ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ

ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ

ಕವನ

ಅಂದು ಕೆಂಪು ಕೋತಿಗಳನ್ನ ಹೊಡೆದೋಡಿಸಿದವರ ನೋಡಿ
ಸ್ವತಂತ್ರವಾಯಿತು ನಮ್ಮ ದೇಶ ಎಂದು ಮೆರೆದವರು ನಾವು
ಇಂದು ಕೋತಿಗಳ ಕೈಯಿಂದ ದೇಶ ರಕ್ಷಿಸಲು ಹೊರಟವರ ನೋಡಿ
ಸ್ವತಂತ್ರವಾಯಿತಾ ನಮ್ಮ ದೇಶ ಎಂದು ಜರಿಯುತಿರುವೆವು ನಾವು .


ಅವರಾದರೂ ಉಪವಾಸ,ಸತ್ಯಾಗ್ರಹಕ್ಕೆ ಓಗೊಟ್ಟು ಮಣಿದು ದೇಶ ತೊರೆದರು
ಲಕ್ಷ  ಲಕ್ಷ ಜನ ಒಮ್ಮೆಲೇ ಬಂದಿದ್ದು ನೋಡಿ ಉಳಿಗಾಲವಿಲ್ಲ ಎಂದರು
ಇವರು ತಾವೇ ಅಂದು ಆರಂಭಿಸಿದ ಉಪವಾಸಕೆ ಇಂದೇಕೋ ನಾಟಕದ ಹೆಸರಿಟ್ಟು
ಅದೇಷ್ಟು ದಿನ ತಾನೇ ಉಪವಾಸವಿರುವರು ಎಂದು ಅಲಕ್ಷ ಮಾಡುತಿಹರು

ಒಡೆದು ಆಳುವ ನೀತಿಯ ಬಿಜ ಬಿತ್ತಿ ಹೋದ ಅವರು
ಹೋಗುವಾಗ ದೇಶವ ಇಬ್ಭಾಗ ಮಾಡಿ ಹೋದರು
ಬೀಜವನ್ನು ಚೆನ್ನಾಗಿ ನಿರುಣಿಸಿ ಮರವ ಮಾಡಿ ಇವರು
ಇರುವ ಒಗ್ಗಟ್ಟನ್ನು ಒಡೆದು ನಾ ಗೆದ್ದೇ ಎಂದು ಬಿಗುತಿಹರು

ಪ್ರತಿಬಾರಿ ಈ ದಿನದಂದು ದೇಶ ಸ್ವತಂತ್ರಗೊಂಡ ಇತಿಹಾಸ
ಮಕ್ಕಳಿಗೆ ತಿಳಿಸಲು ಹಾತೊರಿಯುತಿದ್ದ ಈ ಮನ ಇಂದು ದಿಗಿಲುಗೊಂಡು
ಹೇಳಿತು ಸುಮ್ಮನಿರು ಮಕ್ಕಳು ಕೇಳಿ ಬಿಟ್ಟಾರು ಹಾಗಾದರೆ
ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ ಹೇಗೆಂದು
                                                     ಪ್ರವೀಣ್.ಎಸ್.ಕುಲಕರ್ಣಿ(ಚುಕ್ಕಿ)


Comments