
ನೆನಪಿರಲಿ. ನಾನೂ ತಮ್ಮಲ್ಲಿ ಅಪೇಕ್ಷಿಸುತ್ತಿರುವುದು ಕೆಂದ್ರ ಸರಕಾರವೋ ಇಲ್ಲವೇ ರಾಜ್ಯ ಸರಕಾರಗಳೋ ಕೋಟ್ಯಾಂತರ ರುಪಾಯಿ ಹಣ ವ್ಯಯಿಸಿ ಮಾಡುತ್ತಿರುವ ದುಂದುವೆಚ್ಚದ ಹಬ್ಬವನ್ನಲ್ಲ ! ಪ್ರತಿಭಾರತಿಯನು ತನ್ನ ಪ್ರೀತಿಯ ರಾಷ್ಟ್ರದ ಬಗ್ಗೆ ಮಾಡಬೇಕಾದ ಗುರವದ ಪ್ರತಿಕಗಳನ್ನು ! ಇನ್ನುಮುಂದೆ ನಾವು ಈ ತರಹದ ಪ್ರಯತ್ನಗಳನ್ನು ಮಾಡದೆ ವಿಧಿಯಿಲ್ಲ.
ಮೊದಲನೆಯದಾಗಿ ನಮ್ಮ ಪ್ರಗತಿಹೊಂದುತ್ತಿರುವ ಹಾದಿಯಲ್ಲಿ ಸಾಗುತ್ತಿರುವ ಭಾರತದೇಶದ ಉಜ್ವಲಭವಿಷ್ಯಕ್ಕೆ ಶುಭಕಾಮನೆಗಳನ್ನು ಕೋರುತ್ತೇನೆ. ದೇಶದ ಹೊರಗಿದ್ದಾಗ ದೇಶಭಕ್ತಿ ನಮ್ಮಲಿ ಅತಿಯಾಗಿ ಪ್ರವಹಿಸುತ್ತೇನೋ ಅಂತ ಕೇಳಿದ್ದೆ. ಈಗ ನಾನು ಮತ್ತು ನನ್ನ ಪರಿವಾರದವರು ಭಾರತದಿಂದ ೧೩ ಸಹಸ್ರ ಕಿ.ಮೀ.ದೂರದಲ್ಲಿನ ಕೆನಡಾ ರಾಷ್ಟ್ರದಲ್ಲಿದ್ದೇವೆ. ೪ ವರ್ಷಗಳ ಹಿಂದೆ ಇದೇ ಸಮಯದಲ್ಲಿ ಅಮೆರಿಕಾದಲ್ಲಿದ್ದೆವು. ಈ ಮಾತಿನ ಸರಿಯಾದ ಅರ್ಥವನ್ನು ಕಾಣುತ್ತಿದ್ದೇವೆ; ಅನುಭವಿಸುತ್ತಿದ್ದೇವೆ ಸಹಿತ.
ಏನು ಸರಿಯಿಲ್ಲ ?
ಇಂದಿನ ಅಪಾರ ಬೆಳವಣಿಗೆಯ ಕಾಲದಲ್ಲಿ ಇದು ಸ್ವಾಭಾವಿಕ. ಒಬ್ಬ ಮಗುವಿಗೆ ಒಬ್ಬ ತಾಯಿ ಚೆನ್ನಾಗಿ ಲಾಲನೆಪಾಲನೆ ಮಾಡಿಯಾಳು. ಮನೆತುಂಬಾ ಮಕ್ಕಳಾದರೆ ಇದು ಸಾಧ್ಯವೇ ? ಇದೇ ನೋಡಿ ನಮ್ಮ ದೇಶದ ಪ್ರಗತ್ತಿಗೆ ಕಂಟಕವಾಗಿರುವ ಒಂದು ಪ್ರಮುಖ ಮುದ್ದೆ. ಇದನ್ನು ನಾವೆಲ್ಲಾ, ಜಾತಿ, ಅತ, ಧರ್ಮ, ಪಂಥಗಳೆಂದು ನೆಪಹೇಳದೆ ಅರ್ಥೈಸಿಕೊಂಡು ಕಟ್ಟುನಿಟ್ಟಾಗಿ ಆಚರಿಸುವ ಕಾಲ ಇಂದು ಒದಗಿಬಂದಿದೆ. ಇವತ್ತು ನಾವು ಅದನ್ನು ಅಮಲಿಗೆ ತಂದರೆ, ನಮ್ಮ ಮುಂದಿನಪೀಳಿಗೆ ಅದರ ಫಲಿತವನ್ನು ಗಳಿಸುತ್ತಾರೆ.
