ಪ್ರತಿನಿಧಿ
ಕವನ
ಸಾಕ್ಷಿಯಾಗಿದೆ ಕಲ್ಲುಗಂಬ
ಅರಸನ ಕಲಾವಂತಿಕೆಗೆ
ಸಂಸ್ಕೃತಿಯ ಶ್ರೀಮಂತಿಕೆಯ
ಪ್ರತೀಕವಾಗಿ
ಕಾಣದ ರಮ್ಯತೆಯ ಮಾಧುರ್ಯವನ್ನು
ಕಾಣುವಂತೆ ಕಂಡರಿಸಿದ
ಕಲಾಪ್ರೌಢಿಮೆಗೆ
ಉರಿಬಿಸಿಲಲ್ಲಿ ಕಲ್ಲು ಹೊತ್ತು ನೊಂದ
ಜೀವಗಳ ಬೆವರಿಗೆ ಬೆಲೆಯಾಗಿ
ಕಾಲನದಿಯ ಓಘಕ್ಕೆ ಸಿಲುಕಿದರೂ
ಸ್ಥಿರವಾಗಿ ನಿಂತಿದೆ-ಜೀವಂತವಾಗಿ
ಈ ತಲೆಮಾರಿಗೆ ಪಳಮೆಗಳ
ನೆನಪನ್ನು ತರಿಸಿ
ತುಂಬಿಕೋ ಮೊಗೆಮೊಗೆದು
ಈ ಬತ್ತದ ಸಲಿಲವ
ನಿನ್ನ ಜಿಜ್ನಾಸು ಮನಕ್ಕೆ
ತುಂಬಿಸು ನಿನ್ನ ಕಣ್ಣ ಬಿಂಬಕ್ಕೆ
ಕಿರುಗಣ್ಣು ತೆರೆದು
ನೆರಳ ತೆರೆಯ ಮೇಲೆ ದಾಖಲಿಸಲು
ಎಲ್ಲರಿಗೂ ಬೆನ್ನು ತಿರುಗಿಸಿ
ಏಕಾಗ್ರ ಚಿತ್ತದಲಿ
ಈ ನಿಧಿಯ ಪ್ರತಿನಿಧಿಯ
ತನ್ನದಾಗಿಸಿಕೊಳ್ಳಲು
Comments
ಉ: ಪ್ರತಿನಿಧಿ
In reply to ಉ: ಪ್ರತಿನಿಧಿ by GOPALAKRISHNA …
ಉ: ಪ್ರತಿನಿಧಿ
ಉ: ಪ್ರತಿನಿಧಿ
In reply to ಉ: ಪ್ರತಿನಿಧಿ by S.NAGARAJ
ಉ: ಪ್ರತಿನಿಧಿ