಹಂಚಿಕೊಳ್ಳದೆ ಇರುವುದು ಕ್ಚೇಮ...!!
ಯಾವುದಾರ  ಬಹುಮಾನ ಬಂದಿದೆ ಎನ್ನುವ  ಮೇಲ್ ಅಥವಾ  ತೀರ ನಮ್ಮ ಪರಿಚಿತರ ಹೆಸರಂತೆ  (ಹೆಸರು ಸ್ವಲ್ಪವೇ ಬೇರೆ ಇರುವುದು) ಬರುವ ಮೇಲ್ಗಳನ್ನ  'ಮುಲಾಜಿಲ್ಲದೆ'  ಸ್ಪಾಮ್  ಅಂತ ಗುರುತು ಮಾಡಿ ಸೇರಿಸಿ....!!
 
ಕೆಲವೊಮ್ಮೆ ನಮಗೆ ಪರಿಚಿತರು  ಹೊಸದಾಗಿ ಮೇಲ್ ಮಾಡಿದ್ದರೂ  ಅವರ ಹೆಸರು ಮೇಲ್  ಐ ಡಿ ನಮ್ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ  ಇಲ್ದೇ ಇರುವಾಗಲೂ  ಅವರ ಮೇಲ್  ಸ್ಪ್ಯಾಮ್ ಎಂದು ಸ್ಪಾಮ್ನಲ್ಲಿ  ಸೇರುವುದು...:(

ಕೊನೆಯದಾಗಿ  
=========
ಯಾರಿಂದ ತಪ್ಪಿಸಿಕೊಂಡರೂ -
ಯಾರಿಗೆ ಕಾಣದಂತೆ ಏನು ಮಾಡಿದರೂ  'ಮೇಲೊಬ್ಬ' ಇಹನು ಎಲ್ಲವನ್ನು ನೋಡುವನು...!!
ದೇವರು ಮಾತ್ರ ಅಲ್ಲ........(ಹಳೆಯ ಮಾತು)
ಟ್ರ್ಯಾಕರ್.....!(ಜೊತೆಗೆ ಸೇರಿಸಲು ಹೊಸತು..!!)

ಹಾಗೆಯೇ  ಈ  ಲಿಂಕ್  ಮೇಲೆ   ಕ್ಲಿಕ್ ಮಾಡಿ  ಮೊಜಿಲ್ಲ  ಕಂಪನಿಯ   ಮುಖ್ಯ ಕಾರ್ಯನಿರ್ವಾಹಕರು- 'ಗ್ಯಾರಿ ಕೊವ್ಯಾಕ್ಸ್'   ಕೊಟ್ಟ  ಈ ಟ್ರ್ಯಾಕರ್ಗಳ ಬಗೆಗಿನ  ಮಾಹಿತಿಯ  ವೀಡಿಯೊ ನೋಡಿ....
 
 
 


============================================






 
Rating
No votes yet

Comments