ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
ಈಗ್ಗೆ ಒಂದು ವರ್ಷದ ಹಿಂದೆ ದಿ ಆರ್ಟಿಸ್ಟ್ ಎನುವ ಕಪ್ಪು-ಬಿಳುಪು ಮೂಕಿ ಚಿತ್ರ ಬಂತಲ್ಲ.......!
-ನೋಡಿದ್ದೀರಾ???
ಕೆಲ ತಿಂಗಳುಗಳ /ವರ್ಷದ ಹಿಂದೆ ಬಹುಶ ಸುಪ್ರೀತ್ ಅವರು ದಿ ಆರ್ಟಿಸ್ಟ್ ಚಿತ್ರದ ಬಗ್ಗೆ ಬರೆದ ಹಾಗೆ ನೆನಪು...
(ಅದನ್ನು ಬರೆದದೂ ಖಚಿತವಾಗಿ ಯಾರು ಅಂತ ನಾ ಈ ಬರಹ ಸೇರಿಸಿದ ಮೇಲೆ ಗೊತ್ತಗಬಹುದೇನೋ?/ ಕಾರಣ- ಈ ಪುಟವನ್ನು ಹೋಲುವ ಬರಹಗಳು ಎಂದು ಸಂಪದದಲ್ಲಿ ನನ್ ಬರಹದ ಕೆಳಗಡೆ ಬರುವದು..!)
ಈಚೆಗೆ ನನಗೆ ಪರಿಚಯದ ಒಬ್ಬ ಗ್ರಾಹಕರು ತಂದ ಪೆನ್ ಡ್ರೈವ್ ನಲ್ಲಿ 'ದಿ ಆರ್ಟಿಸ್ಟ್' ಎನ್ನುವ ಚಿತ್ರದ ಹೆಸರು ನೋಡಿ ಮತ್ತು ಆ ಚಿತ್ರ ಪ್ರಶಸ್ತಿ ಗಳಿಸಿದ್ದು -ಪ್ರದರ್ಶನಗೊಂಡ ಎಲ್ಲಾ ಕಡೆ ಜೈಭೇರಿ ಬಾರಿಸಿ ಹೆಸರು ಮಾಡಿದ್ದು ಕೇಳಿದ್ದೆ ಓದಿದ್ದೆನಲ್ಲ ಅದ್ಕೆ , ಆ ಗ್ರಾಹಕರನ್ನು ವಿನಂತಿಸಿಕೊಂಡು ಅದನು ನನ್ನ ಪೆನ್ ಡ್ರೈವ್ ಗೆ ಕಾಪಿ ಮಾಡಿದೆ.. ಆ ರಾತ್ರಿಯೇ ನನ್ ಸಿಸ್ಟಂನಲ್ಲಿ ಅದನ್ನು ಮೊಬೈಲಿನಲ್ಲಿ ನೋಡಲು ಅನುಕೂಲ ಆಗುವಂತೆ ಬದಲಾಯಿಸಿದೆ .. ಆ ಮಧ್ಯೆ ನಾ ಆಫೀಸಿಗೆ ಹೋಗುವ ಬರುವ ಸಮಯದಲಿ ಬಸ್ಸಿನಲ್ಲೇ ಅದನ್ನು ನೋಡಲು ಶುರು ಮಾಡಿದೆ..
ಅಸಲಿಗೆ ಈ ಚಿತ್ರ -ಮೂಕಿ ಚಿತ್ರ...!!
ಮೊದಲಿಗೆ ನನ್ನ ಬಗ್ಗೆ:
ನನಗೆ ಸಿನೆಮಾ ಹುಚ್ಚು ವಿಪರೀತ-
ಚಿಕ್ಕಂದಿನಲ್ಲಿ ಓದು ಬಿಟ್ಟು ಹಗಲು ರಾತ್ರಿ ಟೀ ವಿ ನೋಡಲು ನಮ್ ಊರಿನ ಸಿರಿವಂತರ ಮನೆಗೆ ಎಡ ತಾಕುತ್ತಿದ್ದುದು -ಮಧ್ಯ ರಾತ್ರಿಗಂಟ ನೋಡಿ ಮನೆಗೆ ಬಂದು ಅಪ್ಪ ಅಣ್ಣನ ಕೈಲಿ ಫುಲ್ 'ಪೇಮೆಂಟ್ ' ತೆಗೆದುಕೊಂಡು ಮೈಕೆಲ್ ಜಾಕ್ಸನ್ ಡ್ಯಾನ್ಸ್ ಮಾಡಿದ್ದು ಈಗಲೂ ನೆನಪು,,!
ರಾಮಾಯಣ-
ಮಹಾ ಭಾರತ -
ಶ್ರೀ ಕೃಷ್ಣ-
ಜೈ ಹನುಮಾನ್-
ಕ್ಯಾಪ್ಟನ್ ಹ್ಯೂಮ್ -
ಅಲಿಫ್ ಲೈಲಾ-
ಚಂದ್ರ ಕಾಂತ-
ಶಕ್ತಿಮಾನ್,
ಚಿತ್ರ ಹಾರ್-
ಶನಿವಾರ ಭಾನುವಾರ ಶುಕ್ರವಾರ ದ ಸಿನೆಮಾಗಳು...
(ಆಗ ಜಾಹೀರಾತುಗಳು ಬೋರ್ ಅನಿಸುತ್ತಿರಲಿಲ್ಲ..!) ನೋಡಿದ್ದು ನೆನಪು..
ಆಮೇಲೆ ಕೆಲ ಚಿತ್ರಗಳನ್ನು ಕುಟುಂಬದ ಜೊತೆ ನೋಡಿದ್ದು ನೆನಪು-
ಅದರಲ್ಲಿ ಅಣ್ಣಾವ್ರ ಮತ್ತು ಅವರ ಮಕ್ಕಳ ಚಿತ್ರಗಳ ಸಂಖ್ಯೆ ಜಾಸ್ತಿ;
ಕಾರಣ-ಮನೆಯವರೆಲ್ಲ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಚಿತ್ರಗಳು..ಅವರವು(ಆಗ)
ಆಮೇಲೆ ಬೆಳೆಯುತ್ತ ಬೆಳೆಯುತ್ತ ಈ ಸಿನೆಮಾ ಹುಚ್ಚು ವಿಪರೆತ ಆಯ್ತು, ಓದಿಗೆ ನಗರಕ್ಕೆ ಬಂದ ಮೇಲೆ (ರಾಯಚೂರು) ತೆಲುಗು ಹಿಂದಿ ಪ್ರಭಾವ ಜಾಸ್ತಿ ಆಯ್ತು (ಅಲ್ಲಿ ಮುಸ್ಲಿಮರು ಮತ್ತು ತೆಲುಗು ಪ್ರಭಾವದ ಜನ ಜಾಸ್ತಿ)....ಹೀಗಾಗಿ ಕಾನನದ-ಹಿಂದಿ-ತೆಲುಗು-ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದೆ..
ಮಾಮೂಲಿಗಿಂತ ವಿಭಿನ್ನ ವಾದ ಚಿತರಗ್ಲೆ ನನ್ನು ಹೆಚ್ಚು ಸೆಳೆದದ್ದು -ಅವುಗಲ್ಲಿ ಪ್ರಾಣಿ -ಪಕ್ಷಿ -ದೆವ್ವ-ಇತ್ಯಾದಿ ಚಿತ್ರಗಳು ಇಷ್ಟ...!!
ಹೀಗೆ ನನ್ನ ಸಿನೆಮಾ ಹುಚ್ಚು ಕಂಡ ಗೆಳೆಯರು ಆಗಾಗ ಹೇಳಿದ್ದು- ಇವನು ಖಂಡಿತ ಸಿನೆಮಾ ಲ್ಯಾಂಡ್ ಗೆ ಲಾಯಕ್ಕು- ಹೀರೋ ಆಗದಿದ್ದರೂ ನಿರ್ದೇಶಕನೋ? ಇನ್ನೇನೋ(ತೆರೆ ಹಿಂದೆ) ಆಗುವನು -ಅವರು ಹಾಗ್ ಹೇಳಲು ಕಾರಣ ನಾ ಅವರೊಡನೆ ನಾ ನೋಡಿದ ಚಿತ್ರಗಳ ಬಗ್ಗೆ ಚರ್ಚಿಸುತ್ತಿದ್ದೆ -ಹಾಗಿದ್ದರೆ ಚೆನ್ನಿತ್ತು - ಹೀಗಿದ್ದರೆ ಚೆನ್ನಿತ್ತು ಅಂತೆಲ್ಲ ವಾದ ಮಾಡುತ್ತಿದ್ದೆ..
ಕೆಲವೊಮ್ಮೆ ನನ್ನ ಮತ್ತು ಅವರ ಮೆಚ್ಚಿನ ನಟ ನಟಿ ಚಿತ್ರ ಸಂಬಂಧವಾಗಿ ವಾಗ್ವಾದ ಮಾಡಿ ಮಾತು ಕತೆ ಕಟ್ ಮಾಡಿದ್ದು ಇದೆ...!!
ಹೀಗೆ ನನ್ ಸಿನೆಮಾ ಹುಚ್ಚು ಜಾಸ್ತಿ ಆಯ್ತೆ ಹೊರತು -ಕಡಿಮೆ ಆಗಲಿಲ್ಲ..
ಈಗಲೂ ಮನೆಯಲ್ಲಿ ನಾ ಟೀ ವಿ ಮುಂದೆ 'ಟೀವಿಯಿಂದ' ರೀಮೊಟ್- ಮೌಸ್ ಕುಳಿತರೆ ಅರ್ಥ:
ನೆಕ್ಸ್ಟ್ ದಿನವೇ ಬೇರೆಯವರು ಟೀ ವಿ ನೋಡಬೇಕು..!!
ಆಗಾಗ ಈ 'ಒಳ್ಳೆಯ' ಚಿತ್ರಗಳು ಸಖತ್ ಚಿತ್ರಗಳು ಎಂದು ಇರುವವನ್ನ ನೆಟ್ನಲ್ಲಿ ಜಾಲಾಡಿ ಡೌನ್ಲೋಡ್ ಮಾಡಿ ನೋಡುವೆ.. ಹಾಗೆ ಹುಡುಕಾಡುತ್ತ ನಾ ಹೋಗಿ ತಲುಪಿದ್ದು ಐ ಎಂ ಡಿ ಬಿ ವೆಬ್ಸೈಟ್ ಗೆ -ಅಲ್ಲಿ ಬಹುತೇಕ ಆಂಗ್ಲ ಹಿಂದಿ ತೆಲುಗು ಚಿತ್ರಗಳ ವಿಮರ್ಶೆ -ಸಂಪೂರ್ಣ ಮಾಹಿತಿ ಇರುತ್ತೆ, ಅಲ್ಲಿ ಒಂದು ಒಳ್ಳೆಯ ಚಿತ್ರ ನಮಮ್ ಕಣ್ಣಿಗೆ ನೋಡ ಸಿಕ್ಕರೆ ಅದರ ಕೆಳಗಡೆ ಯೌ ಮೇ ಅಲ್ಸೋ ಲೈಕ್ ಅಂತ ಇನ್ನಸ್ಟು ಒಳ್ಳೆ ಚಿತ್ರಗಳ ಬಗ್ಗೆ ಮಾಹಿತಿ ಸಿಗುವದು ..(ಸಂಪದದಲ್ಲಿ- ಈ ಪುಟವನ್ನು ಹೋಲುವ ಬರಹಗಳು ಸಂಪದ ಅರ್ಚೀವ್ಸ್ ತರಹ) ..
ಈಗಂತೂ ನಾ ಡೌನ್ಲೋಡ್ ಮಾಡಬೇಕಾದ -ಇನ್ನು ನೋಡಬೇಕಾದ ಚಿತ್ರಗಳ ಪಟ್ಟಿ ಬೇಜಾನ್ ದೊಡ್ಡದು ಆಗಿದೆ..:())) ಆಗುತ್ತಲೇ ಇದೆ....!!
ಈಗೀಗ ಮನೆಗೆ ತಲುಪಲು ಮತ್ತು ಆಫೀಸಿಗೆ ಹೊರಡಲು ತಗಲುವ ಸಮಯದ ಕಾರಣ ಮನೆಯಲ್ಲಿ ಟೀ ವಿ ನೋಡಲೇ ಆಗುತ್ತಿಲ್ಲ,ರಜಾ ದಿನವೂ (ಶುಕ್ರವಾರ) ಬೇರೆ ಕೆಲಸಗಳು ಇರುವುದರಿಂದ ಮತ್ತು ಬೀ ಕಾಂ ಓದು ಕಾರಣ ನನ್ನ ಸಿಸ್ಟಮ್ನಲ್ಲೇ ರಾತ್ರಿ ನಾ ನೋಡಬೇಕಾದ ಚಿತ್ರಗಳನ್ನು ಮೊಬೈಲಿನಲ್ಲಿ ನೋಡಲು ಅನುಕೂಲ ಆಗೋ ರೀತಿಯಲ್ಲಿ ಬದಲಾಯಿಸಿ ಆ ಚಿತ್ರಗಳನ್ನು ಬಸ್ಸಿನಲ್ಲಿ ಬರುವಾಗ-ಹೋಗುವಾಗ ನೋಡುವೆನು..!!
ಈ ಸಿನೆಮಾ ಸಂಗ್ರಹಣೆಗೆ ಎಂದೇ ಒಂದು ಟೆರ ಬೈಟ್ (೧೦೦೦ ಜಿ ಬಿ , ೧ ಜಿ ಬಿ = ೧೦೦೦ ಎಂ ಬಿ )ಯ ಒಂದು ಹಾರ್ಡ್ ಡಿಸ್ಕ್ ತಂದು ಅದರಲ್ಲಿ ೫೦೦ ಜಿ ಬಿ ಯನ್ನು ಸಿನೆಮ ಸಂಗ್ರಹಣೆಗೆ ಬಿಟ್ಟಿರುವೆ..! ಮತ್ತು ಈಗ ಅದು ಆಲ್ಮೋಸ್ಟ್ ಫುಲ್..!! ಈಗ ಮತ್ತೊಂದು ಟೆರ ಬೈಟ್ ತೆಗೆದುಕೊಳ್ಳುವವ ಯೋಚನೆ ಇದೆ.....:())
ಈ ಚಿತ್ರದ ಬಗ್ಗೆ ಮೊದಲೇ ಕೇಳಿದ್ದೆ -ಓದಿದ್ದೆ- ಅದಕ್ಕೆ ಬಂದ ತುಂಬಾ ಸಕಾರಾತ್ಮಕ ಮೆಚ್ಚುಗೆಯ ಹೊಗಳಿಕೆಯ ಪ್ರತಿಕ್ರಿಯೆಗಳು- ವಿಮರ್ಶೆ ಗೊತ್ತಿದ್ದೂ ಅದನ್ನು ನೋಡಲು ನಾ ಮನಸು ಮಾಡಿರಲಿಲ್ಲ...(ಬಹುಶ ನೀವೂ ಸಹ..!)... ಅದ್ಕೆ ಕಾರಣ ಅದು ಮೂಕಿ ಚಿತ್ರ ಮತ್ತು ಕಪ್ಪು ಬಿಳುಪಿನ ಚಿತ್ರ -ಅದು ನನಗೆ ಇಷ್ಟ ಆಗದೆ ಇರಬಹುದು ಎನ್ನುವ ಮತ್ತು ಅದು ನನಗಲ್ಲ (ಆರ್ಟ್ ಸಿನೆಮ ಇಷ್ಟ ಪಡುವವರಿಗೆ..!!) ಎನ್ನುವ 'ಪೂರ್ವಾಗ್ರಹ ಪೀಡಿತ ಭಾವ' ತಾನೇ ತಾನಾಗಿ ಬಂದು ಅದನ್ನು ನೋಡಿರಲಿಲ್ಲ...
ಕೆಲ ದಿನಗಳ ಹಿಂದೆ ಬಸ್ಸಲ್ಲಿಯೇ ಹೋಗಿ ಬರುವಾಗ ನೋಡಿದೆ...
ಆಗ ಅನ್ನಿಸಿದ್ದು:
ಛೆ ಛೆ...!! ಇದನ್ನು ನೋಡದಿದ್ದರೆ ಎಂತ ಒಳ್ಳೆ ಚಿತ್ರಾನ ಮಿಸ್ ಮಾಡಿಕೊಳ್ಳುತ್ತಿದ್ದೆನಲ್ಲ.
ನಿಜ.. ನಿಜ...
ಕಪ್ಪು ಬಿಳುಪಿನ ಮೂಕಿ ಚಿತ್ರ- ಪೋಸ್ಟರ್ ನೋಡಿದ್ದರೆ ಇದನ್ನು ನೋಡಬೇಕೆ ಅನ್ನಿಸುವ ಹಾಗೆ..!! ಆದರೆ ಮುಖ ನೋಡಿ ಮೊಳ ಹಾಕಬೇಡ ಗಾದೆ ಸುಳ್ಳಲ್ಲ ಬಿಡಿ...
ಛಾಯಾಗ್ರಹಣ ಸೂಪರ್-ಗ್ಯುಲಾಮೆ ಶಿಪ್ಮನ್ -ಛಾಯಾಗ್ರಾಹಕ
ಚಿತ್ರದ ಸಂಕಲನ ಸಖತ್.(ಅನ್ನೇ ಸೋಪಿ ಬಿಯಾನ್ ಮತ್ತು ನಿರ್ದೇಶಕ ಮೈಖೇಲ್ ಅಜನವಿಸಿಯಸ್ )
ಗ್ರೆಗರಿ ಎಸ ಹೂಪರ್ ಅವರ ಕಲಾ ಕೆಲಸಕ್ಕೆ ಧಾರಾಳವಾಗಿ ಹೇರಳ ಮಾರ್ಕ್ಸ್ ಕೊಡಬಹುದು..
ವಸ್ತ್ರ ವಿನ್ಯಾಸ- ಮಾರ್ಕ್ ಬ್ರಿದ್ಜೆಸ್.(ಸಖತ್)- ಮೆಚ್ಚುಗೆಯ ಕೆಲಸ...
ಪ್ರಸಾದನ (ಮೇಕಪ್)- ಸಕತ್...
ಈಗ ಈ ಚಿತ್ರದ ಪಾತ್ರ ವರ್ಗ ಇತ್ಯಾದಿ ಬಗ್ಗೆ :
ನಟ - ಜೀನ್ ಡುಜರ್ದೀನ್ (ಮೂಕಿ ಚಿತ್ರಗಳ ಖ್ಯಾತ ನಟ -ಈ ಚಿತ್ರದಲ್ಲಿ ಪಾತ್ರದ ಹೆಸರು-ಜಾರ್ಜ್ ವಾಲೆಂಟೈನ್ )
ನಟಿ - ಬೆರೆನೈಸ್ ಬೆಜೋ (ಅಪರಿಚಿತ ಹುಡುಗಿ-ಪೆಪ್ಪಿ ಮಿಲ್ಲರ್- ಈ ಚಿತ್ರದಲ್ಲಿ ನಟಿಯ ಪಾತ್ರದ ಹೆಸರು )
ನಿರ್ದೇಶಕ - ಮೈಖೇಲ್ ಅಜನವಿಸಿಯಸ್
ನೀವು ಅದಾಗಲೇ ಚಿತ್ರ ನೋಡಿದ್ದರೆ -ಕೆಲವೊಂದು ಸನ್ನಿವೇಶ -ಸಂದರ್ಭ-ದೃಶ್ಯ ಓಡಿಸಿಕೊಂಡು ನೋಡಿದ್ದರೆ..!! ಇನ್ನೊಮ್ಮೆ ನೋಡಿ..
ನೋಡದೆ ಇರ್ವವರು ಮುಂದೊಮ್ಮೆ ನೋಡುವವರು ನಾ ಈ ಕೆಳಗೆ ಪಟ್ಟಿ ಮಾಡಿದ ಸನ್ನಿವೇಶಗಳನ್ನು ಮಿಸ್ ಮಾಡಿಕೊಬೇಡಿ...
ಚಿತ್ರದಲ್ಲಿನ ಕೆಲ ಮನಕಲುಕುವ -ಮೆಚ್ಚುಗೆ ತರುವ -ಭಾವನೆಗಳ ಅಲೆ ಎಬ್ಬಿಸುವ ಸನ್ನಿವೇಶಗಳು :
ತುಂಬಾ ಇವೆ ,ಅದರಲ್ಲಿ ಕೆಲವನ್ನು ಹೆಕ್ಕಿರುವೆ..
೧.ನಟ ಮತ್ತು -ಅಪರಿಚಿತ ಹುಡುಗಿಯ ಭೇಟಿ
೨.ಆ ನಟನ ಸೆಟ್ನಲ್ಲಿ ಅವಳು ನಟನನ್ನು ಮಾತಾಡಿಸಲು ಹೋದಾಗ ನಿರ್ಮಾಪಕ ಅವಳಿಗೆ ನೀ ಎಕ್ಸ್ಟ್ರಾ ಅಸ್ಟೇ, ತೊಲಗಾಚೆ ಎನ್ನೋದು-ಆಗ ನಟನ ಮೊಗದಲ್ಲಿ ಅಸಹಾಯಕತೆ ಭಾವ
( ಅದೇ ನಿರ್ಮಾಪಕ ಆಮೇಲೆ ಅವಳ ಕೈ ಕಾಲು ಬಿದ್ದು ಸಿನೆಮ ತೆಗೆವನು:((( )
೩. ನೆಪೋಲಿಯನ್ ವೇಷ ಹಾಕಿದ ಒಬ್ಬ ಸಾಮಾನ್ಯ ನಟ (ಪಾತ್ರ ಧಾರಿ ) ವಿಶ್ರಾಂತಿ ಸಮಯದಲ್ಲಿ ತಾ ಕೂರಲು ಚೇರ್ ತನ್ನಿ ಅಂತ ವೀರಾವೇಶದಿಂದ ಹೇಳಿದಾಗ , ಸೆಟ್ ನ ಹುಡುಗ ಒಬ್ಬ 'ನೀ ಬರೀ ಪಾತ್ರಧಾರಿ ಅಸ್ಟೇ' ನೆಪೋಲಿಯನ್ ಮಹಾರಾಜ ಅಲ್ಲ ಅನ್ನೋದು ..!!
೪ ನಟನ ಪತ್ನಿ ಹೇಳದೆ ಕೇಳದೆ ಒಂದು ಪತ್ರ ಬರೆದಿಟ್ಟು ದೂರ ಹೋಗೋದು. ಅದೂ ನಾಯಕ ನಟ ನಿಗೆ ವಕ್ರದೆಸೆ ಶುರು ಆದಾಗ...:((
೫. ನಟನ ವೃತ್ತಿ ಅಚಾನಕ್ಕಾಗಿ ಪಾತಾಳಕ್ಕೆ ಕುಸಿದು ಆ ಪರಿಚಿತ ಹುಡುಗಿ ಫೇಮಸ್ ನಟಿ ಆಗುವ ಹಂತದ ದೃಶ್ಯಗಳು
೬. ಇಬ್ಬರ ಚಿತ್ರಗಳು ಒಟ್ಟಿಗೆ ಬಿಡುಗಡೆ ಆಗಿ , ಅವಳ ಚಿತ್ರ ಹೌಸ್ಫುಲ್ ಆಗಿ ಇವನ ಚಿತ್ರಕೆ ಇವನೇ ನೊಣ ಹೊಡೆಯುತ್ತ ನೋಡೋದು...!!
೭. ತನ್ನ ಕಾರು ಚಾಲಕನಿಗೆ ಹಣ ಮತ್ತು ಕಾರು ತೆಗೆದುಕೊಂಡು ಹೊರಡು ಎನ್ನುವ ದೃಶ್ಯ (ನಂಗೆ ಅತೀವ ಮೆಚ್ಚುಗೆಯಾದದ್ದು)-
ಆಗ ನಟನ ತಳಮಳ-ಹಿಂಜರಿಕೆ -ಅಸಹಾಯಕತೆ ನೋಡಲು ಮನ ಕಲಕುವುದು .(ಚಾಲಕನಿಗೆ ಬೆನ್ನು ಮಾಡಿ ಹೇಳುವನು -ಬಹುಶ ಮುಖದ ಭಾವನೆಗಳು ಚಾಲಕನಿಗೆ ಗೊತ್ತಾಗಬಾರದು ಅಂತ)
೮. ಮನೆಯಲ್ಲಿ ರೀಲುಗಳಿಗೆ ಬೆಂಕಿ ಹಚ್ಚಿ ಆಮೇಲೆ ಆ ಬೆಂಕಿ ದೊಡ್ಡದಾಗಿ ಎಲ್ಲ ಕಡೆ ಆವರಿಸಿದಾಗ ಜೀವ ಭಯದಿಂದ ಮೂಲೆಗೆ ಹೋಗಿ ಕುಳಿತುಕೊಳ್ಳುವ ದೃಶ್ಯ..!
೯.ಆಸ್ಪತ್ರೆಯಲ್ಲಿ- ಅವನನ್ನು ನೋಡಲು ಧಾವಿಸುವ ನಟಿಯ ದೃಶ್ಯ
೧೦. ನಟಿಯ ಮನೆಯಲ್ಲಿ ಇಬ್ಬರ ಕಣ್ಣು - ಮನ ಸಂಧಿಸಿದಾಗ,!!
೧೧. ಕಾರು ಚಾಲಕ ಮತ್ತು ನಟ ಮತ್ತೊಮ್ಮೆ ಭೇಟಿ ಆದಾಗ..
೧೨ ನಾಯಿ ಪೋಲೀಸಿನವನನ್ನು ಕರೆ ತರುವ ದೃಶ್ಯ..
(ಆ ನಟ ಉಳಿಯಲು ಕಾರಣ ನಾಯಿ-ಅವನು ಅದಕ್ಕೆ ಚಿರ ಋಣಿ ಆಗಿರಬೇಕು ಎನ್ನುವ ಪೋಲೀಸಿನವನ ದೃಶ್ಯ)
೧೩.ನಟಿ ಆಸ್ಪತ್ರೆಯಲ್ಲಿ ತನ್ ಮತ್ತು ಆ ನಟನ ಅಭಿನಯದ ರೀಲು ನೋಡಿ ಖುಷಿ ಪಡುವ ಕಣ್ಣೀರು ಹರಿಸುವ ಸನ್ನಿವೇಶ
೧೪.ನಟಿ ಸ್ವತಹ ತಾನೇ ಕಾರು ಚಾಲಿಸಿಕೊಂಡು ನಟನನು ರಕ್ಷಿಸಲು ಬರುವ ದೃಶ್ಯ
೧೫.ಇಬ್ಬರ ಚಿತರ್ಗಳು ಒಂದೇ ದಿನ ಬಿಡುಗಡೆ ಆಗಿ- ಅವಳ ಚಿತ್ರ ಇವನು ನೋಡಿ- ಮತ್ತು ಇವನ ಚಿತ್ರ ಅವಳು ನೋಡಿ ಪರಸ್ಪರ ಮೆಚ್ಚುವುದು -ಅದನ್ನು ವ್ಯಕ್ತಪಡಿಸುವುದು
೧೬.ಅಂತ್ಯ........ ಸೂಪರ್...
ಮೊದಲಿಗೆ ಹಿಂಜರಿಕೆಯಿಂದಲೇ - ಒಲ್ಲದ ಮನಸ್ಸಿಂದಲೇ ನೋಡಿದರೂ ಆಮೇಲೆ ಈ ಚಿತ್ರವನ್ನು ಮತೊಮ್ಮೆ ಮಗದೊಮ್ಮೆ ನೋಡದಿದ್ದರೆ ಆಗ ಕೇಳಿ... ಹೇಳಿ..!!
ಈ ಚಿತ್ರ ನೋಡಿದವರಿಗೆ ಚಿತ್ರ ಜಗತ್ತಿನ ತೆರೆ ಹಿಂದೆ ಮುಂದಿನ ಹಲವು ಅಂಶಗಳು ತಿಳಿವವು- ಹಾಗೆಯೇ ನಮ್ ದೇಶವೂ ಸೇರಿಸಿ ಬೇರೆಡೆ ಎಲ್ಲ ಚಿತ್ರರಂಗಗಳಲ್ಲಿ ನಟ ನಟಿಯರಲ್ಲಿ ಆಗುವ ಪ್ರೇಮ-ವಿಚ್ಚೇದನ -ಖ್ಯಾತಿ -ಕುಕ್ಯಾತಿ-ಕಾಲೆಳೆಯುವಿಕೆ - ಗೆದ್ದವರಿಗೆ ಜೈ ಬಿದ್ದವರಿಗೆ ಬಾಯ್ ..!! ಎಲ್ಲವೂ ನೆನಪಿಗೆ ಬಂದೀತು..
ಪ್ರಶಸ್ತಿಗಳು -ಆಸ್ಕರ್ನ ೧೦ ಪ್ರಶಸ್ತಿಗಳಿಗೆ (ವಿಭಾಗದಲ್ಲಿ) ನಾಮನಿರ್ದೇಶನ ಮಾಡಲ್ಪಟ್ಟು ಅದರಲ್ಲಿ ೫ ನ್ನು ಗೆದ್ದ ಚಿತ್ರ , ಅಲ್ಲದೆ ಇನ್ನು ಹಲವು ಪ್ರಶಸ್ತಿ ಪಡೆದ ಚಿತ್ರ.
ಹಣ ಗಳಿಕೆ - $೪೪ ,೬೬೭ ,೦೯೫ (ಅಮೇರಿಕ ) (೧೭ ಜೂನ್ ೨೦೧೨ )ವರೆಗೆ (ಆಧಾರ : ಐ ಎಂ ಡೀ ಬಿ )
ಚಿತ್ರದ ಬಗ್ಗೆ :
೨೦೧೧ರಲ್ಲಿ ಬಂದ ಈ ಚಿತ್ರದ ಕಥೆ ತುಂಬಾ ಸಿಂಪಲ್ :
ಮೂಕಿ ಚಿತ್ರಗಳ ನಟನೊಬ್ಬ ತನ್ನ ಚಿತ್ರದ ಪೂರ್ವಭಾವಿ ಪ್ರದರ್ಶನ ನಂತರ ಚಿತ್ರಮಂದಿರದಿಂದ ಆಚೆ ಬಂದಾಗ ಅವನಿಗೆ ಅಸಂಖ್ಯಾತ ಅಭಿಮಾನಿಗಳು ಮತ್ತು ಪತ್ರಿಕಾ ಛಾಯಾಗ್ರಾಹಕರು ಮುತ್ತಿಕೊಳ್ಳುವರು, ಛಾಯಾಗ್ರಾಹಕರು ಆ ನಟನ ಸಂದರ್ಶನ ಮಾಡುತ್ತಾ ಕೆಲ ವಿಭಿನ್ನ ಶೈಲಿಯ ಚಿತ್ರಗಳಿಗಾಗಿ ವಿಭಿನ್ನವಾಗಿ ನಿಲ್ಲುವಂತೆ -ಪೋಜ್ ಕೊಡುವಂತೆ ವಿನಂತಿಸುವರು, ಅವರ ಕೋರಿಕೆ ಮನ್ನಿಸಿ ವಿವಿಧ ಭಂಗಿಯಲ್ಲಿ ಪೋಜ್ ಕೊಡುತ್ತಿರುವ ಆ ನಟನಿಗೆ ಒಬ್ಬ ಅಭಿಮಾನಿ ಬಂದು ಡಿಕ್ಕಿ ಹೊಡೆವಳು , ಬೆಳುವುದರಲ್ಲಿ ಸಾವರಿಸಿಕೊಂಡು ನಿಲ್ಲುವ ನಟ ಅವಳತ್ತ ನೋಡುವನು, ಹಾಗೆಯೇ ಎಲ್ಲರ ಧೃಸ್ಟಿ ಅವಳ ಮೇಲೆ ಬೀಳುವುದು.. ಅವಳಿಗೋ ಗಾಭರಿ..!! ಈ ನಟ ಎಲ್ಲಿ ತನ್ನನ್ನು ಬಯ್ಯುವನೋ? ಮುಂದೇನಾಗುವುದೋ? ಎಂದು..
ಆದರೆ ನಟ ಒಮ್ಮೆ ಅವಳತ್ತ ಗಂಭೀರವಾಗಿ ನೋಡಿ, ಆಮೇಲೆ ನಸು ನಗುತ್ತ ಅವಳನ್ನು ಹತ್ತಿರ ಕರೆದು ಮಾತಾದಿಸುವನು, ಛಾಯಾಗ್ರಾಹಕರು ಆ ಹುಡುಗಿ(ಅಪರಿಚಿತ)ಮತ್ತು ನಟನ ಜೋಡಿಯ ಚಿತ್ರವನ್ನು ಕ್ಲಿಕ್ಕಿಸುವರು , ಮಾರನೆ ದಿನ ಎಲ್ಲಾ ಮಾಧ್ಯಮಗಳಲಿ ಆ ಹುಡುಗಿಯ ಬಗ್ಗೆಯೇ ಶೀರ್ಷಿಕಾ ಬರಹ 'ಯಾರು ಆ ಹುಡುಗಿ?" ಅಂತ..! ತನ್ನ ಮನೆಯಲ್ಲಿ ಬೆಳಗಿನ ಪೇಪರ್ ನೋಡಿದ ನಟ ಮುಗುಳ್ನಗುವನು, ಕಾರಣ: ಅಲ್ಲ್ಲಿ ಶೀರ್ಷಿಕ ಬರಹ 'ಯಾರು ಆ ಅಪರಿಚಿತ ಅಜ್ಞಾತ ಹುಡುಗಿ?" ಎಂಬ ಬರಹ.. ಮತ್ತು ಅದನ್ನು ಅದಾಗಲೇ ಓದಿದ್ದ ಅವನ ಹೆಂಡತಿಯ ಮೊಗದಲ್ಲಿ ಅಸಂತೃಪ್ತಿ, ಕೋಪದ ಛಾಯೆ...!! ಈರ್ಷ್ಯಾ ಭಾವನೆ..!
ಆಮೇಲೆ ಆ ನಟ ಮತ್ತು ಆ ಅಭಿಮಾನಿ ಹತ್ತಿರವಾಗುವರು, ಅವಳಿಗೂ ಅಭಿನಯದಲ್ಲಿ ಆಸಕ್ತಿ ಬಂದು ಮತ್ತು ಅದಾಗಲೇ ಆ ನಟನ ಜೊತೆಗಿನ ಛಾಯಾ ಚಿತ್ರದ ಕಾರಣವಾಗಿ ಪ್ರಸಿದ್ಧವಾದ ಅವಳಿಗೆ ಹಲವು ಚಿತ್ರಗಳಲ್ಲಿ ಸಹಾಯಕ ಪಾತ್ರಗಳಿಗೆ ಕರೆ ಬರುವದು. ಹಲವು ಚಿತ್ರಗಳಲ್ಲಿ ಮೊದಲಿಗೆ ಅಡುಗೆಯವಳು- ಮನೆ ಕೆಲಸದವಳು , ವೃಂದ ನೃತ್ಯಗಾತಿ ಇತ್ಯಾದಿ ಗಮನಕ್ಕೆ ಬಾರದ ಪಾತ್ರಗಳಲಿ ನಟಿಸುತ್ತ ಇರುವಳು.. ಹೀಗೆ ಅವಳು ಪಾತ್ರಗಳಲ್ಲಿ ನಟಿಸುತ್ತಿರುವಾಗ ಚಿತ್ರದ ಮೊದಲಲ್ಲಿ ತೋರಿಸುವ ನಟ -ನಟಿ ತಾಂತ್ರಿಕ ವರ್ಗ ಇತ್ಯಾದಿಯಲ್ಲಿ ಅವಳ ಹೆಸರು ಕೊನೆಯಿಂದ ಮೇಲಕ್ಕೆ ಏರುತ್ತ ಹೋಗುವುದನ್ನು ನೋಡಬಹುದು..
ಹೀಗೆ ಹಂತ ಹಂತವಾಗಿ ಅವಳ ಬೆಳವಣಿಗೆ ಆಗುವಾಗಲೇ , ಆ ಪ್ರಖ್ಯಾತ ಮೂಕಿ ಚಿತ್ರದ ನಟನ ಜೀವನದಲ್ಲಿ 'ಶನಿ ಯ ವಕ್ರ ಧೃಸ್ಟಿ' ಬಿದ್ದು ಅದರ ಪರಿಣಾಮವಾಗಿ ಅವನು ನಟಿಸುತ್ತಿದ್ದ ಚಿತ್ರಗಳ ಕಂಪನಿಯಿಂದ ಅವನು ಹೊರ ಹಾಕಲ್ಪಡುವನು. ಅವನನ್ನು ಹೊರ ಹಾಕಲು ಕಾರಣ- ಅದೇ ತಾನೇ ಮೂಕಿ ಚಿತ್ರಗಳಿಂದ ಟಾಕಿ ಯುಗಕ್ಕೆ ಹೊರಳಿದ ಚಿತ್ರ ಜಗತ್ತು , ಮತ್ತು ಅವನು ಮೂಕಿ ಚಿತ್ರಗಳಿಗೆ ಮಾತ್ರ ಲಾಯಕ್ಕು ಎಂಬ ಭಾವನೆಯ ನಿರ್ಮಾಪಕರು..:((
ಇದರಿಂದ ಭಲೇ ನಿರಾಶನಾಗಿ ಅದು ತನಗೆ ಆದ ಅಪಮಾನ ಎಂದು ಭಾವಿಸುವ ಅ ಖ್ಯಾತ ಮೂಕಿ ಚಿತ್ರಗಳ ನಟ ಸ್ವತಹ ತಾನೇ ಒಂದು ಚಿತ್ರ ನಿರ್ಮಾಣ ಮಾಡುವನು , ಅದರ ಪೂರ್ವಾಭಾವಿ ಪ್ರದರ್ಶನ ನೋಡಿ ಖುಷಿ ಪಡುವನು, ಅದು ಹಿಟ್ ಆಗೇ ತೀರುವುದು ಎಂದು ಸಂಭ್ರಮಿಸುವನು..
ಈ ಮಧ್ಯೆ ಅದೊಮ್ಮೆ ಹೋಟೆಲ್ ಒಂದಕ್ಕೆ ಹೋಗಿ ತಿಂಡಿ ತಿನ್ನುವಾಗ ಇವನ ಬೆನ್ನ ಹಿಂದಿನ ಮೇಜಿನಲ್ಲಿ ಕುಳಿತ ಆ ನಟಿ (ಇವನ ಜೊತೆ ಚಿತ್ರ ತೆಗೆಸಿಕೊಂಡು ಪ್ರಸಿದ್ಧಿಗೆ ಬಂದವಳು) ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತ ಪೋಜ್ ಕೊಡುತ್ತ , ಯುವ ನಟ ನಟಿಯರಿಗೆ ಈಗ ಕಾಲ, ಹಳಬರು ಜಾಗ ಮಾಡಿಕೊಡಬೇಕು, ತೆರೆಮರೆಗೆ ಸರಿಯಬೇಕು ಎಂಬರ್ಥದ ಮಾತು ಆಡುವಳು, ಇದು ಈ ನಟನ ಕಿವಿಗೆ ಬಿದ್ದು ಶಾನೇ ಬೇಜಾರಾಗುವನು , ಆ ಮೇಜಿಂದ ಎದ್ದು ಬಂದು ಒಮ್ಮೆ ಅವಳತ್ತ ತೀಕ್ಷಣವಾಗಿ ನೋಡುವನು , ಅವಳು ಕಕ್ಕಾಬಿಕ್ಕಿಯಾಗಿ 'ಸಾರಿ' ಎನ್ನುತ ಏನೋ ಹೇಳಲು ಹೋಗಲು, ಅವಳನ್ನು ತಡೆದು ಹೊರ ಹೋಗುವನು...
ಅವಳಿಗೆ ಅವನ ಮೇಲೆ ಮತ್ತು ಅವನಿಗೆ ಅವಳ ಮೇಲೆ ಆದರ ಭಾವನೆ -ಒಂಥರಾ ಪ್ರೀತಿ (ಆ ನಟ ಅದಾಗಲೇ ವಿವಾಹಿತ.!!)..
ಇವನ ಮತ್ತು ಆ ನಟಿಯ ಚಿತ್ರ ಒಟ್ಟಿಗೆ ಬಿಡುಗಡೆ ಆಗುವದು (ಬಿಡುಗಡೆ ಆಗುವವರೆಗೂ ಇಬ್ಬರಿಗೂ ಆ ಬಗ್ಗೆ ಸುಳಿವಿಲ್ಲ..:() ) .. ಅವಳ ಚಿತ್ರಕ್ಕೆ ಜನ ಮುಗಿ ಬಿದ್ದು ಹೊರಡುವರು ನೂಕಾಟ ತಳ್ಳಾಟ , ಇವನ ಚಿತ್ರಕ್ಕೆ ಒಬ್ಬರೂ ಇಲ್ಲ..:(( ತಾ ಒಬ್ಬನೇ ತನ್ ಕಾರು ಚಾಲಕನ ಜೊತೆ ನೋಡುವನು..:((... ಕೊನೆಗೆ ಆ ನಟಿಯ ಚಿತ್ರ ಪ್ರದರ್ಶನವಾಗುತ್ತಿದ್ದ ಸಿನೆಮ ಹಾಲಿಗೆ ಹೋಗಿ ಜನರ ಮಧ್ಯ ಕುಳಿತು ನೋಡುವನು; ಈ ಪ್ರಖ್ಯಾತ ನಟ ತಮ್ಮ ಮಧ್ಯೆ ಕುಳಿತಿದ್ದರೂ ಅವನ ಮೇಲೆ ಯಾರ ಗಮನವೂ ಇಲ್ಲ..! ಎಲ್ಲರ ಗಮನ ಆ ನಟಿಯ ಅಭಿನಯದ ಮೇಲೆ ತೆರೆ ಮೇಲೆ..!
ಇವನೂ ಆ ನಟಿಯ ನಟನೆಗೆ ಮೆಚ್ಚುವನು,ಚಪ್ಪಾಳೆ ತಟ್ಟುವನು...(ಗುಣಕ್ಕೆ ಮತ್ಸರವೇ..!)..
ಆಮೇಲೆ ಇವನು ಕುಡಿತಕ್ಕೆ ದಾಸನಾಗಿ ಹಗಲು ರಾತ್ರಿ ಕುಡಿಯುತ್ತ ......ತ್ತ.......ತ್ತಾ .... ಸೊರಗುವನು-ಕೊರಗುವನು.. ಸಾಲ ಏರುತ್ತ ಹೋಗಿ ಕೊನೆಗೆ ತಾ ಮೆಚ್ಚಿ ಕೊಂಡು ತಂದ ತನ್ ಬೆಲೆ ಬಾಳುವ ಸೂಟು- ಬೂಟು - ಪಾತ್ರೆ ಪರಿಕರ- ಚೇರು-ಮೇಜು- ಅಲಂಕಾರಿಕ ವಸ್ತುಗಳನ್ನು ಹರಾಜಿಗಿಟ್ಟು ಮಾರುವನು :(( ಅದರಿಂದ ಬಂದ ಕಾಸನ್ನು ತಂದು ಮನೆಯಲ್ಲಿ ಸಿಗರೇಟು ಸೇದುತ್ತ ಯೋಚಿಸುತ್ತ ತನ್ ಕಾರು ಚಾಲಕನಿಗೆ ಕೇಳುವನು: ನಿನಗೆ ನಾ ಎಷ್ಟು ದಿನಗಳಿಂದ ಸಂಬಳ ಕೊಟ್ಟಿಲ್ಲ?
ಸುಮಾರು ಒಂದು ವರ್ಷದಂದ ಸಾರ್ -ಚಾಲಕನ ಉತ್ತರ..
ತಗೋ ಈ ಹಣ, ನಿನ್ನನ್ನು ಕೆಲಸದಂದ ತೆಗೆದು ಹಾಕಿರುವೆ (ಯೂ ಆರ್ ಫೈರಡ್)..! ಎನ್ನುವನು, ಆಗ ಆ ವಯಸ್ಸಾದ ಚಾಲಕ ಅದನ್ನು ತಮಾಷೆ ಎಂದೇ ಭಾವಿಸುವನು, ಅದ್ಕೆ ನಟ -ಅವನ ಮುಖ ನೋಡಲೇ ಹಿಂಜರಿಯುತ್ತ -ಅಳುಕುತಲೇ ಹೇಳುವನು , ನನ್ನ ಸ್ತಿತಿ ನಿನಗೇ ಗೊತ್ತಲ್ಲ, ನಾ ಈಗ ಬೀದಿಗೆ ಬಂದಿರುವೆ , ಇನ್ನು ನಿನ್ನನು ಕೆಲಸಕೆ ಇಟ್ಟುಕೊಂಡು ನಿನಗೇ ಸಂಬಳ ಕೊಡುವ ಸ್ತಿತಿಯಲ್ಲಿ ನಾನಿಲ್ಲ, ದಯಮಾಡಿ ಆ ನನ್ ಕಾರು ಈ ಹಣ ತೆಗೆದುಕೊಂಡು ಹೊರಡು, ಬೇರೆ ಎಲ್ಲಿಯಾದರೂ ಕೆಲಸ ಮಾಡು ಬದುಕಿಕೋ...ಎನ್ನುವನು..
ಆದರೆ ಆ ಚಾಲಕ ಮಾತ್ರ ಇವನನ್ನು ಬಿಡಲೊಲ್ಲ, ಅಸ್ತು ದಿನ ಅವನ ಜೊತೆ ಕೆಲಸ ಮಾಡಿ ಪ್ರಸಿದ್ಧಿಯ ದಿನಗಳು ಮತ್ತು ನಂತರದ ಈ ದುಖದ ದಿನಗಳನ್ನು ಒಟ್ಟಿನಲ್ಲಿ ಆ ನಟನ ಜೀವನದ ಎಲ್ಲಾ ಬೆಳವಣಿಗೆಯ ಹಂತಗಳನ್ನು ಕಂಡಿದ್ದ ಸಾಕ್ಷಿ ಆಗಿದ್ದ ತಾ ಕೆಲಸ ಬಿಡೋದೇ? ಅವರನ್ನ ಒಬ್ಬಂಟಿಯಾಗಿ ಬಿಟ್ಟು ಹೋಗೋದೇ? (ಅದ್ಕೆ ಮೊದಲೇ ಆ ನಟನ ಹೆಂಡತಿ ಅವನಿಗೆ ಡೈವೋರ್ಸ್ ಕೊಟ್ಟು ಹೋಗಿರುವಳು) ಅಂತ ಯೋಚಿಸುತ್ತ ಹೋಗಲೋಲ್ಲ. ಆದರೆ ಅ ನಟ ಅವನನ್ನು ಬಲವಂತವಾಗಿ ಹೊರ ಹಾಕಿ ಬಾಗಿಲು ಮುಚ್ಚುವನು..
ಆದರೆ ಆ ಚಾಲಕ ಕೆಳಗಡೆ ಕಾರಿನ ಬಳಿ ನಿಂತು ಈ ನಟನ ಮನೆಯತ್ತ ಕಿಟಕಿಯತ್ತಲೇ ನೋಡುತ್ತಾ ನಿಲ್ಲುವನು. ಮತ್ತೆ ಮರಳಿ ಒಳಗೆ ಕರೆಯಬಹುದು ಅಂತ.. ಆದರೆ ಈ ನಟ ಕರೆಯದೆ ಇರಲು ಬೆಳಗ್ಗೆ ಆ ಮನೆಯಿಂದ ಹೊರಡುವನು...
ಈ ನಟನ ಜೊತೆ ಅವನು ಸಾಕಿದ ಒಂದು ನಾಯಿ ಇರುವುದು -ಆ ನಾಯಿ ವಿಶ್ವಾಸತೆಗೆ -ಪ್ರೀತಿಗೆ ದ್ಯೋತ್ಯಕವಾಗಿ ಸದಾ ಅವನೊಡನೆ ಇರುವದು , ಈ ನಟ ಹಗಲು ರಾತ್ರಿ ಕುಡಿಯುತ್ತ ಕುಡಿಯುತ್ತ ತನ್ ಪರಿಸ್ತಿತಿಗೆ ತಾನೇ ಮರುಗುತ್ತ- ಸಿಟ್ಟು ಪಡುತ್ತ ಆ ಕೋಪವನ್ನು ತನ್ ಮೇಲೆಯೇ ತೀರ್ಸಿಕೊಳ್ಳುವನು :((
ತನನ್ ಹಳೆಯ ಚಿತ್ರಗಳನ್ನು ತಾ ಒಬ್ಬನೇ ತನ್ ನಾಯಿ ಜೊತೆ ತನ್ ಮನೆಯಲ್ಲಿ ತೆರೆ ಮೇಲೆ ನೋಡುತ್ತಾ ಹಿಂದಿನ ಗತ ವೈಭವ ನೆನೆದು , ಅಳು ಉಕ್ಕಿ ಸಿಟ್ಟಿನಿಂದ ಆ ರೀಲಿನ ಬಾಕ್ಸ್ ಕಿತ್ತು ಆ ರೂಮಿನಲ್ಲೇ ಗುಡ್ಡೆ ಹಾಕಿ ಬೆಂಕಿ ಹಚ್ಚುವನು..
ಆದರೆ ಆ ಬೆಂಕಿ ಎಲ್ಲೆಡೆ ವ್ಯಾಪಿಸಲು ಮೂಲೆಯಲ್ಲಿ ಮೇಜಿನ ಮೇಲೆ ಇಕ್ಕಿದ್ದ ಒಂದು ರೀಲು ಬಾಕ್ಸನ್ನು ಎದೆಗೆ ಒತ್ತಿಕೊಂಡು ಒಂದು ಮೂಲೆಯಲ್ಲಿ ಕೂರುವನು..:((
ಆಗ ಅವನ ನಾಯಿ ಅಪಾಯವನ್ನು ಶಂಕಿಸಿ ಓಡುತ್ತ ಹೊರ ಹೋಗುವುದು -ಸಹಾಯಕ್ಕೆ ಯಾರನಾದರೂ ಕರೆಯಲು, ಅಲ್ಲೊಬ್ಬ ಪೋಲೀಸು ಕಂಡು ಅವನ ಪ್ಯಾಂಟು ಹಿಡಿದು ಎಳೆವುದು, ಅವನಿಗೆ ಅದರ ಭಾವನೆ ಹೇಗೆ ಅರ್ಥ ಆಗಬೇಕು? ಶ್ . ಶ್ ಅಂತ ಗದರಿದರೂ ಅದು ಅದರ ಕಾರ್ಯ ಬಿಡಲೊಲದು.. ಆಗ ಒಬ್ಬ ಮದ್ಯ ವಯಸ್ಕ ಹೆಣ್ಣು ಮಗಳು ಆ ನಾಯಿ ಹಾಗೆ ಮಾಡಲು ಏನೋ ಕಾರಣ ಇರಬಹದು ಅದರ ಹಿಂದೆ ಹೋಗಿ ಅನ್ನುವಳು, ಆ ನಾಯಿಯನ್ನು ಹಿಂಬಾಲಿಸಿ ಓಡುತ್ತ ಹೋಗುವ ಪೋಲೀಸಿಗೆ ಒಂದು ಮನೆಗೆ ಬೆಂಕಿ ಬಿದ್ದು ಧಟ್ಟ ಹೊಗೆ ವ್ಯಾಪಿಸಿದ್ದು ಕಾಣಿಸುವದು, ಓಡುತ್ತ ಒಳ ಹೋಗಿ ಮೂಲೆಯಲ್ಲಿ ಮೂರ್ಚಿತನಾಗಿ ಬಿದ್ದಿರುವ ನಟನನ್ನು ಹೊರಗೆ ಕರೆ ತಂದು ಆಸ್ಪತ್ರೆಗೆ ಸೇರಿಸುವರು ...
ಆಮೇಲೆ ಆಸ್ಪತ್ರೆಯಲ್ಲಿ ಈ ನಟ ಸೇರಿಸಲ್ಪಟ್ಟಿದ್ದು ಆ ಘಟನೆ ಬಗ್ಗೆ ಮಾರನೆ ದಿನ ಪತ್ರಿಕೆಯ ಮುಖ ಪುಟದಲ್ಲಿ ಸುದ್ಧಿ ಓದುವ ಆ ನಟಿ (ಇವನಿಂದ ಪ್ರಸಿದ್ದ್ಧಿಗೆ ಬಂದವಳು) ತಕ್ಷಣವೇ ತನ್ ನಟನೆಯನ್ನು ಬಿಟ್ಟು (ಆಗ ಅವು ಮೇಕಪ್ ಹಾಕಿಕೊಂಡು ಒಂದು ದೃಶ್ಯಕ್ಕೆ ಸಿದ್ಧವಾಗುತ್ತಿರುವಳು ) ಆಸ್ಪತ್ರೆಗೆ ಓಡಿ ಬರುವಳು ... ವೈದ್ಯರನ್ನು ಕೇಳಿದಾಗ ಜೀವಕ್ಕೆ ಅಪಾಯ ಇಲ್ಲ, ಸ್ವಲ್ಪ ದಿನ ವಿಶ್ರಾಂತಿ ಅಗತ್ಯ ಎನ್ನುವರು, ಹಾಗೆಯೇ ಅವಳಿಗೆ ಹೇಳುವರು- ನಾವ್ ಅವನ ಕೈನಿಂದ ಆ ರೀಲ್ ಬಾಕ್ಸ್ ಬಿಡಿಸಲು ಭಲೇ ಕಷ್ಟ ಪಟ್ಟೆವು, ಅದ್ರಲ್ಲಿ ಏನಿತ್ತೋ?
ಅ ರೀಲ್ ಬಾಕ್ಸ್ ತೆಗೆದು ಅದರಿಂದ ರೀಲು ತೆಗೆದು ನೋಡಲು ಅದು ತಾ ಮತ್ತು ಆ ನಟ ಹಿಂದೊಮ್ಮೆ ಒಟ್ಟಾಗಿ ನಟಿಸಿದ ಚಿತ್ರದ ರೀಲು ಅಂತ ಗೊತ್ತಾಗಿ /ಆ ನಟನಿಗೆ ತನ್ ಮೇಲೆ ಇರುವ ಅನುರಾಗ ಅರ್ಥ ಆಗಿ , ವೈದ್ಯರಿಗೆ ಕಾಡಿ ಬೇಡಿ ಆ ನಟನನ್ನು ತನ್ ಮನೆಗೆ ಶಿಫ್ಟ್ ಮಾಡಿಸಿ ಚಿಕಿತ್ಸೆ ಕೊಡಿಸುವಳು...
ಎಚ್ಚರವಾಗಿ ಕಣ್ಣು ತೆರೆದಾಗ ಕಣ್ಣೆದುರಿಗೆ ಈ ನಟಿ ಕಂಡು ಆ ನಟನಿಗೆ ಖುಷಿ ಅಳು ಒಟ್ಟಿಗೆ ಬರುವದು , ಅವಳು ಅವನನ್ನು ತಬ್ಬಿಕೊಂಡು ಸಂತೈಸುವಳು..
ಆಮೇಲೆ ಆ ನಟಿ ತನ್ ನಿರ್ಮಾಪಕರಿಗೆ ಕರಾರು ಹಾಕಿ -ಒತ್ತಾಯಿಸಿ ತನ್ನೊಡನೆ ಚಿತ್ರವೊಂದಕ್ಕೆ ಅವನನ್ನ ಮುಖ್ಯ ಪಾತ್ರ ಒಂದಕ್ಕೆ ತೆಗೆದುಕೊಳ್ಳುವ ಹಾಗೆ ಮಾಡುವಳು.. ಅವನ ಪಾತ್ರದ ಬಗೆಗಿನ ವಿವರವನ್ನು ತನ್ ಡ್ರೈವರ್ ಕೈಗೆ ಕೊಟ್ಟು ತನ್ ಮನೆಯಲ್ಲಿ ಇರುವ ಅವನಿಗೆ ತಲುಪಿಸಲು ಹೇಳುವಳು...
ಆ ನಟಿಯ ಕರು ಚಾಲಕ ಅವಳ ಮನೆಗೆ ಬಂದು ನಟನ ಕೈಗೆ ಆ ಪಾತ್ರದ ಬಗೆಗಿನ ಸಂಬಾಷಣೆಯ ಪುಟಗಳನ್ನು ಕೊಡುವನು, ಆ ಚಾಲಕನನ್ನು ನೋಡಿ ನಟನಿಗೆ ಸಂತೋಷ ಉಕ್ಕಿ ಬರುವುದು , ಕಾರಣ ಆ ಚಾಲಕ ಬೇರಾರು ಆಗಿರದೆ ಹಿಂದೊಮ್ಮೆ ತನ್ ಹತ್ತಿರವೇ ಕೆಲಸ ಮಾಡಿದವನು..ಅವನ ಯೋಗಕ್ಷೇಮ ವಿಚಾರಿಸುವನು.....ಆ ಕಾರಿನ ಚಾಲಕ, ಮಾತು ಸ್ವತಹ ನಟಿಯೇ ಬೇಡಿಕೊಂಡರೂ ನಟಿಸಲು ಒಪ್ಪೋಲ್ಲ, ಅದೊಮ್ಮೆ ನಟಿ ತನ್ ಚಿತ್ರ ಒಂದರ ಚಿತ್ರೀಕರಣಕೆ ಹೋಗಿದ್ದಾಗ ಯಾವನು ಅವಳ ಮನೆಯ ಒಂದು ಬೇಗ ಹಾಕಿದ ಕೊಠಡಿ ಕಂಡು ಅಲ್ಲೇನಿದೆ ಅಂತ ಒಳಹೆ ಹೋಗಿ ನೋಡಿ ಅಚ್ಚರಿಗೊಳ್ಳುವನು.....!!
ಅವನ ಅಚ್ಚರಿಗೆ ಕಾರಣ-
ಅವನ ಹರಾಜಿನಲ್ಲಿ ಮಾರಿದ ಎಲ್ಲವೂ ಈ ನಟಿಯ ಮನೆಯಲ್ಲಿ ಜತನವಾಗಿ ಕಾಪಾಡಲ್ಪಟ್ಟಿವೆ ... ಆಗ ಅವನಿಗೆ ಪಿಚ್ ಎನ್ನಿಸುವುದು(ಅವನ ಊಹೆ- ತನಗೆ ಸಹಾಯ ಮಾಡಲೆಂದೇ ಆ ನಟಿ ತನನ್ ಎಲ್ಲ ವಸ್ತುಗಳನ್ನು ಖರೀದಿಸಿರುವಳು- ತನಗೆ ಕೆಲಸ ಸಿಗಲೆಂದೇ ಅವರಿವರ ಹತ್ತಿರ ಕೈ ಕಾಲು ಬಿದ್ದು ತನಗೆ ಒಂದು ನಟನೆಯ ಅವಕಾಶ ಕೊಡಿಸುತ್ತಿರುವಳು- ಛೆ ಛೆ..! ತನ್ನಂತ ಸ್ವಾಭಿಮಾನಿಗೆ ಇಂತ ಗತಿಯೇ?) , ಆಗಲೇ ಅವಳ ಮನೆಯಿಂದ ಹೊರಬಿದ್ದು ತನ್ ಸುಟ್ಟ ಮನೆಗೆ ಹೋಗುವನು ಅಲ್ಲೊಂದೆಡೆ ಕುಳಿತು ಯೋಚಿಸುವನು -ಹೇಗೆಲ್ಲ ಏನೆಲ್ಲಾ ಯೋಚಿಸಿದರೂ ಅವನಿಗೆ ಬದುಕಲು ಆಶೆ ಇರದೇ ಬರದೆ ಬದುಕಿರುವುದು ವ್ಯರ್ಥ ಎಂಬ ಭಾವನೆ ಬಂದು ಒಂದು ಕೆಟ್ಟ ತೀರ್ಮಾನಕ್ಕೆ ಬರುವನು....??????
ಮತ್ತು ಅವನ ತೀರ್ಮಾನ ಅರಿತಂತೆ ಅವನ ನಾಯಿ ಕಿರುಚಲು ಮತ್ತು ಅವನನ್ನು ತಡೆಯಲು ಯತ್ನಿಸುವುದು .......ಆದರೆ ಅವನು ತನ್ನ ತೀರ್ಮಾನ ಮರಳಿ ಪರಿಶೀಲಿಸಲು ಒಲ್ಲ....
ಅವನ ತೀರ್ಮಾನ: ಗುಂಡು ಹೊಡೆದುಕೊಂಡು ಸಾಯುವುದು..:(((
ಪೆಟ್ಟಿಗೆಯಲ್ಲಿದ್ದ ಪಿಸ್ತೂಲ್ ತೆಗೆದು ಗುಂಡು ತುಂಬಿಸಿ ಆ ನಾಯಿ ಎಷ್ಟು ಜಗ್ಗಿದರೂ ಕಿರುಚಿದರೂ ಅದನ್ನು ತಳ್ಳಿ, ಪಿಸ್ತೂಲ್ ಗಂಟಲಿಗೆ ಹಿಡಿದು.............
ಡಮಾರ್ ...!
:((
:(((
ಉಹೂ , ಇನ್ನು ಗುಂಡು ಸಿಡಿದಿಲ್ಲ ಬಿಡಿ ....::())))
ಇತ್ತ ನಟಿ ಮರಳಿ ಮನೆಗೆ ಬಂದು ನಟ ಕಾಣದೆ ಸಂಶಯ ಬಂದು ಕೆಲ್ಸದವರನ್ ಕೇಳಿದರೆ ಅವಳ ಊಹೆಯಂತೆ ಅವನಿಗೆ ಎಲ್ಲವೂ ಗೊತ್ತಾಗಿ ತನ್ನ ಮನೆಗೆ ಹೋಗಿರಬಹುದು ಅಂತ ಅರಿತು ತನ್ನ ಡ್ರೈವರನಿಗೆ ಕಾರು ತೆಗೆಯಲು ಮತ್ತು ನಟನ ಮನೆ ಕಡೆ ಗಾಡಿ ಓಡಿಸಲು ಹೇಳುವಳು ,ಆದರೆ ಆ ಚಾಲಕ ಬರುವುದ್ ಕೊಂಚ ತಡವಾಗಿ ಇವಳೇ ಕಾರು ಓಡಿಸುವಳು , ಆದಸ್ತು ಬೇಗ ನಟನ ಮನೆ ತಲುಪುವ ಅವಸರದಲ್ಲಿ ಕೆಲವೆಡೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗುವಳು... ಹೆಂಗೋ ಕಷ್ಟ ಪಟ್ಟು ಆ ನಟನ ಮನೆಗೆ ಬಂದು ತನ್ನ ಕಾರನ್ನು ಅಲ್ಲಿನ ಮರ ಒಂದಕ್ಕೆ ಗುದ್ದಿ ಕಾರಿಂದ ಹಾರಿ ಓಡಿ ಬರುವಳು...
ಇತ್ತ ಅ ನಟ ಇನ್ನೇನು ಟ್ರಿಗ್ಗರ್ ಒತ್ತಬೇಕು , ಅಸ್ಟರಲ್ಲಿ ಬಾಗಿಲು ಜೋರಾಗಿ ತೆರೆದುಕೊಂಡು- ಏದುಸಿರು ಬಿಡುತ್ತಿರುವ ನಟಿಯನ್ನು ಕಂಡು ಮೇಲಕ್ಕೆ ಹೋಗೋ ಆಶೆ ಬಿಟ್ಟು ...!! ಅವಳನ್ನು ಅಚ್ಚರಿಯಿಂದ ಅನುರಾಗದಿಂದ ನೋಡುವನು.. ಇಬ್ಬರ ಮನ ಸಂಧಿಸಿ ಹತ್ತಿರವಾಗಿ ಒಬ್ಬರನ್ನೊಬ್ಬರು ನೇವರಿಸುವರು... ಆಗಲೇ ಓಡಿ ಬಂದ ಚಾಲಕನಿಗೆ ಮತ್ತು , ಆ ನಟನ ನಾಯಿಗೆ ಇವರಿಬ್ಬರು ಒಂದಾಗಿದ್ದು ಕಂಡು ಸಂತಸ ಆಗುವುದು ...
ಅಲ್ಲಿಗೆ ಎಲ್ಲ,
****************************************ಶುಭಂ************************************
ಅಯ್ ಎಂ ಡಿ ಬಿ ವೀಡಿಯೊ ಲಿಂಕ್ :www.imdb.com/video/imdb/vi3105725977/
ಅಯ್ ಎಂ ಡಿ ಬಿ ಯ ಈ ಚಿತ್ರ ಕುರಿತ ಮಾಹಿತಿ ಲಿಂಕ್ :www.imdb.com/title/tt1655442/
ಚಿತ್ರ ಮೂಲಗಳು :movies.nytimes.com/2011/11/25/movies/the-artist-by-michel-hazanavicius-review.html
www.weinsteinco.com
www.sheknows.com
www.criticsatlarge.ca
Comments
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ ನಂಜುಂಡ ಅವ್ರೇ
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by makara
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ ಶ್ರೀಧರ್ ಜೀ
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ ಶ್ರೀಧರ್ ಜೀ by venkatb83
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ ಶ್ರೀಧರ್ ಜೀ
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by partha1059
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ : @ ಗುರುಗಳೇ
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by sathishnasa
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ : @ಸತೀಶ್ ಅವ್ರೇ
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by Chikku123
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -@ಚಿಕ್ಕು
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು @ರಾಮ ಮೋಹನ ಅವ್ರೆ
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ಹಿರಿಯರೇ
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ @ಹಿರಿಯರೇ by venkatb83
ದಿ ಆರ್ಟಿಸ್ಟ್ ಕಪ್ಪು ಬಿಳುಪು ಚಿತ್ರ
ಸಪ್ತಗಿರಿ ಅವರೆ ,
ಹಬ್ಬಕ್ಕೆ ಮನಗೆ ಬಂದ ಮಗನ ಹತ್ತಿರ ಇದ್ದ ಲ್ಯಾಪ್ ಟಾಪ್ನಲ್ಲಿ ಈ ಚಿತ್ರ ಇತ್ತು, ಒಮ್ಮೆಲೆ ನನಗಾದ ಸಂತೋಷ ಅಸ್ಟಿಷ್ಟಲ್ಲಾ,ಕೂಡಲೆ ನನ್ನ ಲ್ಯಾಪ್ ಟಾಪ್ಗೆ ಹಾಕಿಸಿ ಪೂರ್ಣ ಚಿತ್ರ ನೋಡಿದೆ. ನೀವು ಬರೆದಿರುವುದು ಅಕ್ಷರಷಃ ನಿಜ.ಬಹಳ ಚನ್ನಾಗಿದೆ ಚಿತ್ರ. ಮತ್ತೊಮ್ಮೆ ನೋಡುತ್ತೇನೆ.
ವಂದನೆಗಳು.
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by ksraghavendranavada
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -@ನಾವಡ ಅವ್ರೆ-
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ???
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -ನೋಡಿದ್ದೀರಾ??? by H A Patil
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಚಿತ್ರ @ಹಿರಿಯರಾದ ಪಾಟೀಲರೆ
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಚಿತ್ರ @ಹಿರಿಯರಾದ ಪಾಟೀಲರೆ by venkatb83
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಚಿತ್ರ @ಹಿರಿಯರಾದ ಪಾಟೀಲರೆ
In reply to ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಚಿತ್ರ @ಹಿರಿಯರಾದ ಪಾಟೀಲರೆ by H A Patil
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಚಿತ್ರ @ಹಿರಿಯರಾದ ಪಾಟೀಲರೆ 2
ಉ: ದಿ ಆರ್ಟಿಸ್ಟ್ -೨೦೧೧ ಕಪ್ಪು-ಬಿಳುಪು ಮೂಕಿ ಚಿತ್ರ -@ ಗಣೇಶ್ ಅಣ್ಣ-
@ ಸ್ವರ ಕಾಮತ್ ಅವ್ರೆ
ಸ್ವರ ಕಾಮತ್ ಅವ್ರೆ ನಿಮಗೆ ಚಿತ್ರ ಖುಷಿ ಕೊಟ್ಟಿತು ಮತ್ತು ಎ ಬರಹವು ಅದಕ್ಕೆ ಸಾಥ್ ನೀಡಿತು ಅಂದಿದ್ದು ಕೇಳಿ ಸಂತಸ ಆಯ್ತು.. ಸಂಪದ ನಿರ್ವಹಣೆ ಬದಲಾವಣೆ ಕಾರಣ ಕೊಂಚ ಗಲಿಬಿಲಿಯಲ್ಲಿ ಪ್ರತಿಕ್ರಿಯೆ ಓದು ತಡ ಆಗುತ್ತಿದೆ.. ನಾ ಇನ್ನಸ್ಟು ಚಿತ್ರಗಳ ಬಗ್ಗೆ ಬರೆಯಬೇಕಿದೆ.. ಮುಂದೊಮ್ಮೆ ಬರೆಯುವೆ..
ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
ಶುಭ ಸಂಜೆ
\|