ಕಡಲ ಕಿನಾರೆಯಲ್ಲಿ

ಕಡಲ ಕಿನಾರೆಯಲ್ಲಿ

 

 

ಕಡಲ ಕಿನಾರೆಯಲ್ಲಿ

ಅಲೆಅಲೆಯಾಗಿ  ಧಾವಿಸಿದವು  ನನ್ನೆಲ್ಲಾ

ಸವಿನೆನೆಪುಗಳು  ನಾ  ಕಡಲ  ತೀರದಿ

ಮೂಕನಾಗಿ  ನಿಂತಾಗ|

 

 

ಆಕಾಶದ  ನೀಲ  ವರ್ಣ  ಪ್ರತಿಬಿಂಬಿಸುತ್ತಿತ್ತು

ಆ  ಕಡಲ  ನೀರಲ್ಲಿ;  ನನ್ನೆಲ್ಲಾ  ಸವಿಗನಸುಗಳನ್ನು

ಮೆಲುಕುಹಾಕುತ್ತಿತ್ತು  ಮನಸ್ಸಿನಲ್ಲಿ|

 

 

ಅವಸರವಸರದಿ  ದಡ  ಸೇರುತ್ತಿದ್ದ  ಅಲೆಗಳು

ನಿಶ್ಚಿಂತವಾಗಿಸಿದವು  ನನ್ನನ್ನು  ಮರೆ

ಮಾಚಿದವು  ನನ್ನೆಲ್ಲಾ  ದುಗುಡಗಳನ್ನು|

 

 

ಕಿನಾರೆಯಿಂದ  ದೂರ ದೂರ ಸಾಗುತ್ತಿದ್ದ

ಪ್ರವಾಸಿ ದೋಣಿಗಳು ಹೊತ್ತೊಯ್ಯುತ್ತಿದ್ದವು

ನನ್ನ ಮನದ ನೆನಪಿನ ನಾವೆಯನ್ನು|

 

 

ಅದರ  ತೀರದಿ  ನಡೆದಾಗ  ನೆನಪಾಗುತ್ತಿತ್ತು

ಬಾಲ್ಯದ  ಹುಡುಗಾಟ;  ದೊರಕಿತ್ತು  ಒಂದು

ರೀತಿಯ  ಮನೋಲ್ಲಾಸ|

 

 

ಪುಟ್ಟ ಮಕ್ಕಳ ಮಣ್ಣಿನಾಟ, ಮಣ್ಣಿನಿಂದ

ನಿರ್ಮಿತವಾದ ಗುಡಿಗಳು ಕಣ್ಮುಂದೆ ತಂದು

ನಿಲ್ಲಿಸಿದ್ದವು ಮರೆಯಾಗಿದ್ದ ನನ್ನ ಬಾಲ್ಯವನ್ನು|

 

 

ಬೇಲ್‍ಪುರಿ, ಪಾನೀಪುರಿ, ಐಸ್‍ಕ್ರೀಮ್‍ಗಳನ್ನು

ಸವಿಯುತ್ತಾ ಮಕ್ಕಳೊಂದಿಗೆ ನೀರಾಟವಾಡುತ್ತಾ

ಬೆರೆತುಹೋದೆನು ಮಕ್ಕಳಲ್ಲಿ|

 

 

 

ಕಡಲಲೆಗಳ ಆರ್ಭಟಕ್ಕೆ ಕಿವಿಗೊಟ್ಟು

ಬೆಂಡಾಗಿ ಬೆಳೆದ ಕಲ್ಪವೃಕ್ಷಗಳು ಸಾಕ್ಷಿಯಾಗಿದ್ದವು

ಸಹಬಾಳ್ವೆ-ಸಹಜೀವನಕ್ಕೆ|

 

 

ಪಡುವಣ  ತೀರದಿ  ಕೆಂಪಾಗಿದ್ದನು

ಸೂರ್ಯ; ಮುಳುಗಲು  ಅಣಿಯಾಗುತ್ತ

ವಕ್ರನೋಟದಿಂದ  ನಮ್ಮನ್ನೇ ನೋಡುತ್ತಿದ್ದ|

 

 

ಉಲ್ಲಾಸಭರಿತವಾಗಿತ್ತು  ಆ  ಭೋರ್ಗರೆಯುವ  ಕಡಲಿನ  ನೋಟ

ಮುದನೀಡಿತ್ತು   ಆ  ಕಡಲ ಕಿನಾರೆಯಲ್ಲಿನ ಮೋಜು

ಮುದನೀಡಿತ್ತು  ಆ  ಮುಸ್ಸಂಜೆಯ  ಬೀಚ್  ಪಯಣ|

 

 

ರಚನೆಃ ಧನರಾಜ್ ಪರ್ಕಳ

 

 

 

Rating
No votes yet