ನಾನೂ ಅಮ್ಮನಾದೆ!!!
ಕವನ
ನಿನ್ನೆ- ಮೊನ್ನೆಯವರೆಗೆ ಆಡುತಾಡುತಲೇ ಬೆಳೆದೆ
ಇಂಧ್ಹೇಗೋ ನಾಕಾಣೆ ನಾನೂ ಅಮ್ಮನಾದೆ!!
ಹೊರುವ ಭಾರವು ಇಲ್ಲ, ಹೆರುವ ನೋವೆನಗಿಲ್ಲ
ಮಾತಾಡಿಸಿ- ನಗಿಸುವ ಖುಷಿಯೊಂದೆ ನನಗೆ.
ಮಗು ಎಡವೀತೇಂಬ ಆತಂಕವಿಲ್ಲ, ಕಳೆದುಹೋದೀತೆಂಬ ಭಯವೆನಗಿಲ್ಲ
ನಾಜೂಕು ಮನದ ನಾರಿಯ ಮಡಿಲುಂಟು ನನಗೆ.
ಚಂದಿರನ ತೋರಿಸಿ ತುತ್ತಿಟ್ಟ ಕೈಗೆ
ತುಪ್ಪ- ಸಕ್ಕರೆ ಕಲಿಸಿದ ತಟ್ಟೆಯಿಡುವ ತವಕ.
ಅಡುಗೆಯೆಂದೇನೋ ಮಾಡಿ, ಕೆಡಿಸಿ ಹಲುಬಿದಾಗ
ಮಗುವೇ ರಮಿಸುವುದು ಇದೆಲ್ಲ ಸಹಜ ಕಲಿಯುವ ತನಕ.
ಕಾಡಿಸುವುದಿಲ್ಲ - ಪೀಡಿಸುವುದಿಲ್ಲ, ರಚ್ಚೆ ಹಿಡಿದಳುವುದಿಲ್ಲ
ಹೆಚ್ಹಾಗಿ ಹೇಳಬೇಕೆಂದರೆ ಪದಗಳೇ ಉಳಿಯುತ್ತಿಲ್ಲ.
ಕಣ್ರೆಪ್ಪೆಯಂತೆ ಕನಸುಗಳಿಗೆಲ್ಲ ಕಾವಲಾಗಿರುವ ಕೂಸು
ತನ್ನ ಮಗುವಿಗಾಗಿ , ಮಗುವಾಗಿ ಬಯಸುವುದೆಲ್ಲರ ಲೇಸು.
ನಿನ್ನೆ- ಮೊನ್ನೆಯವರೆಗೆ ಆಡುತಾಡುತಲೇ ಬೆಳೆದೆ
ಇಂಧ್ಹೇಗೋ ನಾಕಾಣೆ ನಾನೂ ಅಮ್ಮನಾದೆ.
ಎರಡೇ ದಿನದೊಳಗೆ ಮಗು ಹೆತ್ತು ಬೆಳೆಸಿದೆನು
ಮೂರನೇ ದಿನ ಕಳೆಯುತ್ತಲೇ ಮತ್ತೆ ಮಗುವಾದೆ.
Comments
ಉ: ನಾನೂ ಅಮ್ಮನಾದೆ!!!
ಉ: ನಾನೂ ಅಮ್ಮನಾದೆ!!!
In reply to ಉ: ನಾನೂ ಅಮ್ಮನಾದೆ!!! by makara
ಉ: ನಾನೂ ಅಮ್ಮನಾದೆ!!!
ಉ: ನಾನೂ ಅಮ್ಮನಾದೆ!!!
ಉ: ನಾನೂ ಅಮ್ಮನಾದೆ!!!
ಉ: ನಾನೂ ಅಮ್ಮನಾದೆ!!!
In reply to ಉ: ನಾನೂ ಅಮ್ಮನಾದೆ!!! by gurudutt_r
ಉ: ನಾನೂ ಅಮ್ಮನಾದೆ!!!
ಉ: ನಾನೂ ಅಮ್ಮನಾದೆ!!!