೧+೧ ಒಂದೇ ...
ಕವನ
ನಾನು ಅಂದುಕೊಂಡದ್ದನ್ನೆಲ್ಲ
ಬರೆಯಲು ಸಾಧ್ಯವಿಲ್ಲ,
ಇದಕ್ಕೆ ಮನಸೂ ಒಪ್ಪುವುದಿಲ್ಲ..
ನಾನು ಈ ವ್ಯವಸ್ಥೆಯ ಅವಸ್ಥೆ..
ನಾನು ಸರಿ ಎಂದಾಗ
ಅವರು ಹುಚ್ಚರಂತೆ ಕಂಡರು
ನಾನೂ ಹುಚ್ಚನಾದೆ..
ನಾನು ಅವಸ್ಥೆ, ನಾನು ಬದಲಾಗಬೇಕಿದೆ
ಆರರಿಂದ ಮೂರಕ್ಕೆ, ಮೂರರಿಂದ ಆರಕ್ಕೆ..
ಎಲ್ಲ ತರ್ಕಗಳಾಚೆ ನಾನು ನಿಲ್ಲಬೇಕಿದೆ
೧+೧ ಒಂದೇ ಎಂದು
ಗೊಡೆಗೆ ನೇತು ಬಿದ್ದ ಗಡಿಯಾರಕ್ಕು
ಮುಂದೆ ನಿಂತ ನಿನಗೂ ಹೇಳಬೇಕಿದೆ..
ವಿಭಜನೆಯನ್ನೆ ಭಜಿಸುತ್ತ
ನಿಂತ ನಿರುಪದ್ರವಿಗಳ ಮುಂದೆ
ಬಗ್ಗಬೇಕು, ಸಲಾಮು ಹೊಡೆಯಬೇಕು,
ಪಟ್ಟಿಮಾಡಿ ಕಾಯಬೇಕಿದೆ..
ನಾನು ಕಂಡದ್ದನ್ನೆಲ್ಲ ಬಚ್ಚಿಟ್ಟು
ಬರೆಯಲೂ ಸಾಧ್ಯವಿಲ್ಲ..
ಶಿವಪ್ರಸಾದ್ ಶಹಾಪುರ
Comments
ಉ: ೧+೧ ಒಂದೇ ...
In reply to ಉ: ೧+೧ ಒಂದೇ ... by venkatb83
ಉ: ೧+೧ ಒಂದೇ ...