ರೈಲು ಬಿಡೋದು
ಸೋಲೊಪ್ಪದ ಪಕ್ಕದ ಮನೆ ಹೆಂಗಸು ಏನು ಹೇಳಿದರು ಅದಕ್ಕೊಂದು ಪ್ರತಿಯಾಗಿ ಹೇಳುತ್ತಿದ್ದಳು. ಇದನ್ನು ಕಂಡ ಗುಂಡನ ಹೆಂಡತಿ " ನೆಮ್ಮೆಜಮಾನರಿಗೆ ಡ್ರೈವಿಂಗ್ ಅಂದರೆ ಮಹಾ ಪ್ರಾಣ. ಒಂದು ಸಾರಿ ನೋಡಿದರೆ ಸಾಕು ಮಾರನೆ ಕ್ಷಣ ಅದನ್ನು ಡ್ರೈವ್ ಮಾಡಿಯೇ ಸಿದ್ದ." ಎಂದು ಕೊಚ್ಚಿಕೊಂಡಳು. ಇದನ್ನು ಕೇಳಿ ಸುಮ್ಮನಿರಲಾದಿತೆ? ಆ ಪಕ್ಕದ ಹೆಂಗಸು ಒಂದು ಸವಾಲು ಎಸೆದಳು " ರಿಕ್ಷಾ, ಕಾರು, ಸ್ಕೂಟರ್ ಎಲ್ಲಾನು ಓಡಿಸಬಹುದು ಅದೇನು ದೊಡ್ದವಿಚಾರ ಅಲ್ಲ, ಆದರೆ......" ಎಂದು ಹೇಳುವಷ್ಟರಲ್ಲಿ ಗುಂಡನ ಹೆಂಡತಿ " ಅಯ್ಯೋ ನೆಮ್ಮೆಜಮಾನರು ಹೆಲಿಕಾಪ್ತೆರ್ ಕೊಡಾ ಒಡೋಸೋದು ಹೇಗೆ ಅಂತ ತಿಳಿಕೊಂಡು ಅದನ್ನು ಓಡಿಸಿದ್ದಾರೆ ಗೊತ್ತಾ? " ಎಂದು ಬಡಬಡಿಸಿದಳು. ಪಕ್ಕದ ಮನೆ ಹೆಂಗಸಿಗೆ ರೇಗಿ ಹೋಯಿತು " ವಿಮಾನ ಓಡಿಸಿದಾರಾ? " ಎಂದಳು. " ಇದಾದ ಮೇಲೆ ವಿಮಾನನೆ ಅಂತ ಹೇಳ್ತಾ ಇದ್ರೂ." ಎಂದು ಗುಂಡನ ಹೆಂಡತಿ ಬೀಗಿದಳು ಸೋಲೊಪ್ಪದ ಪಕ್ಕದ ಮನೆಯಾಕೆ " ಇನ್ನು ರೈಲು ಯಾವಾಗಲೋ?' ಎಂದು ಕುಕ್ಕಿದಳು. ಇದನ್ನು ಕೇಳಿದ ಗುಂಡನ ಹೆಂಡತಿ ನಗುತ್ತ " ಯಾವಾಗೇನು? ನಮ್ಮೆಜೆಮಾನರು ಬಗ್ಗೆ ಈತನಕ ರೈಲನ್ನೇ ಬಿಟ್ಟಿದ್ದು " ಎಂದಳು. ಪಕ್ಕದಮನೆಯಾಕೆ "ಹೂಂ " ಎಂದು ಕೆಂಡ ಕಾರಿದಳು.
Comments
ಉ: ರೈಲು ಬಿಡೋದು
In reply to ಉ: ರೈಲು ಬಿಡೋದು by makara
ಉ: ರೈಲು ಬಿಡೋದು
ಉ: ರೈಲು ಬಿಡೋದು
In reply to ಉ: ರೈಲು ಬಿಡೋದು by ksraghavendranavada
ಉ: ರೈಲು ಬಿಡೋದು
ಉ: ರೈಲು ಬಿಡೋದು
In reply to ಉ: ರೈಲು ಬಿಡೋದು by Chikku123
ಉ: ರೈಲು ಬಿಡೋದು