ಹುಚ್ಚು ಹುಡುಗನ ಮೆಚ್ಚುವಂತ ಪ್ರೀತಿ
ಕವನ
ನನ್ನ ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ,
ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ,
ಒಲವೆ ಜೀವನ ಆ ಜೀವವೇ ನೀನೇನಾ,
ನಿನ್ನ ಈ ಪ್ರೀತಿಯ ನಾ ಮರೆಯಲು ಸಾಧ್ಯಾನ.
ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ
ನೀ ಪ್ರೀತಿಸಿ ನನ್ನ, ಎಲ್ಲಿ ಹೋದೆ ನೀ ಈ ದಿನ,
ಬಾರೆ ಗೆಳತಿಯೇ ನಾ ಹುಡುಕಲಾರೆ ನಿನ್ನ,
ಈ ಬದುಕನು ನಿನಗಾಗಿ ಅರ್ಪಿಸುವೆ ಓ ಚಿನ್ನ.
ನೀನು ಇಲ್ಲದೇ ನಾನೇಗೆ ಕಳೆಯಲಿ ಈ ದಿನ,
ಓ ಪ್ರೇಮವೇ ನೀ ಕೊಂಧೆಯಲ್ಲೇ ನನ್ನ,
ನಿನ್ನ ಉಸಿರಲ್ಲೂ ಬಂದು ಕಾಡುವೆ ನಾ ನಿನ್ನ,
ಬಿಡೆನು ನಿನ್ನನು ನೀ ಮರೆತರು ನನ್ನ.
ಓ ಮನವೇ ಇಂದು ಬಾಡಿಹೋಯ್ತು ನನ್ನ ಈ ಪ್ರೇಮ
ನನ್ನ ಈ ಕ್ಷಣ ಇಂದು ನನಗೂ ಬೇಡವಾಯ್ತು ಈ ದಿನ,
ಓ ದೇವರೇ ಇದೆಲ್ಲಾ ನೀ ಮಾಡಿದ ಕುತಂತ್ರಾನ!
ಅಂತೂ ಮುಗಿಸಿದೆ ನನ್ನ ಈ ಹುಚ್ಚು ಪ್ರೀತಿನಾ......
ಸೋಮೇಶ್ ಗೌಡ.