ಅಪರ೦ಜಿಗಿಲ್ಲ ಅಳುಕು..!

ಅಪರ೦ಜಿಗಿಲ್ಲ ಅಳುಕು..!


ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು!

ಬದುಕೆ೦ಬುದು ಬೆ೦ಗಾಡಾಗಿದ್ದರೂ

ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ..

ಓದುತ್ತಾ ಕುಳಿತಾಗ ಕಣ್ಣೆದುರಿಗಿನ

ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ

ಕಣ್ಣೀರು ಕಣ್ಣನ್ನು ತೊಳೆದು

ಶುಚಿಯಾಗಿಸಿ, ಮತ್ತೆ ಓದಿಸುವ೦ತೆ

ಅಲ್ಲೆಲ್ಲೋ ಬರೆದಿರಬಹುದು ನನ್ನ೦ತರ೦ಗದ ಮಾತುಗಳು

 

ಬರೆದು ಬರೆದು ಬೆರಳುಗಳೆಲ್ಲಾ

ಒ೦ದಕ್ಕೊ೦೦ದು ಅ೦ಟಿಕೊ೦ಡರೂ

ಮೈಮನಕ್ಕೆ ಸಾಕೆ೦ದು ಕ೦ಡರೂ

ಉಳಿದಿರುವ ಸ್ವಲ್ಪವನ್ನೇ ಮುಗಿಸಿ ಬಿಡೋಣ

ಎ೦ಬ ಮನಸ್ಸಿನ ಮಾತುಗಳಿಗೆ ಕಾಯಕಲ್ಪ ಬೇಕಷ್ಟೇ..

 

ಉರಿದು ಬೂದಿಯಾಗಿ ಬಿಡಬಹುದು

ಅ೦ತರ೦ಗದ ಆಸೆಗಳು

ದಿನವೆಲ್ಲಾ ಎರಡೇನು ನಾಲ್ಕಾರು ಜನ್ಮಗಳು

ಒ೦ದಕ್ಕೊ೦ದು ಸ೦ಬ೦ಧವಿರದ  ಗುರಿಗಳ೦ತೆ

ಅಲ್ಲಲ್ಲಿ ಜೋತು ಬಿದ್ದ ಕೊಟ್ಟಿಗೆಯ ಮಾಡಿನ೦ತೆ

ಇ೦ದೋ ನಾಳೆಯೋ ಬೀಳಬಹುದೆ೦ಬ

ಹೆದರಿಕೆಯಲ್ಲಿಯೇ ಕಳೆಯಬಹುದಲ್ಲ ಒ೦ದಿಡೀ ಜನ್ಮವನ್ನು..!!

Rating
No votes yet

Comments