ಸುದರ್ಶನ ದೇಸಾಯಿ ಇನ್ನಿಲ್ಲ; ಅವರ ಆತ್ಮಕ್ಕೆ ಶಾಂತಿ ಸಿಗಲಿ
ಕಥಾ ನಾಯಕನು ಧಾರವಾಡದವನು ಗೋಕರ್ಣಕ್ಕೆ ಹೋದಾಗ ಗೂಂಡಾಗಳಿಂದ ಏಟು ತಿಂದು ಬರುತ್ತಾನೆ. ಮುಂದೆ ಹೀಗಾಗಬಾರದಲ್ಲ ಅಂತ ಧಾರವಾಡದ ಉರ್ದು ಶಾಲೆಯ ಖತೀಬ್ ಮಾಸ್ತರರನ್ನು ಭೇಟಿಯಾಗಿ ಅವರಿಂದ ಕರಾಟೆ ಕಲಿಯುತ್ತಾನೆ . ಅಷ್ಟೇ ಅಲ್ಲದೆ ಅವನ ಪ್ರತಿನಿತ್ಯದ ದಿನಚರಿ ಹೀಗೆ.
"ಬೆಳಿಗ್ಗೆ ಐದಕ್ಕೆ ಎದ್ದು ಕಲಘಟಗಿ ರೋಡ್ ಹಿಡಿದು ನುಗ್ಗಿಕೆರೆ ಕಡೆ ವಾಕ್ ಹೋಗುತ್ತಿದ್ದೆ . ಅಲ್ಲಿ ಪ್ರಾಣದೇವರಿಗೆ ವಂದಿಸಿ ಬರುವಾಗ ಓಡುತ್ತಾ ಸೋಮೇಶ್ವರದವರೆಗೂ ಬರುತ್ತಿದ್ದೆ. ಅಲ್ಲಿಂದ ಮುಖ್ಯರಸ್ತೆಗೆ ಬಂದು ಎಡಬದಿಗೆ ತಿರುಗಿ ಎದುರಿಗಿದ್ದ ಚಿಕ್ಕ ಗುಡ್ಡಗಳನ್ನು ಹತ್ತಿ ಇಳಿದು ಜಿಗಿಯುತ್ತ ತೇಜಸ್ವಿನಗರ ಸೇರುತ್ತಿದ್ದೆ. ಅಲ್ಲಿಂದ ಗುಡ್ಡ ಇಳಿದು ರೈಲು ಹಳಿಗೆ ಕೂಡುತ್ತಿದ್ದೆ. ಸುಮಾರು ಎರಡು ಫರ್ಲಾಂಗ್ ದೂರವನ್ನು ರೈಲು ಕಂಬಿಯ ಮೇಲೆ ನಡೆಯುತ್ತ ಕ್ರಮಿಸಿ ಬಲಕ್ಕೆ ಚಿಕ್ಕ ದಿನ್ನೆಯ ಮೇಲಿರುವ ನನ್ನ ಮನೆ ಸೇರುತ್ತಿದ್ದೆ."
ಇದು "ವಿಷಮಂಥನ" ಕಾದಂಬರಿಯಲ್ಲಿ .
ಮತ್ತೆ ಇನ್ನೊಂದು ಕಾದಂಬರಿಯಲ್ಲ್ಲಿ ..... ಅದು ಏಕೋ ಕೈಗೆ ಸಿಗುತ್ತಿಲ್ಲ. ಸಿಕ್ಕರೆ ಇಲ್ಲೇ ಟಿಪ್ಪಣಿಯಾಗಿ ಸೇರಿಸುವೆ.
ಇದೀಗ ನೋಡಿದ ಸುದ್ದಿ - "ಪತ್ತೇದಾರಿ ಕಾದಂಬರಿಗಳನ್ನು ಬರೆದು ಉತ್ತರ ಕರ್ನಾಟಕದಿಂದ ಪ್ರಸಿದ್ಧರಾಗಿದ್ದರು ಸುದರ್ಶನ ದೇಸಾಯಿ. ಇದಕ್ಕಿಂತ `ಹಳದಿ ಚೇಳು` ಎಂಬ ಕಾದಂಬರಿ ಮೂಲಕ ಇನ್ನೂ ಪ್ರಸಿದ್ಧರಾದರು"
ಅವರ ಆತ್ಮಕ್ಕೆ ಶಾಂತಿ ಸಿಗಲಿ.