ಸಾಧಕನಿಗೆ ಬುದ್ಧನ ಮಾತುಗಳು

ಸಾಧಕನಿಗೆ ಬುದ್ಧನ ಮಾತುಗಳು

 


ಹಿಂದಿನದನ್ನ ಕೆದಕಿ, ಅದೇ ಯೋಚನೆಗಳಲ್ಲಿ ಅಂಡಲೆಯದೇ


ಭವಿಶ್ಯದ ಕನಸುಗಳಲ್ಲೇ ತೇಲಾಡದೇ


ವರ್ತಮಾನದಲ್ಲಿ ಏಕಾಗ್ರ ಚಿತ್ತವಿದ್ದರೆ


ಭಯದಿಂದ ಮುಕ್ತಿ, ಆತ್ಮದ ಶಾಂತಿ;


 


ದುಃಖಗಳಲ್ಲಿ ಭಾಗಿಯಗದೇ


ದುಃಖದ ಮೂಲ ಗೊಚರಿಸುವುದಿಲ್ಲ, ಅರಿವಾಗುವುದಿಲ್ಲ


ಅರಿವಿರದೆ ಮುಕ್ತಿಯ ಬಾಗಿಲು ತೆರೆಯುವುದಿಲ್ಲ;


 


ಭಯ-ದುಃಖಗಳ ಮೂಲ, ಬಯಕೆ


ಬಯಕೆಯ ಮೂಲ ಸ್ವಾರ್ಥ


ಸ್ವಾರ್ಥದ ಮೂಲ ಸಮಾಜ, ನೆನಪಿರಲಿ;


 


ಮಾತು ಹಿತ ಮಿತ, ವಿಚಾರಪೊರಿತ


ಜ್ನಾನಯುತ, ಆನಂದದಾಯಕವಾಗಿರಲಿ,


ಮಿತ ಆಹಾರ, ಸ್ವಾವಲಂಬನೆ, ಏಕಾಂತ


ಏಕಾಂತದಲ್ಲಿ ದ್ಯಾನ, ಸಮಚಿತ್ತ


ಯೊಗ್ಯ ವ್ರುತ್ತಿ- ಪ್ರವ್ರುತ್ತಿ 


ವ್ಯಸನಗಳಿಂದ ಮುಕ್ತ


ಸುಖಬೊಗಗಳಿಂದ ವಿಮುಕ್ತ


ಜ್ನಾನಕ್ಕೆ ಪರಮಾಪ್ತ, ಉನ್ನತಿಗೆ ಸೊಕ್ತ;


 


ಸದಾ ಜಾಗ್ರುತನಾಗಿರು


ಆಲಸ್ಯ- ಆಲಕ್ಸ್ಯವನ್ನ ಕೊಲ್ಲು


ಪೊರಾ ಪ್ರಪಂಚ ಸ್ವಯಂ ನಿನ್ನದೇ


ನಿನಗೆ ಬೇಕಾದದ್ದೆಲ್ಲವೊ ನಿನ್ನೊಳಗೇ ಇದೆ


ನಿನ್ನಲ್ಲಿ ನೀ ನಂಬಿಕೆ ಇಟ್ಟರೆ,


ಬುದ್ಧನಾಗುವ ದಾರಿಯೊ ಅದೇ.


 


 


 


 


 


 


 


 


 

Comments