ಸುಬ್ಬನ ಕನ್ಯಾ ಪರೀಕ್ಷೆ...!!

ಸುಬ್ಬನ ಕನ್ಯಾ ಪರೀಕ್ಷೆ...!!

 

 

 ಹೆಣ್ಣೊಂದ ನೋಡ ಹೊರಟ
ನಮ್  ಸೂಪರ್ ಸುಬ್ಬ
ಆ ದ್ರುಶ್ಯವೋ ನೋಡೋರ್ ಕಣ್ಣಿಗ್  ಹಬ್ಬ..!
ನೋಡೋಕೆ ಮುಂಚೆ ಹೆಣ್ಣು
ಅದುರಿತು ಎಡ ಗಣ್ಣು!!
 
ಮುಂದಿತ್ತು ತಿಂಡಿ ತೀರ್ಥ
ಅದರತ್ತ ಎಲ್ರ ಚಿತ್ತ..!!
ಸುಬ್ಬನ ಕಣ್ಣು
ಹುಡುಕುತಿದೆ ಹೆಣ್ಣು
'ಮುತ್ತು' ಬಾಮ್ಮ -ಭಾಮಳ  ಕರೆ 
ಆಹಾ.!! ಮುತ್ತು -ಹೆಸರೇ ಚೆನ್ನ
ಇನ್ನು ಅವಳೇ ನನ್ ಚಿನ್ನ
ಬಂದಳು ಮುತ್ತು
ನಡೆಯಲ್ಲಿತ್ತು ಗತ್ತು ಗೈರತ್ತು
 
ತಂದಿಟ್ಟಳು  ಮುಂದೆ ಉಪ್ಪಿಟ್ಟು
ಅದ್ನೋಡಿ ಅವನ ಮುಖ ಕಪ್ಪಿಟ್ಟು
ಕಣ್ಣೆತ್ತಿ ಅವಳೊಮ್ಮೆ  ನೋಡಿ
ಮನದಲಿ ದಿಗಿಲು ಮೂಡಿ 
ಅಯ್ಯೋ..! ಇವಳೇ  ಮುತ್ತು 
ನನಗೆ  ಬಂತೇ   ಆಪತ್ತು
ಹೆಸರು ಅಲ್ಲ  ಬರಿ   ಮುತ್ತು
ಪೂರ್ತ  ಹೆಸರು  ಭಾರಿ(ರೀ) ಮುತ್ತು !!
 
ಅವ್ಳಿಗ್ ಹೆದರಿ -ಬೆದರಿ -ಹೌಹ್ಹಾರಿ
ನಮ್ಸುಬ್ಬ ಕಿತ್ತ ಪೇರಿ
ಕಂಪೌಂಡು  ಹಾರಿ
 ಹಿಡಿದ ತನ್ ಮನೆ ದಾರಿ..!!
==================
>>> ಭಾರಿ ಮುತ್ತು  ಮತ್ತು
 ......... ಅಣ್ಣ   ಅವರ ಕ್ಚಮೆ  ಕೋರಿ...:()))
 
ಚಿತ್ರ ಮೂಲ:
terrymarotta.files.wordpress.com/2011/06/running-scared.png
 
 

 

Rating
No votes yet

Comments