ಮನದಾಳದ ಮಾತು
ಕವನ
ಮರೆತೋದ ಮಾತಿದು ಮನದಾಳದಾಡಿದು
ನನ್ನ ಕಣ್ಣ ಅ೦ಚಿನ ನೂರಾರು ಕನಸಿದು
ಮಾತಿಗೆ ನಿಲುಕದ ಭಾವದ ಗೀಳಿದು
ಮನಸಾರೆ ಹಾಡುವೆನು ಕೇಳುವ ಹಾಡಿದು
ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ
ಕಾಡತಿರುವ ನನ್ನ ಕನಸ ಕನವರಿಕೆಯು ಆದೆ
ಏನೆ೦ದು ಹೇಳಲಿ ಎ೦ದು ನಾನಿ೦ದು ಮೂಕಾದೆ
ಕಾಣದ ಕನಸಿನ ಸಾರಥಿಯಾದೆ ಮಾರುತಿಯಾದೆ
ಗುಡಿ ಕಾಣದ ದೇವರ ಓಲೈಸೋ ಹಾಡಿದು
ಮನದಾಳದ ಕನಸಿನ ಐಕ್ಯತೆಯ ನೋವಿದು
ಭಾವಾಂಜಲಿ ಎನ್ನುವ ಪರಿಪರಿಯ ಗೀಳಿದು
ಬೇಡೆಂದರೂ ಪೋಗದ ಸೊಗಸಿನ ಮುನಿಸಿದು
- ರಾಜು
Comments
ಉ: ಮನದಾಳದ ಮಾತು
In reply to ಉ: ಮನದಾಳದ ಮಾತು by makara
ಉ: ಮನದಾಳದ ಮಾತು