ನೈತಿಕ ಪೋಲಿಸ್ ಬೇಕು; ಹದಿಯ ಚೆಲ್ಲಾಟದ ವಿರುದ್ಧವಲ್ಲ!

ನೈತಿಕ ಪೋಲಿಸ್ ಬೇಕು; ಹದಿಯ ಚೆಲ್ಲಾಟದ ವಿರುದ್ಧವಲ್ಲ!

ಬರಹ

 ಮಂಗಳೂರು ಹೋಮ್‌ಸ್ಟೇ ಗೂಂಡಾಗಿರಿಯ ಬಗ್ಗೆ, ವಾಚಕರು ಇನ್ನೂ ಅಲವತ್ತುಕೊಳ್ಳುತ್ತಿದ್ದಾರೆ. ವಿಧಾನಮಂಡಲ್ಲಕ್ಕೂ ಇದು ಆಜ್ಯವಾಗಿದೆ. ಹುಡುಗ-ಹುಡುಗಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಧಿಕಾರ ಯಾವ ’ದೊಣ್ಣೆನಾಯಕರಿಗೂ’ ಇಲ್ಲ ಎಂಬುದೇ ಎಲ್ಲಾ ವಿವೇಕಶಾಲಿಗಳ ಗಟ್ಟಿ ಅಭಿಪ್ರಾಯ ಒಪ್ಪತಕ್ಕದ್ದೆ. ಆದರೆ ನೈತಿಕತೆಯನ್ನು ಕಾಮ-ಕಮೋದ್ರೇಕ - Sex -ಗೆ ಮಾತ್ರವೇ ಸೀಮಿತಗೊಳಿಸುವುದು ವಿವೇಕವಲ್ಲ. ಈ ದಿನಗಳಲ್ಲಿ ಇಂಥಾ ಚೆಲ್ಲಾಟ, ವೈಯಕ್ತಿಕ ಮತ್ತು ಕೌಟುಂಬಿಕ ವಿಷಯವೇ ಸಮಾಜವನ್ನೇ ಅಲ್ಲಾಡಿಸುವಂಥದೇನೂ ಅಲ್ಲ. ಇದನ್ನರಿಯುವ ನಯ-ನಾಜೂಕು, ಹಲ್ಲೆಕೋರ ಸಂಸ್ಕೃತಿಗಂತೂ ಇರುವುದಲ್ಲವೇನೋ ಸರಿ, ಆದರೆ ಖಂಡನಕಾರರಿಗಂತೂ ಅದು ಇರಲೇಬೇಕಲ್ಲವೇ? ನಿಜವಾಗಿ ನಮ್ಮನ್ನು ಸಮಾಜವಾಗಿ, ಸಮುದಾಯವಾಗಿ, ರಾಷ್ಟ್ರವಾಗಿ ಇಂದು ಹಾಳುಗೆಡಹುತ್ತಿರುವುದು ಕಾಮ - Sex -ಅಲ್ಲ; ಪುರುಷಾರ್ಥದ ಇನ್ನೊಂದು ಅಂಗವಾದ ’ಅರ್ಥ’! ಅದಕ್ಕಾಗಿಯಲ್ಲವೇ, ಅನೈತಿಕ ರಾಜಕೀಯದ ನಗ್ನ ನರ್ತನ ರಾಜಾರೋಷವಾಗಿ ನಡೆಯುತ್ತಿರುವುದು? ’ನೈತಿಕ ಪೋಲಿಸರು’ ತಮ್ಮ ಪ್ರತಾಪವನ್ನು ಇದರ ವಿರುದ್ಧ ತೋರಬೇಕು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet