ಅಪರಿಚಿತರು!

ಅಪರಿಚಿತರು!

ಕವನ

ಎದುರಿಗೆ ಸಿಕ್ಕರೂ

ಕಣ್ಣುಗಳು ನಕ್ಕರೂ

ತುಟಿಗಳು ಬಿರಿದರೂ

ನಾವು ತೆರೆದುಕೊಳ್ಳುವುದಿಲ್ಲ

ಒಳಗೆ ಕರೆದುಕೊಳ್ಳುವುದಿಲ್ಲ .

 

ಹೃದಯ ಬಿಚ್ಚಿ

ನೋವು ನಲಿವು ಹಂಚಿ

ಹಾಡುವುದಿಲ್ಲ

ಅದಕೇ ನಾವು ಅಪರಿಚಿತರು

ಸದಾ

 ಜೊತೆಯಲಿದ್ದರೂ!

--------------------