ಮುಂಬೈ ಮಳೆ

ಮುಂಬೈ ಮಳೆ

ಬರಹ
ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು ಮಳೆಯಲಿ ತೊಯ್ದು ಪರಿವೆ ಇಲ್ಲದೆ ಓಡುವುದ ನೋಡುವುದೇ ಸೊಗಸು ತಲೆಯ ಮೇಲೆ ಕಾಣುವುದು ಬಣ್ಣ ಬಣ್ಣದ ಛತ್ರಿಗಳು ಇವರು ನೆನಪಿಸುವರು ಬಣ್ಣ ಬದಲಿಸುವ ಗೋಸುಂಬೆಗಳು ನನ್ನೂರಿನ ನಾರಿಮನ್ ಪಾಯಿಂಟಿನ ಸಮುದ್ರದ ಅಬ್ಬರ ಅದ ನೋಡುತ ನಿಲ್ಲುವುದೇ ಬಲು ಸುಂದರ ನೋಡುತ ನೋಡುತ ತಪ್ಪುವೆವು ಎಚ್ಚರ ಎತ್ತೊಯ್ಯುವುವು ಅಲೆಗಳು ಬಲು ಎತ್ತರ ಇಲ್ಲಿ ತೆರೆದ ಛತ್ರಿಯ ನೋಡಿ ಹೇಗಿಹುದು ಬಟ್ಟೆ ಮೇಲೇರಿ ಬರಿ ಕಡ್ಡಿ ಕೈಯಲಿಹುದು ಟ್ಯಾಕ್ಸಿ ಆಟೋ ಚಾಲಕರಿಗೆ ಎಷ್ಟು ಖುಷಿ ಪಾದಚಾರಿಗಳ ಬಟ್ಟೆಗಳಿಗೆಲ್ಲ ಕೆಸರನು ಹಾರಿಸಿ ಗುಡ್ಡದ ಮೇಲಿರುವ ಮನೆ ಕಡೆ ಹೋಗಲು ಇರಬೇಕು ಛತ್ರಿ ಅದನು ಸರಿಯಾಗಿ ಹಿಡಿದಿರುವೆ ಎಂದು ಮಾಡಿಕೋ ಖಾತ್ರಿ ಮಧ್ಯಮ ವರ್ಗದ ಚಾಲಿನ ಮನೆಯೊಳಗೆಲ್ಲ ಪಾತ್ರಿ ನೆನಪಿಸಿಕೊ ಮನೆ ಸೇರಿವುದೊಮ್ಮೊಮ್ಮೆ ಸರಿ ರಾತ್ರಿ