ಸಮಸ್ಯೆಗಳು ಎಂದು ಇರಲಿಲ್ಲ ?
ಇಂದು ಕೆಲವು ನಿವಾರಣೆಯಾಗಿವೆ, ಕೆಲವನ್ನು ನಾವು ಹೊರತೂ ಬಗೆಹರಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಯಾವ ಸಾಮಾಜಿಕ ಪಿಡುಗು ಎಂದು ತಕ್ಷಣ ಪರಿಹಾರವಾಯಿತು ? ಆಂಗ್ಲರು ಕೂಡಾ, ಸತಿ ಮೊದಲಾದ ಕೆಟ್ಟ ಸಂಪ್ರದಾಯಗಳ ಬಗ್ಗೆ ತಲೆಕೆಡೆಸಿಕೊಂಡಿದ್ದರು. ಪಾಶ್ಚಿಮಾತ್ಯರೆಲ್ಲಾ ಕೆಟ್ಟವರಲ್ಲ !
ಇನ್ನು ನಮ್ಮ ಇತಿಹಾಸ, ಪರಂಪರೆಗಳ ಬಗ್ಗೆ ನಮಗೆಷ್ಟು ಗೊತ್ತು ? ಇತಿಹಾಸ ಓದಿ ಒಂದು ಜಾತಿ, ಪಂಥ ಆಧಿಪತ್ಯದಮೇಲೆ ಕೋಪಮಾಡಿ ಕೊಂಡರೆ ಅದು ಸರಿಯಾದ ಓದಲ್ಲ. ಇಂದೂ ಕೆಲವು ಸಮಸ್ಯೆಗಳನ್ನು ನಾವು ಮನಗಂಡು ಅವನ್ನು ಸುಧಾರಿಸದೆ ಬೇರೆಯವರನ್ನು ದೂಶಿಸುವ ಕೆಟ್ಟ ಪರಂಪರೆಯನ್ನು ಬಿಡೋಣ.
ಬೇರೆ ದೇಶಗಳಿಂದ ನಾವು ಕಲಿಯುವುದು ಬಹಳವಿದೆ.ಅವರ ಎಲ್ಲಾ ನಡವಳಿಕೆಗಳೂ ಅನುಕರಣೀಯವಲ್ಲ. ನಮ್ಮಲ್ಲೂ ಅದೇ ಸತ್ಯ. ಒಳ್ಲೆಯದನ್ನು ಕಣ್ಣರಳಿಸೋಡುವುದನ್ನು ಕಲಿಯೋಣ. ಬೆರಳು ಯಾವಾಗಲೂ ನಮ್ಮಕಡೆ ಇರಲಿ ! ನನ್ನ ಕೊಡುಗೆ ಏನು, ನಾನುಮಾಡಿದೆಯೆನ್ನುವುದು ಮುಖ್ಯ.
ವಿಶ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧಗಳು ಹಲವಾರು :
ವಿಶ್ವದಲ್ಲಿ ಯುದ್ಧಗಳು, ಅತಿಸಾಮಾನ್ಯ. ಯುರೋಪ್, ಅಮೇರಿಕ, ಕೆನಡಾಗಳಲ್ಲಿ ನಡೆದ ಯುದ್ಧಗಳೆಷ್ಟು ? ಹಾಗೆನೋಡಿದರೆ ಇಂದಿನ ದಿನಗಳೇ ಕ್ಷೇಮಕರವಾಗಿವೆ. ಇರಾಕ್, ಆಫ್ಘಾನಿಸ್ಥಾನ್, ಇರಾನ್ ಮೊದಲಾದ ದೇಶಗಳ ಬಿಟ್ಟರೆ ! ನಮ್ಮ ಆಂತರಿಕ ಸಮಸ್ಯೆಗಳನ್ನು ನಾವೇ ಸುಧಾರಿಸಬೇಕು. ಹಾಗೆನೋಡಿದರೆ,ನಮ್ಮಲಿ ಮಹಾತ್ಮಾ ಗಾಂದೀಜಿ ಬಂದಮೇಲೆಯೇ ನಿಜವಾದ ಹೋರಾಟ ಆರಂಭವಾಯಿತು. ಅದು ಕೊನೆಗಾಣುವತನಕ ಟೊಂಕಕಟ್ಟಿ ಹೊಡೆದಾಡಿ ದೇಶವಾಸಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡಿದ್ದರಿಂದ. ಲೋಕಮಾನ್ಯ ಟಿಳಕ್ ಮೊದಲಾದವರು,ಹಿಂದೆ ಮಾಡಿದ ಕೆಲವು ಪ್ರಯತ್ನಗಳು, ತಾತ್ಕಾಲಿಕವಾದವುಗಳು. ವಯಸ್ಸಾದ ಟಿಳಕರು ತೀರಿಕೊಂಡ ನಂತರ, ನಿಜವಾದ ಅರ್ಥದಲ್ಲಿ ಮಹಾತ್ಮರ ತರಹ, ತನು-ಮನ-ಧನ-ಗಳನ್ನು ತೊರೆದುಮಾಡಿದ ಹೋರಾಟಗಳು ನಡೆಯಲೇ ಇಲ್ಲ. ! ಸ್ವಲ್ಪಕಾಲದನಂತರ ನೇತೃತ್ವದ ಕೊರತೆಯಿಂದ ಕೆಲವು ಸಫಲವಾಗಲಿಲ್ಲ.
ಆದರೆ ಯೂರೋಪ್, ಅಮೆರಿಕಾ, ಕೆನಡಾ ದೇಶದ ಚರಿತ್ರೆಯನ್ನು ಓದಿದರೆ ನಾವೆಷ್ಟು ಅದೃಷ್ಟವಂತರೆಂಬುದು ತಿಳಿಯುತ್ತದೆ.
* ಬ್ರಿಟಿಷರು ಮತ್ತು ಫ್ರೆಂಚರು ಸದಾ ಮಾಡಿದ ಯುದ್ಧಗಳು ವಿಶ್ವದಲ್ಲಿ ಅತಿ ಭಾರೀಪ್ರಮಾಣದ್ದು, ಮತ್ತು ವಿಶ್ವದಲ್ಲೆಲ್ಲಾ ಬ್ರಿಟಿಷರ ಆಧಿಪತ್ಯಕ್ಕೆ ಹಾಸಿದ ಕೆಂಪು ರತ್ನಗಂಬಳಿಯಾಯಿತು ಎನ್ನುವುದನ್ನು ನಾವುಗಳು ಅರಿಯಬೇಕು. ಅವರು ಯೂರೋಪಿನಲ್ಲಿ, ಅಮೆರಿಕದಲ್ಲಿ ಕೆನಡದಲ್ಲಿ ಭಾರತದಲ್ಲಿ, ಆಫ್ರಿಕಾದಲ್ಲಿ ಮತ್ತೆ ಬೇರೆಲ್ಲಾಕಡೆ ಹೋರಾಡಿ ಕೊನೆಗೆ ಅತಿಬಲಶಾಲಿಗಳಾಗಿದ್ದ ಬ್ರಿಟಿಷ್ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು. ಬ್ರಿಟಿಷರು ವಾಸ್ತವ್ಯಹೂಡಿ ಹೊಸ ಪ್ರದೇಶಗಳಿಗೆ ಕಾಲಿಟ್ಟಲ್ಲೆಲ್ಲಾ ಅವರ ನೆರೆಯ ಫ್ರೆಂಚ್ ರಾಷ್ಟ್ರವೂ ತನ್ನ ಸ್ವಾಮಿತ್ವವನ್ನು ಸಾಧಿಸಿಲು ಸನ್ನಧತೆ ನಡೆಸುತ್ತಿತ್ತು. ಕೆನಡಾದಲ್ಲಿ ಫ್ರೆಂಚ್ ಜನ ಮೊದಲೇ ಬಂದು ಹಲವು ಸ್ಥಳಗಳಲ್ಲಿ ನೆಲಸಿ ಆ ಪ್ರದೇಶವನ್ನು 'ಹೊಸ ಪ್ರಾನ್ಸ್' ಎಂಬ ಹೆಸರನ್ನೂ ಕೊಟ್ಟಿದ್ದರು. ಆದರೆ, ಬಲಾಢ್ಯರಾದ ಬ್ರಿಟಿಷರು, ಅವರನ್ನು ಅಮೆರಿಕಡ ಭಾಗಗಳಿಂದ ಹಿಮ್ಮೆಟ್ಟುವಂತೆ ಮಾಡಿದರು. ಇದನ್ನು ನಾವು ಕೆನಡಾ ಮತ್ತು ನಮ್ಮ ಮೈಸೂರ್ ಯುದ್ಧದಲ್ಲೂ ಕಾಣಬಹುದು. ನಿಜವಾಗಿ ಸೂಯೆಝ್ ಕಡಲ್ಗಾಲುವೆಯನ್ನು ನಿರ್ಮಾಣಮಾಡಿದವರು ಫ್ರೆಂಚ್ ಇಂಜಿನಿಯರ್ ಗಳು. ಆದರೆ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡವರು, ಬ್ರಿಟಿಷರು ! ಹೇಗೋ ಫ್ರೆಂಚ್ ಜನರ ಹಣದ ಕೊರತೆಯಿಂದಾಗಿ ಅವು ಬ್ರಿಟಿಷರ ಕೈಸೇರಿತು. ಹೀಗೆ ಬ್ರಿಟಿಷ್ ಫ್ರೆಂಚರಿಂದ ೭ ವರ್ಷಗಳ ವಿಶ್ವ ಯುದ್ಧದ ಬಳಿಕ, ಎಲ್ಲಾ ಪ್ರದೇಶಗಳನ್ನೂ ಕಸಿದುಕೊಂಡರು. ಇವನ್ನೆಲ್ಲಾ ಸ್ಥೂಲವಾಗಿ ನಾನು ಓದಿದ್ದೆ. ಆದರೆ, ಕೆನಡಾಕ್ಕೆ ಬಂದು ಇಲ್ಲಿನ ಜೀವನವನ್ನು ನೋಡಿ, ಟೊರಾಂಟೋ ಪಬ್ಲಿಕ್ ಲೈಬ್ರರಿಯಲ್ಲಿ ಓದಿದಮೇಲೆ ನನಗೆ ಚೆನ್ನಾಗಿ ಪರಿಸ್ಥಿತಿಯ ಅರಿವಾಯಿತು.
ಒಟ್ಟಿನಲ್ಲಿ ವಿಶ್ವವೇ ಅವರ ಭಾಷೆಯನ್ನು ಅನುಮೋದಿಸುತ್ತಿದೆ. ನಮಗಂತೂ ಇಲ್ಲಿನ ಜೀವನ ಶೈಲಿಗೆ, ಎಂಗ್ಲೀಷ್ ಬಿಟ್ಟು ಏನೂಮಾಡಲು ಸಾಧ್ಯವಿಲ್ಲ. ಇದು ನಮ್ಮಂತಹವರ ಇಂಗ್ಲೀಶ್ ಮೇಲೆಯೇ ಅವಲಂಭಿಸಿದವರ ಪಾಡು !
ಒಟ್ಟಿನಲ್ಲಿ ೬೯ ವರ್ಷವಯಸ್ಸಿನ ನನಗೆ ಜೀವನದ ದಾರಿಯಲ್ಲಿ ಸಿಕ್ಕ ಅನುಭವಗಳ ಮತ್ತು ಹಿತೈಶಿಗಳ, ಗುರುಹಿರಿಯರ, ಪ್ರೀತಿಯ ಅಣ್ಣಂದಿರ, ಆಪ್ತ ಬಂಧುಗಳ ಒಡನಾಟದಿಂದ ಬೋಧೆಗಳಿಂದ, ಓದಿನಿಂದ ಕಲಿತ ಅನುಭವಗಳ, ನಂತರ ಮಾಡಿದ, ಭಾರತದ ಪ್ರವಾಸಗಳು, ಅಮೆರಿಕ ಮತ್ತು ಕೆನಡಾ ಭೇಟಿಗಳು ನನಗೆ ನೀಡಿದ ಅಮೂಲ್ಯ ಜ್ಞಾನ ಸಂಪತ್ತಿನಿಂದ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ.
(ಕೇವಲ ಅಲ್ಲಿ ಜಾಗಗಳನ್ನು ನೋಡಿದೆ ಎನ್ನದೆ ಅಲ್ಲಿನ ಜೀವನ, ಸ್ಥಳ ಚರಿತ್ರೆಗಳಬಗ್ಗೆ ಸುಮಾರಾಗಿ ಅಭ್ಯಾಸ ಮಾಡಿ, ಅವುಗಳನ್ನು ನನ್ನ ಬ್ಲಾಗ್ ನಲ್ಲಿ ಬರೆದಿರುವೆ)
ಇಂದಿನ ವಿಶ್ವವೇ ಒಂದು ಊರಾಗಿರುವ ಸಂಧರ್ಬದಲ್ಲಿ, ನಮ್ಮ ಬದುಕಿಗೆ, ಉದ್ಯೋಗ, ಮೊದಲಾದ ಸಾಮಾಜಿಕ ಬದುಕಿಗೆ, ಕಲಿಕೆಗೆ ಇಂಗ್ಲೀಷ್ ಪ್ರಥಮ ಆದ್ಯತೆಯೆನ್ನುವುದರಲ್ಲಿ ಎರಡುಮಾತಿಲ್ಲ.
ಇದನ್ನು ಸರಿಯಾಗಿ ಅರಗಿಸಿಕೊಳ್ಳಲು ಅಮ್ಮ ಹೇಳಿಕೊಡುವ ಮಾತುಗಳು ಅತಿಮುಖ್ಯ. ತಾಯ್ನುಡಿಯಲ್ಲಿ ಅರ್ಥವಾಗುವಷ್ಟು ಬೇರೆಯಾವ ಭಾಷೆಯಲ್ಲೂ ಸಾಧ್ಯವಿಲ್ಲವೆನ್ನುವುದು ಇವತ್ತಿಗೂ ಸತ್ಯ. ನಂತರ ಇಂದಿನ ಸ್ಪರ್ಧಾತ್ಮಕ ಬದುಕಿಗೆ ಹಲವಾರು ಕೌಶಲ್ಯಗಳು ನಮಗೆ ಆವಶ್ಯಕ. ಅದಲ್ಲದೆ, ನಮ್ಮ ತಾಯಿಭಾಷೆಯ ಜೊತೆಗೆ ಇಂಗ್ಲೀಷ್, ಹಿಂದಿ ಮತ್ತು ಅನೇಕ ಭಾಷೆಗಳ ಪರಿಚಯ, ಕಲಿಕೆ ಅಗತ್ಯ. ನಮ್ಮಪುರಾತನ ಸಂಸ್ಕ್ರುತಿಯನ್ನು ಅರಿಯಲು ಪ್ರತಿಭಾರತೀಯನಿಗೂ ಸಂಸ್ಕೃತಭಾಷೆ ಅಗತ್ಯ. ಅದು ವ್ಯಕ್ತಿಯ ವರ್ಚಸ್ಸು ಮತ್ತು ಅರಿವಿನ ವಿಸ್ತಾರಗಳನ್ನು ಹೆಚ್ಚಿಸುತ್ತದೆ.
ಆರಿಸಿಕೊಂಡ ವಿಷಯದಲ್ಲಿ ನಾವು ಪ್ರವೀಣತೆಯನ್ನು ಸಾಧಿಸುವುದು ಅತಿಮುಖ್ಯ. ಇದರಜೊತೆಗೆ ಇತಿಹಾಸವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ ಸಂಶೋಧನೆ, ಹೊಸ ಜ್ಞಾನ ದೊರೆತ ಮೂಲವರಿತು, ಮುಂದೆ ಸಾಗಿ ನಮ್ಮ ಕಾಣಿಕೆಯನ್ನು ಕೊಡುವ ಪ್ರಯತ್ನ ನಮ್ಮಲ್ಲಿ ಅಚ್ಚಾಗಬೇಕು. ಈ ತತ್ವವನ್ನು ನಾವು ಬೆಳೆಸಿಕೊಳ್ಳಬೇಕು. ಯಾರನ್ನೂ ದೂಷಿಸುವ ಪ್ರವೃತ್ತಿಯಿಂದ ಹೊರಗಿರಬೇಕು.
ಮಹಾರಾಷ್ಟ್ರದ ಗೋಡೋನ್ ವೊಂದರ ಹೊರಗೆ ಸಾವಿರಾರು ಮೂಟೆಗಳ ತಿನ್ನುವ ಧಾನ್ಯ, ನೆಲಹತ್ತಿ ಹೊರಗೆ ಚೆಲ್ಲಿ ಹೆಗ್ಗಣಗಳಪಾಲಾಗಿದೆ. ಅದಕ್ಕೆ ಸಿಗುವ ಉತ್ತರ. ಈ ಕೆಲಸ ಕೇಂದ್ರ ಸರಕಾರದ್ದು. ಅದನ್ನು ಅವರು ಮಾಡಲಿಲ್ಲ. ನಮಗೇನುಗೊತ್ತು ? ಇಂತಹ ಬೇಜವಾಬ್ದಾರಿ ಉತ್ತರ ನಾವು ಎಂದೂ ಕೊಡುವ ಮಟ್ಟದ ಅಭಿಮಾನ್ಯಶೂನ್ಯತೆ, ಬೇಜ್ವಾಬ್ದಾರಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಾರದು !
ಧನಾತ್ಮಕ ಮಾನಸಿಕ ಸ್ಥಿತಿ ಅತ್ಯಾವಶ್ಯಕ :
ಯಾವಾಗಲು ಇದುನನ್ನ ಕೆಲಸವಲ್ಲ; ಅವನಿಂದ ಹೀಗಾಯಿತು. ಈತರಹದ ಮಾತುಗಳು ನಮ್ಮ ಸಾಮರ್ಥ್ಯ, ಹಾಗೂ ಪ್ರಗತಿಯ ರೇಖೆಯನ್ನು ಮೇಲೆ ಹೋಗಲು ಬಿಡುವುದಿಲ್ಲ ! ಇದನ್ನು ಅರಿತು ನಮ್ಮ ಮಕ್ಕಳಿಗೂ ಇದರ ಅರಿವು ಮೂಡಿಸುವುದು ಅಗತ್ಯ.
ಕೊನೆಯದಾಗಿ ನಾವುಗಳೆಲ್ಲಾ ಆಶಿಸುವ, ಡಾಕ್ಟರ್, ಇಂಜಿನಿಯರ್, ಪೈಲೆಟ್ ಮೊದಲಾದ ವಿದ್ಯಾರ್ಹತೆಯ ಜಾಗದಲ್ಲಿ ರಾಜಕಾರಣ ಇನ್ನುಮೇಲೆ ನಮ್ಮ ಯುವಕ-ಯುವತಿಯರ ಆಯ್ಕೆಯ ವಿಷಯಗಳಾಗಬೇಕು. ಲಾಯರ್, ಮತ್ತು ರಾಜ್ಯಸಭೆಯ, ಮತ್ತು ಲೋಕಸಭೆಯ ಸದಸ್ಯ (ಸ್ಯೆ) ಮತ್ತು ಪ್ರಧಾನಮಂತ್ರಿಯ, ಹಾಗೂ ರಾಷ್ಟ್ರಪತಿಯ ಜಾಗವನ್ನೂ ಅಲಂಕರಿಸುವ ಆಶೆ ನಮ್ಮ ಮಕ್ಕಳಲ್ಲಿ ಮೊಳಕೆ ಒಡೆಯಬೇಕು. ಜವಾಬ್ದಾರಿಗಳನ್ನು ಹೆಗಲಿಗೆ ಹೊರುವ, ನಿಭಾಯಿಸುವ ಯೋಗ್ಯತೆಗಳು ಮತ್ತು ಪ್ರಾವಿಣ್ಯತೆಗಳನ್ನು ಪಡೆದು, ಕೆಲಸಗಳನ್ನು ಅವರು ನಿಭಾಯಿಸದೆ ರಾಷ್ಟ್ರವನ್ನು ಸದಾ ಬೈಯ್ಯುವ ಪರಿಪಾಥದಿಂದ ಮುಕ್ತಗೊಳಿಸಬೇಕು. ಸದಾ ಯಾರನ್ನೂ ನಮ್ಮ ಆದ್ಯತೆಗಳಿಗೆ ನೆಚ್ಚಿಕೊಂಡು ಭವಿಷ್ಯವನ್ನು ಹಾಳುಮಾಡಿಕೊಳ್ಳುವುದರಲ್ಲಿ ಅರ್ಥವಿದೆಯೇ ?? !!
ನಮ್ಮ ಭಾರತಕ್ಕೆ ಒಲಂಪಿಕ್ ಪದಕದ ಸರ ತೊಡಿಸಿದ ಆಟಗಾರರು (ಗಾರ್ತಿಯರು) ತಮ್ಮ ಸ್ವಂತ ಬಲದಮೇಲೆ ಅವಲಂಬಿತರಾಗಿದ್ದರು. ಸರಕಾರವನ್ನಲ್ಲ ! ಸರಕಾರ ಮಾಡುವುದು ಸ್ವಲ್ಪ; ಒಳ್ಳೆಯ ಪ್ರದರ್ಶನ ಮಾಡಬೇಕಾದದ್ದು ನಾವುಗಳು; ಅಲ್ಲವೇ ?
ಮತ್ತೊಮ್ಮೆ ತಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾವೆಲ್ಲಾ ಮೇಲೆತಿಳಿಸಿದ ಪ್ರತಿಜ್ಞೆಗಳನ್ನು ಮಾಡೋಣ !
-ಹೊರಂಲವೆಂ,
-ಟೊರಾಂಟೋ, ಕೆನಡಾ,